ದಿನದ ಅಪರಾಧಗಳ ಪಕ್ಷಿನೋಟ 10ನೇ ಜನವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:09.01.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 10.01.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸ್ ಬಿನ್ ಪಾಪಯ್ಯ, ಕಾರಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ,  ದಿನಾಂಕ 09.01.2016 ರಂದು ರಾತ್ರಿ 9.00 ಗಂಟೆಯಲ್ಲಿ ಯಳಬುರ್ಗಿ ಗ್ರಾಮದ ಶ್ರೀ ವೆಂಕಟೇಶ್ವರ  ದೇವಾಲಯದ ಆರ್ಚಕರು ದೇವಸ್ಥಾನದ ಬಾಗಿಲಿಗೆ  ಬೀಗವನ್ನು ಹಾಕಿಕೊಂಡು ಮನೆಗೆ ಹೋಗಿ,  ದಿನಾಂಕ 10.01.2016 ರಂದು ಬೆಳಿಗ್ಗೆ 6.00 ಗಂಟೆಗೆ ದೇವಸ್ಥಾನಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು  ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ, 2 ಹುಂಡಿಗಳನ್ನು ಹೊಡೆದು  ಸುಮಾರು 1,00,000/- ರಿಂದ 1,50,000/- ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡುಗ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲೀಲಾ ಕೋಂ ಸುರೇಶ್, ಕಾವೇರಿ ನಗರ, ಬೆಮೆಲ್ ನಗರ ರವರು ನೀಡಿದ ದೂರಿನಲ್ಲಿ, ದೂರುದಾರರ ಮಗನಾದ  15 ವರ್ಷದ  ಎಸ್.ಪವನ್ ಕುಮಾರ್   ರವರು ದಿನಾಂಕ 30.10.2015 ರಂದು ಬೆಳಿಗ್ಗೆ ಸುಮಾರು 09.30 ಗಂಟೆ ಸಮಯದಲ್ಲಿ ಶಾಲೆಗೆ  ಹೋಗಿ ಬರುವುದಾಗಿ ಮನೆಯಿಂದ ಬ್ಯಾಗ್ ಸಮೇತ ಹೋದವನು ಇದುವರೆಗೂ  ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ 02 ಭದ್ರತಾ ಕಾಯ್ದೆ ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ: 09.01.2016 ರಂದು ರಾತ್ರಿ  ಪಿ.ಎಸ್.ಐ, ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯ ರವರು ಗಸ್ತು ಮಾಡುತ್ತಿರುವಾಗ ರಾತ್ರಿ 3.30 ಗಂಟೆಯಲ್ಲಿ ಗೀತಾ ರಸ್ತೆಯಲ್ಲಿರುವ ಪ್ರವೀಣ್ ಎಂಟರ್ ಪ್ರೈಸಸ್ ಅಂಗಡಿಯ ಬಳಿ ಕತ್ತಲಿನಲ್ಲಿ ಪವನ್ ಕುಮಾರ್ @ ಉಡೆ ಬಿನ್ ಉದಯ್ ಬೀರ್ ಸಿಹಾ, ವಯಸ್ಸು 24 ವರ್ಷ, ಜಾಟ್ ಜನಾಂಗ, ಕೂಲಿ ಕೆಲಸ ವಾಸ ಜಿಲಾನ್ಪುರ್ ಗ್ರಾಮ, ಸೊನಾಯಿ ಅಂಚೆ, ಮರ್ಸಾನ್ ತಾಲ್ಲೂಕು, ಹತ್ರಾಸ್ ಜಿಲ್ಲೆ, ಉತ್ತರಪ್ರದೇಶ ಎಂಬುವನು ತನ್ನ ಇರುವಿಕೆಯನ್ನು ಮರಮಾಚಿಕೊಂಡು ಕುಳಿತ್ತಿದ್ದವನು ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದು, ಆತನನ್ನು ಹಿಡಿದು, ಆಸಾಮಿಯು ಸಂಜ್ಞೆಯ ಅಪರಾಧ ಮಾಡುವ ಉದ್ದೇಶದಿಂದ ಅಲ್ಲಿ ಹೊಂಚು ಹಾಕುತ್ತಿರುವುದಾಗಿ ಅನುಮಾನ ಬಂದಿದ್ದರಿಂದ ಸದರಿ ಆಸಾಮಿಯನ್ನು   ಪ್ರಕರಣ ದಾಖಲಿಸಿರುತ್ತೆ.

ದಿನಾಂಕ: 09.01.2016 ರಂದು ರಾತ್ರಿ  ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯ ಎ.ಎಸ್.ಐ ರವರು ಗಸ್ತು ಮಾಡುತ್ತಿರುವಾಗ ರಾತ್ರಿ 12.15 ಗಂಟೆಯಲ್ಲಿ ಸ್ವರ್ಣನಗರದ ಪಾರಾಂಡಹಳ್ಳಿ ಮುಖ್ಯ ರಸ್ತೆಯಲ್ಲಿ  ವಿ.ಆರ್.ಎಲ್. ಅಂಗಡಿಯ ಬಳಿ ಕತ್ತಲಿನಲ್ಲಿ  ಕುಯ್ಯಾ ಬಿನ್  ಉದಯ್ ಬೀರ್ ಸಿಹಾ, ವಯಸ್ಸು 22 ವರ್ಷ, ಜಾಟ್ ಜನಾಂಗ, ಕೂಲಿ ಕೆಲಸ ವಾಸ ಜಿಲಾನ್ಪುರ್ ಗ್ರಾಮ, ಸೊನಾಯಿ ಅಂಚೆ, ಮರ್ಸಾನ್ ತಾಲ್ಲೂಕು, ಹತ್ರಾಸ್ ಜಿಲ್ಲೆ, ಉತ್ತರಪ್ರದೇಶ ಎಂಬುವನು ತನ್ನ ಇರುವಿಕೆಯನ್ನು ಮರಮಾಚಿಕೊಂಡು ಕುಳಿತ್ತಿದ್ದವನು ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದು, ಆತನನ್ನು ಹಿಡಿದು, ಆಸಾಮಿಯು ಸಂಜ್ಞೆಯ ಅಪರಾಧ ಮಾಡುವ ಉದ್ದೇಶದಿಂದ ಅಲ್ಲಿ ಹೊಂಚು ಹಾಕುತ್ತಿರುವುದಾಗಿ ಅನುಮಾನ ಬಂದಿದ್ದರಿಂದ ಸದರಿ ಆಸಾಮಿಯನ್ನು  ಪ್ರಕರಣ ದಾಖಲಿಸಿರುತ್ತೆ.

 -ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s