ದಿನದ ಅಪರಾಧಗಳ ಪಕ್ಷಿನೋಟ 27 ನೇ ಡಿಸೆಂಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:26.12.2015 ರಂದು ಸಂಜೆ 5.00 ಗಂಟೆಯಿಂದ   ದಿನಾಂಕ:27.12.2015 ರಂದು ಬೆಳಿಗ್ಗೆ  10.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಬಾಲಕೃಷ್ಣನ್, ಪ್ರಭಾರ ಮುಖ್ಯ ಶಿಕ್ಷಕರು, ಸ.ಬಾ.ಹಿ.ಪ್ರಾ.ಶಾಲೆ, ರಾಬರ್ಟ್‌ಸನ್‌ಪೇಟೆ ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದೂರುದಾರರು  ದಿನಾಂಕ 23.12.2015 ರಂದು ಸಂಜೆ 04.30 ಗಂಟೆಗೆ ಶಾಲೆಗೆ ಬೀಗ ಹಾಕಿ, ದಿನಾಂಕ: 26.12.2015ರಂದು ಬೆಳಿಗ್ಗೆ 07.30 ಗಂಟೆಗೆ ಬಂದು ನೋಡಲಾಗಿ, ಯಾರೂ ಕಳ್ಳರು ಮುಖ್ಯ ಶಿಕ್ಷಕರ ಕೊಠಡಿ ಮತ್ತು ಅಡುಗೆ ಮನೆ ಕೋಣೆಗಳ ಬಾಗಿಲಿನ ಬೀಗವನ್ನು ಮುರಿದು, 3 ಗ್ಯಾಸ್ ಸಿಲಿಂಡರ್ ಗಳನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಫೀಜಾ ಬಿನ್ ಜಬ್ಬಾರ್‍, ಭಾರತೀಪುರಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ,  ದಿನಾಂಕ 25.12.2015 ರಂದು ಸಂಜೆ 6.00 ಗಂಟೆಯಲ್ಲಿ ದೂರುದಾರರ ಮಕ್ಕಳಾದ ಪತೀಮಾ ಮತ್ತು ಫಾಮೀದಾ ರವರು ಬಹಿರ್ದೇಸೆಗೆಂದು ಹರಿಶ್ಚಂದ್ರ ಸ್ಟ್ರೀಟ್ ಬಳಿ ಇರುವ ಕಳ್ಳಿ ಪೊದೆಯ ಬಳಿ ಹೋಗಿದ್ದಾಗ, ಆರೋಪಿ ವಿಜಿ ಸುಸೈಪಾಳ್ಯಂ  ವಾಸಿ ಆತನ ಸ್ನೇಹಿತನೊಂದಿಗೆ  ಬಂದು ದೂರುದಾರರ ಮಗಳಾದ ಫಾಮೀದಾ ರವರನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿರುತ್ತಾರೆ.

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

 -ಜೂಜಾಟ ಕಾಯ್ದೆ : ಇಲ್ಲ

 -ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ಶಿವಕುಮಾರ್‍ ಬಿನ್ ವೆಂಕೋಜಿ, ಲಕ್ಷ್ಮೀಸಾಗರ ಗ್ರಾಮ ರವರು ನೀಡಿದ ದೂರಿನಲ್ಲಿ,  ದೂರುದಾರರ ತಂದೆ ವೆಂಕೋಜಿ, 78 ವರ್ಷ ರವರಿಗೆ ಸುಮಾರು 05 ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ದಿನಾಂಕ 26.12.2015 ರಂದು ಮಧ್ಯಾಹ್ನ  1.00 ಗಂಟೆಯಲ್ಲಿ ಹೊಟ್ಟೆನೋವು ತಾಳಳಾರದೆ ಮನೆಯಲ್ಲಿ ಇಲಿ ಪಾಷಾನಾ ಕುಡಿದು ಅಸ್ವಸ್ಥನಾಗಿರುವಾಗ ಚಿಕಿತ್ಸೆ ಸಲುವಾಗಿ ಪಿ.ಇ.ಎಸ್ ಮೆಡಿಕಲ್ ಕಾಲೇಜು ಕುಪ್ಪಂ ನಲ್ಲಿ ದಾಖಲು ಮಾಡಿ,  ವೈದ್ಯರ ಸಲಹೆ ಮೇರೆಗೆ ಬೇರೆ ಕಡೆ ಚಿಕಿತ್ಸೆ ಕೊಡಿಸಲು ಸಾಗಿಸುತ್ತಿರುವಾಗ ರಾತ್ರಿ  12.00 ಗಂಟೆಯಲ್ಲಿ ರಾಳ್ಳಬುದಗೂರು ಬಳಿ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s