ದಿನದ ಅಪರಾಧಗಳ ಪಕ್ಷಿನೋಟ 23 ನೇ ಡಿಸೆಂಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:22.12.2015 ರಂದು ಸಂಜೆ 5.00 ಗಂಟೆಯಿಂದ   ದಿನಾಂಕ:23.12.2015 ರಂದು ಬೆಳಿಗ್ಗೆ  10.00 ಗಂಟೆಯವರೆಗೆ  ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ  ಕಳುವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.12.2015 ರಂದು ದೂರುದಾರರಾದ ಶ್ರೀ. ಚಂದ್ರಶೇಖರ್‌ ಬಿನ್‌  ವೆಂಕಟರಾಮಪ್ಪ,  ಎಳೇಸಂದ್ರ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ:16.12.2015 ರಂದು ರಾತ್ರಿ ಎಳೇಸಂದ್ರ  ಗ್ರಾಮದಲ್ಲಿರುವ ತಮ್ಮ ಜಮೀನಿನ ಸವೆ  ಸಂಖ್ಯೆ 111 ರಲ್ಲಿ ಪಂಪ್ ರೂಂನ ಬಳಿ ಅಳವಡಿಸಿದ್ದ ಪ್ಯಾನಲ್ ಬೋರ್ಡ ಮತ್ತು ವ್ಯವಸಾಯಕ್ಕಾಗಿ  ಇಟ್ಟಿದ್ದ 02 ಹೆಚ್.ಪಿ  ಔಷದಿ ಸಿಂಪಡಿಸುವ ಸ್ಪ್ರೇಯರ್ ನ್ನು  ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅದರ ಅಂದಾಜು ಬೆಲೆ ಸುಮಾರು 35000/- ರೂಗಳಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ  ಕಳುವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.12.2015 ರಂದು ದೂರುದಾರರಾದ ಶ್ರೀ. ನಾರಾಯಣಶೆಟ್ಟಿ ಬಿನ್‌  ದಶರತಶೆಟ್ಟಿ,  ಬೂದಿಕೋಟೆ ರವರು ನೀಡಿದ ದೂರಿನಲ್ಲಿ ದಿನಾಂಕ:13.12.2015 ರಂದು ರಾತ್ರಿ ಬೂದಿಕೋಟೆ  ಗ್ರಾಮದಲ್ಲಿರುವ ತಮ್ಮ ಜಮೀನಿನ ಸರ್ವೆ ಸಂಖ್ಯೆ 170/3 ರಲ್ಲಿ ಪಂಪ್ ರೂಂನ ಬಳಿ ಅಳವಡಿಸಿದ್ದ ಪ್ಯಾನಲ್ ಬೋರ್ಡ ಮತ್ತು ವ್ಯವಸಾಯಕ್ಕಾಗಿ  ಇಟ್ಟಿದ್ದ ಹೋಂಡ ಕಂಪನಿಯ 03 ಹೆಚ್.ಪಿ  ಔಷದಿ ಸಿಂಪಡಿಸುವ ಸ್ಪ್ರೇಯರ್ ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅದರ ಅಂದಾಜು ಬೆಲೆ ಸುಮಾರು ರೂ 48000/- ಗಳಾಗಿರುತ್ತದೆ.

-ದೊಂಬಿ : ಇಲ್ಲ

-ಮೋಸ: ‌01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 22.12.2015 ರಂದು  ದೂರುದಾರರಾದ ಶ್ರೀ.  ರವಿ. ಬಿನ್‌ ಲಕ್ಷ್ಮೀನಾರಾಯಣ, ಬೈರವೇಶ್ವರ ಟ್ರೇಡರ್‌, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ಆರೋಪಿ ಪ್ರೀತ್‌ ಪಾಲ್‌ ಸಿಂಗ್‌  ರವರು ಆಲೂಗಡ್ಡೆ ವ್ಯಾಪಾರಸ್ತರಾಗಿದ್ದು, ದೂರುದಾರರು ಸಹ ಆಲೂಗಡ್ಡೆ ವ್ಯಾಪಾರಸ್ಥರಾಗಿದ್ದು, ಆರೋಪಿಯ ಪ್ರೀತ್‌ ಪಾಲ್‌ ಸಿಂಗ್‌  ರವರು 601-00 ರೂಗಳಂತೆ 50 ಕೆ.ಜಿ ಆಲೂಗಡ್ಡೆ ಚೀಲದ 5000 ಚೀಲಗಳಿಗೆ 30,05,000/- ರೂಗಳಿಗೆ ವ್ಯಾಪಾರವನ್ನು ತೀರ್ಮಾನಿಸಿಕೊಂಡಿದ್ದು, ಆದರಂತೆ ಇಬ್ಬರು ದಿನಾಂಕ 02.07.2015 ರಂದು ಕ್ರಯದ ಕರಾರನ್ನು ಮಾಡಿಸಿಕೊಂಡಿರುತ್ತಾರೆ, ಕರಾರರಿನ ವೇಳೆಯಲ್ಲಿ ಮುಂಗಡವಾಗಿ 2,00,000/- ರೂಗಳನ್ನು ಪಡೆದುಕೊಂಡು ನಂತರ 5,00,000/- ರೂಗಳಿಗೆ ಮತ್ತು 8,00,000/- ರೂಗಳಿಗೆ ಎಸ್‌‌ಬಿಐ ಬ್ಯಾಂಕಿನ ಚಕ್‌ನ್ನು  ನೀಡಿ ಆಗಸ್ಟ್ ಮತ್ತು ಅಕ್ಟೋಬರ್ 2015 ರಂದು ಪೂರ್ಣ ಹಣವನ್ನು ನೀಡುವುದಾಗಿ ಸೆಪ್ಟೆಂಬರ್-2015ನೇ ಸಾಲಿನ ಮೊದಲನೇ ವಾರದಲ್ಲಿ ಆರೋಪಿ 405 ಚೀಲಗಳನ್ನು ಸಪ್ಲೆ ಮಾಡಿದ್ದು, ಉಳಿದ 4595  ಅಲೂಗಡ್ಡ ಚಿಲಗಳನ್ನು  ದೂರುದಾರರಿಗೆ ಸಪ್ಲೆ ಮಾಡದೇ ಮೋಸಮಾಡಿರುತ್ತಾನೆ.

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

 -ಜೂಜಾಟ ಕಾಯ್ದೆ : 01

        ಕೆ.ಜಿ.ಎಫ್‌ ಜಿಲ್ಲೆಯ ಡಿಸಿಬಿ ಪೊಲೀಸ್‌ ಠಾಣೆಯಲ್ಲಿ ಜೂಜಾಟದ ಪ್ರಕರಣ ದಾಖಲು ಮಾಡಿರುತ್ತಾರೆ. ದಿನಾಂಕ 22.12.2015 ರಂದು  ಡಿಸಿಬಿ  ವಿಭಾಗದ ಪೊಲೀಸ್‌ ಇನ್ಸ್‌ಪೆಕ್ಟರ್‌ ಶ್ರೀ. ಲಕ್ಷ್ಮೀನಾರಾಯಣ ಎಂ.ಡಿ. ರವರು ಮತ್ತು ಅವರ ಸಿಬ್ಬಂದಿಯವರು ಬೇತಮಂಗಲ ಕಡೆ ಗಸ್ತು ಮಾಡುತ್ತಿದ್ದಾಗ ಬಂದ ಖಿಚಿತ ವರ್ತಮಾನದ ಮೇರೆಗೆ ನಾಗಶೆಟ್ಟಿಹಳ್ಳಿ ಗ್ರಾಮದಿಂದ ಅಯ್ಯಪಲ್ಲಿ ಗ್ರಾಮಕ್ಕೆ ಹೋಗುವ ಸಾರ್ವಜನಿಕರ ರಸ್ತೆಯ ಬಳಿ  ಆರೋಪಿಗಳಾದ 1. ಸುರೇಶ್‌, ಬಿನ್‌ ಮುನಿಸ್ವಾಮಿ, 2. ರೆಡ್ಡಿಯಪ್ಪ ಬಿನ್‌ ರಾಮಪ್ಪ 3 . ಪೆದ್ದಣ್ಣ ಬಿನ್‌ ರಾಮಪ್ಪ, ಎಂಬುರುಗಳು ರೂ 3500\- ಗಳನ್ನು ಪಣವಾಗಿ ಇಟ್ಟುಕೊಂಡು ಅಂದರ್‌ ಬಾಹರ್‌ ಜೂಜಾಟವನ್ನು ಅಡುತ್ತಿದ್ದವರ ವಿರುದ್ದ ಪ್ರಕಣ ದಾಖಲು ಮಾಡಿರುತ್ತಾರೆ.

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

 

 

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s