ಪತ್ರಿಕಾ ಪ್ರಕಟಣೆ

“ಪತ್ರಿಕಾ ಪ್ರಕಟಣೆ”

ಕೆಜಿಎಫ್ : ಗಣತಂತ್ರ ಮೌಲ್ಯಗಳ ಜೊತೆಗೆ ದೇಶಾಭಿಮಾನದಿಂದ ಬದುಕಲು ಎಸ್ಪಿ ಭಗವಾನ್‌ದಾಸ್ ಕರೆ

ಕೆಜಿಎಫ್., ಜ. ೨೬ :

ಪ್ರತಿಯೊಬ್ಬರು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಗಣತಂತ್ರ ಮೌಲ್ಯಗಳ ಅಳವಡಿಸಿಕೊಳ್ಳುವ ಮೂಲಕ ದೇಶಾಭಿಮಾನ ಮೆರೆಯುವ ಮೂಲಕ ರಾಷ್ಟ್ರದ ಸರ್ವತೋಮುಖಾಭಿವೃದ್ದಿಗೆ ಪಣ ತೊಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಆರ್.ಭಗವಾನ್‌ದಾಸ್ ಅವರು ಕರೆ ನೀಡಿದರು.
ಅವರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಂಗಳವಾರದಂದು ಬೆಳಿಗ್ಗೆ ೦೮.೦೦ ಗಂಟೆಗೆ ೬೭ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಆರ್.ಭಗವಾನ್‌ದಾಸ್ ಅವರು ಮಾತನಾಡಿ, ಪ್ರತಿಯೊಬ್ಬ ಜನಸಾಮಾನ್ಯರಿಗೂ ದೇಶಾಭಿಮಾನವಿರಬೇಕು, ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ದೇಶದ ಬಗ್ಗೆ ಅಕ್ಕರೆ ಮೂಡಿಸುವ ಕಾರ್ಯವಾಗಬೇಕು, ಎಲ್ಲರೂ ಕೈಗೂಡಿಸಿದ್ದಲ್ಲಿ ದೇಶದ ಸರ್ವತೋಮುಖಾಭಿವೃದ್ದಿ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ೧೯೪೭ ರ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಪಡೆಯಿತು. ೧೯೪೭ ರ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಬಂದರೂ ಸಹಾ ಭಾವನಾತ್ಮಕವಾಗಿ ಗಣರಾಜ್ಯ ವ್ಯವಸ್ಥೆ ಜಾರಿಗೆ ಬಂದಿದ್ದು ೧೯೫೦ ರ ಜನವರಿ ೨೬ ರಂದು ಅಂದಿನಿಂದ ಪ್ರತಿವರ್ಷ ಜನವರಿ ೨೬ ಗಣರಾಜ್ಯ ದಿನವಾಗಿ ಆಚರಿಸಲ್ಪಡುತ್ತಿದೆ. ಸ್ವಾತಂತ್ರ್ಯ ತಂದು ಕೊಡಬೇಕೆಂಬ ಧ್ಯೇಯದಿಂದ ಶಾಂತಿಯುತ ಚಳುವಳಿ ರೂಪದ ಹೋರಾಟದ ಮುಂಚೂಣಿಯಲ್ಲಿದ್ದವರು, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸುಭಾಷ್‌ಚಂದ್ರ ಬೋಸ್, ಡಾ: ಬಿ.ಆರ್. ಅಂಬೇಡ್ಕರ್, ಭಗತ್‌ಸಿಂಗ್, ಲಾಲ್‌ಬಹದ್ದೂರ್‌ಶಾಸ್ತ್ರಿ, ಬಾಲ ಗಂಗಾಧರನಾಥ ತಿಲಕ್, ಮುಂತಾದ ಗಣ್ಯರನ್ನು ಸ್ಮರಿಸಿ ಗೌರವಿಸುವ ಸುದಿನವಾಗಿದೆಯೆಂದು ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಆರ್.ಭಗವಾನ್‌ದಾಸ್ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ, ಸಹಾಯಕ ಆಡಳಿತಾಧಿಕಾರಿ ವಿ. ವಿಶ್ವನಾಥ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಎಂ.ಡಿ. ಲಕ್ಷ್ಮೀನಾರಾಯಣ, ಎಂ.ಎಸ್.ಪವನ್‌ಕುಮಾರ್, ಎಸ್.ಆರ್.ಜಗದೀಶ್, ಎನ್.ಉಮಾಶಂಕರ್ ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿಗಳು ಹಾಜರಿದ್ದರು.
ಆರ್.ಪಿ.ಐ. ಕೆ.ಆರ್.ರಘು ಅವರ ನೇತೃತ್ವದಲ್ಲಿ ಆಕರ್ಷಕ ರೀತಿಯಲ್ಲಿ ಪಥಸಂಚಲನ, ಡಿ.ಎ.ಆರ್. ಪೊಲೀಸ್ ವಾದ್ಯವೃಂದದಿಂದ ರಾಷ್ಟ್ರಗೀತೆ ಗಾಯನ, ಹಾಗೂ ಪೊಲೀಸ್ ಕುಸುಮಗಳು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

26 KGF.01

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s