ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ
ಕೆ.ಜಿ.ಎಫ್ : ಕಾಣೆಯಾಗಿರುವ ಮಕ್ಕಳ ಸಂರಕ್ಷಣೆಯ ಕುರಿತು ವಿಶೇಷ ಕಾರ್ಯಾಗಾರ

ಕೆಜಿಎಫ್ ಪೊಲೀಸ್ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗಳಿಗೆ ಕಾಣೆಯಾಗಿರುವ ಮಕ್ಕಳ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಆಪರೇಷನ್ ಸ್ಮೈಲ್ – ೨ ಕಾರ್ಯಕ್ರಮದ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಸೋಮವಾರದಂದು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಪೊಲೀಸ್ ಅಧೀಕ್ಷಕರಾದ ಹೆಚ್.ಆರ್. ಭಗವಾನ್‌ದಾಸ್ ಅವರು ಅಧ್ಯಕ್ಷತೆ ವಹಿಸಿದ್ದು, ಕೆಜಿಎಫ್‌ನ ಬಾಲಮಂದಿರ ಅಧೀಕ್ಷಕ ರಮೇಶ್, ವಿನೋದ್, ಮಕ್ಕಳ ಸಂರಕ್ಷಣಾಧಿಕಾರಿಗಳಾದ ಸರಸ್ವತಮ್ಮ, ನಿಕೋಲಸ್ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾತನಾಡಿದರು.
ಕಾರ್ಯಕ್ರಮವನ್ನುದ್ದೇಶಿಸಿ, ಎಸ್ಪಿ ಭಗವಾನ್‌ದಾಸ್ ಅವರು ಮಾತನಾಡಿ, ಮಕ್ಕಳ ಕಳ್ಳಸಾಗಾಣಿಕೆ, ಕಾಣೆಯಾಗುವ ಮಕ್ಕಳ ಸಂರಕ್ಷಣೆ ಸಂಬಂಧ ಕ್ಷೀಪ್ರವಾಗಿ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಮಕ್ಕಳನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಸಂಬಂಧಪಟ್ಟ ಪೋಷಕರಿಗೆ ಒಪ್ಪಿಸಲು ಸಾಧ್ಯವಾಗುವುದೆಂದರು. ಮಕ್ಕಳ ಕಳ್ಳಸಾಗಾಣಿಕೆ, ಕಾಣೆಯಾದ ಮಕ್ಕಳ ಸಂರಕ್ಷಣೆ ಸಂಬಂಧ ಪೋಷಕರು, ಸಾರ್ವಜನಿಕರ ಸಹಕಾರದಿಂದಲೇ ಸಾಧ್ಯ, ಮಕ್ಕಳ ರಕ್ಷಣೆಗಾಗಿ, ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅತ್ಯವಶ್ಯಕವಾಗಿದೆಯೆಂದರು. ಮಕ್ಕಳ ರಕ್ಷಣೆಗೆ ಇಲ್ಲಿನ ಪೊಲೀಸ್ ಅಧಿಕಾರಿಗಳು ಪತ್ತೆ ಕಾರ್ಯಾಚರಣೆಯನ್ನು ಕ್ಷಿಪ್ರವಾಗಿ ನಡೆಸುವುದರ ಬಗ್ಗೆ ಅಗತ್ಯ ಕ್ರಮವಿಡುವಂತೆ ಎಸ್ಪಿ ಭಗವಾನ್‌ದಾಸ್ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಎನ್. ವೆಂಕಟಾಚಲಪತಿ, ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಅಧಿಕಾರಿ, ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಪೋಷಣಾ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.
ಮೊದಲಿಗೆ ವಿಕ್ರಂ ಶ್ರೀನಿವಾಸ್ ಅವರಿಂದ ಪ್ರಾರ್ಥನೆ, ಡಿವೈಎಸ್ಪಿ ಪುಟ್ಟಮಾದಯ್ಯ ಅವರಿಂದ ಸ್ವಾಗತ, ಡಿಸಿಐಬಿ ನಿರೀಕ್ಷಕ ಕೃಷ್ಣಾ ಅವರಿಂದ ಪ್ರಾಸ್ತಾವಿಕ ಭಾಷಣ, ಸಿಪಿಐ ಎಸ್.ಆರ್. ಜಗದೀಶ್ ಅವರಿಂದ ನಿರೂಪಣೆ, ಡಿಎಸ್‌ಬಿ ನಿರೀಕ್ಷಕ ಎಂ.ಡಿ.ಲಕ್ಷ್ಮೀನಾರಾಯಣ ಅವರಿಂದ ವಂದನೆಗಳಾದವು.

18 KGF 01 (02)

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s