ದಿನದ ಅಪರಾಧಗಳ ಪಕ್ಷಿನೋಟ 07 ನೇ ಜನವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:06.01.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ:07.01.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.01.2016 ರಂದು ದೂರುದಾರರಾದ ಶ್ರೀಮತಿ ಕಾಳಿಯಮ್ಮ ಕೋಂ ಕುಪ್ಪಸ್ವಾಮಿ, ಮಸ್ಕಂ ರವರು ನೀಡಿದ ದೂರಿನಲ್ಲಿ ದಿನಾಂಕ 06.01.2016 ರಂದು  ಬೆಳಗ್ಗೆ 08-00 ಗಂಟೆಯಿಂದ ಸಂಜೆ 19-00 ಗಂಟೆಯವರೆಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ, ಯಾರೋ ಕಳ್ಳರು  ಮಸ್ಕಂ ಸಿ ಬ್ಲಾಕಿನಲ್ಲಿರುವ ದೂರುದಾರರ ವಾಸದ ಮನೆಯ ಹಿಂಬಾಗಿಲನ್ನು ಜಖಂಗೊಳಿಸಿ ಒಳಗೆ ಪ್ರವೇಶಿಸಿ ,ಮನೆಯೊಳಗಿದ್ದ ಬೀರುವಿನ ಬಾಗಿಲನ್ನು ತೆಗೆದು  ಬೀರುವಿನಲ್ಲಿದ್ದ  ಬಂಗಾರದ ಓಲೆಗಳು ಒಂದು ಸಾದ ಉಂಗುರ ,ಇವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ . ಇವುಗಳ  ಒಟ್ಟು ಬೆಲೆ  15,000/- ರೂಗಳಾಗಿರುತ್ತೆದೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :02

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 06.01.2016 ರಂದು ದೂರುದಾರರಾದ ಶ್ರೀ.  ವಿಜಯಕುಮಾರ್‌ ಬಿನ್‌ ಮುನಿಯಪ್ಪ, ಅಮರಾವತಿ ನಗರ ರವರು ನೀಡಿದ ದೂರಿನಲ್ಲಿ ದಿನಾಂಕ: 06.01.2016 ರಂದು ರಾತ್ರಿ  10.00 ಗಂಟೆಯ ಸಮಯದಲ್ಲಿ ಬಂಗಾರಪೇಟೆಯ ಮಂಜು ಶ್ರೀ ಬಾರ್ ಬಳಿ ಅವರ ಆಟೋವನ್ನು ನಿಲ್ಲಿಸಿಕೊಂಡು, ಆಟೋದಲ್ಲಿ ಗ್ಯಾಸ್ ಇದೆಯೋ ಅಥವ ಇಲ್ಲವೋ ಎಂಬುದನ್ನು ನೋಡಲು ಇಳಿದಾಗ ಆದಿಲ್ @ ಸುನ್ನಿ ಆದಿಲ್ ಎಂಬುವವನು  ಏಕಾಏಕಿ ಒಂದು ಕಟ್ಟಿಗೆಯಿಂದ ದೂರುದಾರರಾದ ವಿಜಯಕುಮಾರ್‌ ರವರ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 06.01.2016 ರಂದು ದೂರುದಾರರಾದ ಶ್ರೀ. ಪಳನಿ ಬಿನ್‌  ದೇವರಾಜಪ್ಪ,  ಕದಿರೇನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 27.12.2015 ರಂದು ಸಂಜೆ 5.45 ಗಂಟೆಯಲ್ಲಿ ದೂರುದಾರರು ಅವರ ಜಮೀನಿನ ಬಳಿ ಹೋದಾಗ ಆರೋಪಿಗಳು ಕೃಷ್ಣಪ್ಪ, ನಾಗರತ್ನಮ್ಮ, ಬಾಬು,  ಚಂದ್ರಮ್ಮ  ರವರುಗಳು ಹಸುಗಳನ್ನು ಬಿಟ್ಟು ದೂರುದಾರರ  ಜೋಳ ಮತ್ತು ಉರಳಿ ಬೆಳೆಯನ್ನು ಮೇಯಿಸುತ್ತಿದ್ದು, ಈ ವಿಚಾರವನ್ನು ಕೇಳಿದ್ದಕ್ಕೆ  ಆರೋಪಿಗಳು ಜಗಳಕ್ಕೆ ಬಂದು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಪಳನಿ ರವರಿಗೆ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.01.2016 ರಂದು ದೂರುದಾರರಾದ ಶ್ರೀ. ಖಾದೀರ್‌ ಪಾಷಾ ಬಿನ್‌  ಚೋಟಾಸಾಬ್‌  ಬೂದಿಕೋಟೆ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 06.01.2016 ರಂದು ಬೆಳಿಗ್ಗೆ 5.00 ಸಮಯದಲ್ಲಿ ಯಾರಬ್ ಜಾನ್ , 28 ವರ್ಷ ರವರು ಬೂದಿಕೋಟೆಯ ಅವರ ಮನೆಯಿಂದ ಹೋರಗಡೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಪುನಃ ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

 -ಜೂಜಾಟ ಕಾಯ್ದೆ : ಇಲ್ಲ

 -ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 06-01-2016 ರಂದು ಸಂಜೆ  ಎಎಸ್‌ಐ   ವೆಂಕಟೇಶಪ್ಪ   ಮಾರಿಕುಪ್ನಪಂ ರವರು  ರಾತ್ರಿ ನಗರ ಗಸ್ತಿನಲ್ಲಿದ್ದಾಗ  ಸುಮಾರು 18-45 ಗಂಟೆಗೆ ಆಂದ್ರಲೈನ್ ಯೂನಿಯನ್ ಅಪೀಸ್ ಬಳಿ   ಆಸಾಮಿ ಶರಥ್‌ ಕುಮಾರ್‌ ಬಿನ್‌  ಮರಿಯಪ್ಪ, 23 ವರ್ಷ,  ಕೃಷ್ಣಗಿರಿ ಲೈನ್‌ ಎಂಬುವರು ಕತ್ತಲಿನಲ್ಲಿ  ಕುಳಿತಿದ್ದು, ಪೊಲೀಸರನ್ನು ಕಂಡು  ಮರೆಮಾಚುತ್ತಾ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದವನನ್ನು ಹಿಡಿದು ಅಲ್ಲಿದ್ದ ಬಗ್ಗೆ  ವಿಚಾರಿಸಲಾಗಿ ಸಮಂಜಸವಾದ  ಕಾರಣ ನೀಡದೇ ಇದ್ದು  ಗುಮಾನಿ ಅಸಾಮಿ ಕಳವು ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದನೆಂಬ ಅನುಮಾನದ ಮೇರೆಗೆ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s