ದಿನದ ಅಪರಾಧಗಳ ಪಕ್ಷಿನೋಟ 16 ನೇ ಜನವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:15.01.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 16.01.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌01

     ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.01.2016 ರಂದು ದೂರುದಾರರಾದ ಶ್ರೀ. ನಂದಾ ಬಿನ್‌  ರಾಮಚಂದ್ರಯ್ಯ,  ಬಜಾರ್‌ ಸ್ಟೀಟ್‌, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ  ದಿನಾಂಕ 11.02.2008 ರಂದು ಹೈದರಾಬಾದಿನ ಅಂಬಿಯನ್ಸ್ ಪೋರ್ಟ್ ಕ್ಲಬ್ ಹೌಸ್ ನಲ್ಲಿ  ಸಂಪ್ರದಾಯದಂತೆ ಆರೋಪಿ ಶ್ರೀರಾಮಪೈದ ಹೈದರಾಬಾದ್‌ ರವರಿಗೂ  ಮತ್ತು ದೂರುದಾರರ ಮಗಳಾದ ಅರ್ಚನ ಎಂಬುವರಿಗೂ  ಮದುವೆ ಮಾಡಿದ್ದು,  ಭಾರತೀಯ ಪಾಸ್ ಪೋರ್ಟ್ ನ್ನು ಆರೋಪಿ ಹೊಂದಿದ್ದು ಇದನ್ನು ಮದುವೆ ಸಂದರ್ಭದಲ್ಲಿ ತೋರಿಸಿ ಮದುವೆಯ ರಿಜಿಸ್ಟ್ರೇಷನ್ ಗೆ ಬಳಸಿ  2009 ರಲ್ಲಿ ಆರೋಪಿ  ಯು.ಎಸ್.ಎ ಪೌರತ್ವ ಹೊಂದಿದ್ದರೂ  ಸಹ ಭಾರತೀಯ ಚುನಾವಣೆ ಗುರ್ತಿನ ಕಾರ್ಡ್ ನ್ನು ಪಡೆದುಕೊಂಡು  ಆರೋಪಿಗೆ ಒಂದು ಕಣ್ಣು ಕಾಣಿಸದೇ ಇದ್ದರೂ ಸಹ ಮದುವೆ ಸಮಯದಲ್ಲಿ ಮುಚ್ಚಿಟ್ಟು ಮದುವೆಯಾದ ನಂತರ ದೂರುದಾರರ ಮಗಳು ಅರ್ಚನ ಕಪ್ಪಾಗಿದ್ದಾಳೆಂದು ನೋಡಲು ಸುಂದರವಾಗಿರುವುದಿಲ್ಲವೆಂದು  ಆರೋಪಿಯು ದೂರುದಾರರ ಮಗಳಾದ  ಅರ್ಚನ ಜೊತೆ  ಸಂಸಾರ ಮಾಡದೆ  ನಂಬಿಸಿ ಮೋಸ ಮಾಡಿರುತ್ತಾನೆ.

-ಹಲ್ಲೆ :ಇಲ್ಲ

 -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 02

 ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.01.2016 ರಂದು ದೂರುದಾರರಾದ ಶ್ರೀ. ಅಂಜನೇಯರೆಡ್ಡಿ ಬಿನ್‌  ವೆಂಕಟರಾಮರೆಡ್ಡಿ, ಐನೋರಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ   ದಿನಾಂಕ 15.01.2016 ರಂದು ದೂರುದಾರರಾದ ಆಂಜನೇಯರೆಡ್ಡಿ ರವರು ಅವರ ಕ್ವಾಲೀಸ್ ವಾಹನ ಸಂಖ್ಯೆ-KA-05,Z-5918 ರಲ್ಲಿ ಅವರ ತಮ್ಮ ಸಂತೋಷ್, ಹಾಗೂ ಸಂಬಂಧಿಕರಾದ ವೆಂಕಟೇಶ್ ರೆಡ್ಡಿ,  ರಮೇಶ್ ರೆಡ್ಡಿ  ಮತ್ತು ಯಾಕೂಬ್ ರವರುಗಳೊಂದಿಗೆ ಕೋಲಾರಕ್ಕೆ ಗಾರೆ ಕೆಲಸಕ್ಕಾಗಿ ಹೋಗುತ್ತಿದ್ದಾಗ, ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆಯ ಹಂಚಾಳ ಗೇಟ್ ಬಳಿ ರಸ್ತೆ ಹಂಪ್ಸ್ ಬಂದಾಗ ತನ್ನ ಕಾರನ್ನು ನಿಧಾನವಾಗಿ ಚಲಾಯಿಸುತ್ತಿದ್ದಾಗ ಹಿಂದುಗಡೆಯಿಂದ  ಅಂದರೆ ಬಂಗಾರಪೇಟೆ ಕಡೆಯಿಂದ ಬರುತ್ತಿದ್ದ ನಜೀರಿಯಾ ಖಾಸಗಿ ಬಸ್ ಸಂ-KA-07,A-2275 ರ ಚಾಲಕನು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಕಾರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಸದರಿ ಕಾರು ರಸ್ತೆಯಲ್ಲಿ ಪಲ್ಟಿ ಹೊಡೆದು ದೂರುದಾರರಿಗೆ ಬಲಗೈಗೆ ಬಲವಾದ ಪೆಟ್ಟು ಬಿದ್ದು ರಕ್ತಗಾಯಗಳಾಗಿದ್ದು, ಕಾರಿನಲ್ಲಿದ್ದ ಸಂತೋಷ್ ಮತ್ತು ವೆಂಕಟೇಶ್ ರೆಡ್ಡಿ  ರವರುಗಳಿಗೆ ಪೆಟ್ಟು ಬಿದ್ದು ರಕ್ತ ಗಾಯಗಳಾಗಿರುತ್ತೆ. ಆರೋಪಿ ಬಸ್ ನ ಚಾಲಕನು ಬಸ್ಸ ನ್ನು ಸ್ಥಳದಲ್ಲಿಯೇ  ನಿಲ್ಲಿಸಿ ಓಡಿ ಹೋಗಿರುತ್ತಾರೆ.  

       ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.01.2016 ರಂದು ದೂರುದಾರರಾದ ಶ್ರೀ. ಮಂಜುನಾಥ ಬಿನ್‌   ವೆಂಕಟೇಶಪ್ಪ  ಅಲಂಬಾಡಿ ಜೋತನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 15.01.2016 ರಂದು ದೂರುದಾರರ ಸ್ನೇಹಿತನಾದ ಇಂದ್ರೇಶ್ ಬಿನ್ ವೆಂಕಟೇಶಪ್ಪ 22 ವರ್ಷ, ತಮ್ಮೇನಹಳ್ಳಿ ಗ್ರಾಮ ರವರೊಂದಿಗೆ ದ್ವಿಚಕ್ರ ವಾಹನ ಕೆ ಎ 53 ಆರ್ 0818 ರಲ್ಲಿ ಹಿಂಬದಿಯಲ್ಲಿ ಕುಳಿತು ಪೊಲೇನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ದ್ವಿಚಕ್ರ ವಾಹನವನ್ನು ಇಂದ್ರೇಶ್ ಚಲಾಯಿಸಿಕೊಂಡು ಕಾಮಸಮುದ್ರಂ – ತೊಪ್ಪನಹಳ್ಳಿ ರಸ್ತೆಯ ಚಿನ್ನಕಾಮನಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ಆರೋಪಿ ಮಂಜು ದೊಡ್ಡಬೊಮ್ಮನಹಳ್ಳಿ ಎಂಬುವರು ಎದುರುಗಡೆಯಿಂದ ಆತನ ದ್ವಿಚಕ್ರ ವಾಹನ ಸಂಖ್ಯೆ K A 08 Q 1299 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರಿಗೂ ಮತ್ತು ಹಿಂದೆ ಕುಳಿತ್ತಿದ್ದ ಇಂದ್ರೇಶ ವಾಹನ ಸಮೇತ ಕೆಳಗೆ ಬಿದ್ದು  ರಕ್ತ ಗಾಯವಾಗಿರುತ್ತೆ. 

-ಭದ್ರತಾ ಕಾಯ್ದೆ : ಇಲ್ಲ

 -ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s