ದಿನದ ಅಪರಾಧಗಳ ಪಕ್ಷಿನೋಟ 10 ನೇ ಜನವರಿ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:10.01.2016 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು: ‌ಇಲ್ಲ

-ಕಳವು ಪ್ರಕರಣ: ಇಲ್ಲ

-ಸಾಮಾನ್ಯ ಕಳುವು: 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಮಾನನ್ಯ ಕಳವಿಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.01.2016 ರಂದು ದೂರುದಾರರಾದ ಶ್ರೀ. ಗುರುವಾರೆಡ್ಡಿ ಬಿನ್‌ ಪಾಪಿರೆಡ್ಡಿ  ದಿನ್ನಕೊತ್ತೂರು ಗ್ರಾಮ ರವರು ನೀಡಿದ ದೂರಿನಲ್ಲಿ, ದಿನಾಂಕ:06.12.2015 ರಂದು ರಾತ್ರಿ ಯಾರೋ ಕಳ್ಳರು ಕೋಡಹುರ್ಕಿ ಗ್ರಾಮದಲ್ಲಿರುವ ಅವರ ಜಮೀನಿನ ಸರ್ವೆ ಸಂಖ್ಯೆ-25 ರಲ್ಲಿ ಕೊಳವೆ ಬಾವಿಗೆ ಅಳವಡಿಸಿದ್ದ ಪ್ಯಾನಲ್ ಬೋರ್ಡನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

 -ಜೂಜಾಟ ಕಾಯ್ದೆ : ಇಲ್ಲ

 -ಅಪಘಾತಗಳು : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.01.2016 ರಂದು ದೂರುದಾರರಾದ ಶ್ರೀಮತಿ ಸುಕನ್ಯ ಕೋಂ  ರಾಮಚಾರಿ. ಬೋರಿಲಾಲ್‌ಪೇಟೆ ಕೆ,ಜಿ,ಎಫ್‌ ರವರು ನೀಡಿದ ದೂರಿನಲ್ಲಿ ದಿನಾಂಕ 09.01.2016 ರಂದು ಸಂಜೆ ಸುಮಾರು 07-00 ಗಂಟೆಯಲ್ಲಿ ದೂರುದಾರರು ಮತ್ತು ದೂರುದಾರರ  ಗಂಡನಾದ ರಾಮಾಚಾರಿ ಹಾಗೂ ಆತನ ಸ್ನೇಹಿತನಾದ ಪರಮೇಶ್ವರಚಾರಿ ರವರು ಅವರ ದ್ವಿಚಕ್ರ ವಾಹನ ಪ್ಯಾಶನ್ ಪ್ರೋ ಸಂಖ್ಯೆ ಕೆ.ಎ 08 ಆರ್ 2180 ರಲ್ಲಿ ಕ್ಯಾಸಂಬಳ್ಳಿ ಯಲ್ಲಿ ಕೆಲಸ ಮುಗಿಸಿಕೊಂಡು ಕೆಜಿಎಫ್ ಗೆ ವಾಪಸ್ಸು ಬರಲು ಕೆಜಿಎಫ್-ಕ್ಯಾಸಂಬಳ್ಳಿ ಮುಖ್ಯೆ ರಸ್ತೆಯ ಗರುಡಾದ್ರಹಳ್ಳಿಯ ಸಮೀಪ ರಸ್ತೆಯಲ್ಲಿ ಬರುತ್ತಿದ್ದಾಗ ಮುಂದುಗಡೆ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಾಮಾಚಾರಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಟ್ರ್ಯಾಕ್ಟರ್  ಡಿಕ್ಕಿ ಹೊಡೆದು  ರಾಮಾಚಾರಿಯವರಿಗೆ ತಲೆಯ ಹಣೆಯ ಎಡಭಾಗದಲ್ಲಿ ,ಬಲ ಭುಜದ ಮೇಲೆ ಹಾಗೂ ಕಿವಿಯಲ್ಲಿ ತೀವ್ರ ಸ್ವರೂಪದ ಗಾಯಗಳಾಗಿ ಮೃತಪಟ್ಟಿರುತ್ತಾನೆ ,ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಪರಮೇಶ್ವರ ರವರಿಗೆ ಬಲಕಾಲಿನ ಮೊಣಕಾಲು ,ಬಲಕಾಲು ತೊಡೆ ಮೇಲೆ ,ಬಲ ಕೈ ಮೇಲೆ ರಕ್ತ ಗಾಯಗಳಾಗಿರುತ್ತೆ ,ಟ್ರ್ಯಾಕ್ಟರ್ ಚಾಲಕ ಆರೋಪಿ ಟ್ರ್ಯಾಕ್ಟರ್ ಸನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.01.2016 ರಂದು ದೂರುದಾರರಾದ ಶ್ರೀಮತಿ  ಲಕ್ಷ್ಮೀದೇವಿ ಗುಲ್ಲಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ  ಮಮತಾ 22 ವರ್ಷ ರವರಿಗೆ ಸುಮಾರು ಮೂರು ವರ್ಷಗಳಿಂದ ಹೊಟ್ಟೆನೋವು ಇದ್ದು, ಆಸ್ವತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ವಾಸಿಯಾಗದೇ ಇದ್ದುದರಿಂದ ಮತ್ತು ಮದುವೆಯಾದಗಿನಿಂದ ಮಕ್ಕಳಾಗಿಲ್ಲವೆಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09.01.2016 ರಂದು ದೂರುದಾರರ ಹೊಲದ ಹತ್ತಿರದ ಹುಣಸೆಮರಕ್ಕೆ ಮಮತ ರವರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s