ದಿನದ ಅಪರಾಧಗಳ ಪಕ್ಷಿನೋಟ 28 ನೇ ಡಿಸೆಂಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:28.12.2015 ರಂದು ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 5.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾಗರತ್ನಮ್ಮ ಕೋಂ ಕೃಷ್ಣಪ್ಪ, ಹೂವರಸನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ,  ದೂರುದಾರರಿಗೂ ಮತ್ತು ಕದಿರೇನಹಳ್ಳಿ ಗ್ರಾಮದ ವಾಸಿ ಪಳನಿ ಎಂಬುವರಿಗೆ ಜಮೀನು ವಿಚಾರದಲ್ಲಿ ಗಲಾಟೆಗಳು ನಡೆಯುತ್ತಿದ್ದು,  ದಿನಾಂಕ:28.12.2015 ರಂದು ಬೆಳಿಗ್ಗೆ 5.00 ಗಂಟೆಯಲ್ಲಿ ದೂರುದಾರರು ಮತ್ತು ಅವರ ಗಂಡ ಕೃಷ್ಣಪ್ಪ ರವರು ತೋಟದ ಮನೆಯಲ್ಲಿ ಮಲಗಿದ್ದಾಗ ಆರೋಪಿಗಳಾದ ಕೇಶವಪ್ಪ ಮತ್ತು ಆತನ ಇಬ್ಬರು ಮಕ್ಕಳು ಹಾಗೂ ಪಳನಿ ರವರ ಮೂರು ಮಕ್ಕಳು ಅಕ್ರಮ ಕೂಟ ಕಟ್ಟಿಕೊಂಡು, ದೂರುದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ದೂರುದಾರರನ್ನು ಮತ್ತು  ಗಂಡ ಕೃಷ್ಣಪ್ಪನನ್ನು ಕೆಟ್ಟ ಮಾತುಗಳಿಂದ ಬೈದು, ದೂರುದಾರರಿಗೆ ಕೈಗಳಿಂದ ಹೊಡೆದು,  ಕೃಷ್ಣಪ್ಪನನ್ನು ಸಾಯಿಸುವ ಉದ್ದೇಶದಿಂದ ಮಚ್ಚು ಮತ್ತು ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀಮತಿ. ಚಂಪಕ ಕೋಂ ವೇಣುಗೋಪಾಲ್, ದೊಡ್ಡಗಾಂಡ್ಲಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ, ದಿನಾಂಕ 27.12.2015 ರಂದು ಮದ್ಯಾಹ್ನ 12.30 ಗಂಟೆಗೆ ದೂರುದಾರರ  ಅಣ್ಣ ಉಮೇಶ್ ರವರ ಮಗಳಾದ 13 ವರ್ಷದ ಆಪ್ರಾಪ್ತ ವಯಸ್ಸಿನ  ಬಾಲಕಿಯು  ಮನೆಯಲ್ಲಿರುವಾಗ,   ಆರೋಪಿ ಜಗದೀಶ್ ಬಿನ್ ಶ್ರೀರಾಮಪ್ಪ,  ದೊಡ್ಡಗಾಂಡ್ಲಹಳ್ಳಿ ಗ್ರಾಮದವನು ಮನೆಯೊಳಗೆ ಆಕ್ರಮ ಪ್ರವೇಶ  ಮಾಡಿ ಆಪ್ರಾಪ್ತ ಬಾಲಕೀಯ ಕೈಯನ್ನು ಹಿಡಿದುಕೊಂಡು  ಎಳೆದಾಡಿ ಮಾನ ಭಂಗ ಮಾಡಲು ಪ್ರಯತ್ನಿಸಿರುತ್ತಾನೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s