ದಿನದ ಅಪರಾಧಗಳ ಪಕ್ಷಿನೋಟ 15 ನೇ ಜನವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:14.01.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 15.01.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :01

       ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ 14.01.2016 ರಂದು ಸಂಜೆ ಸುಮಾರು 6.00 ಗಂಟೆಗೆ ಬೆಮಲ್ ನಗರದ ಸೂರ್ಯ ಬಾರ್ ಮುಂದೆ ದೂರುದಾರರಾದ ಶ್ರೀ. ಶ್ರೀನಿವಾಸ, ಪಾರಾಂಡಹಳ್ಳಿ ಗ್ರಾಮ ರಾಬರ್ಟ್‌‌ಸನ್‌ಪೇಟೆ ರವರೊಂದಿಗೆ ಆರೋಪಿಯಾದ ಸೆಲ್ವ ವಾಸ ಡಿ.ಕೆ.ಪ್ಲಾಂಟೇಷನ್, ಬೆಮಲ್ ನಗರ ರವರು ಮೊಬೈಲ್ ಫೋನ್  ವಿಚಾರವಾಗಿ ಜಗಳ ಕಾದು ಕೆಟ್ಟಮಾತುಗಳಿಂದ ಬೈದು, ಒಂದು ಕಲ್ಲನ್ನು ತೆಗೆದುಕೊಂಡು ದೂರುದಾರರ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ       

-ಭದ್ರತಾ ಕಾಯ್ದೆ : ಇಲ್ಲ

 -ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 15.01.2016 ದೂರುದಾರರಾದ ಶ್ರೀ.  ಆಶೋಕ ರೆಡ್ಡಿ ಬಿನ್‌  ಮುನಿಸ್ವಾಮಿ ರೆಡ್ಡಿ,  ದೇಶಿಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ  ದಿನಾಂಕ 09.01.2016 ರಂದು ಬೆಳಿಗ್ಗೆ 7.40 ಗಂಟೆ ಸಮಯದಲ್ಲಿ ದೂರುದಾರರ ಮಗ  ಲಿಖಿತ್ ರೆಡ್ಡಿ , 15 ವರ್ಷ ರವರು  ಅವರ ವಾಸದ ಮನೆಯಲ್ಲಿ ಖಾಲಿಯಾದ ಗ್ಯಾಸ್ ಸಿಲೆಂಡರ್ ನ್ನು ಬದಲಾವಣೆ ಮಾಡುವ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಡಿ ಪ್ಲೂರಲ್ ಮೆಲಿಟ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಪಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸುಟ್ಟ ಗಾಯಗಳ ದೆಸೆಯಿಂದ  ಈ ದಿನಾಂಕ 15.01.2016 ರಂದು ಬೆಳಿಗ್ಗೆ 6.10 ಗಂಟೆ ಸಮಯದಲ್ಲಿ ಲಿಖಿತ್ ರೆಡ್ಡಿ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s