ದಿನದ ಅಪರಾಧಗಳ ಪಕ್ಷಿನೋಟ 23ನೇ ಡಿಸೆಂಬರ್‍ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 23.12.2015 ರಂದು  ಬೆಳಿಗ್ಗೆ  10.00   ಗಂಟೆಯಿಂದ  ಸಂಜೆ 05.00 ಗಂಟೆ ಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: 02

ಉರಿಗಾಂ ಪೊಲೀಸ್ ಠಾಣೆಯಲ್ಲಿ ಮೋಸ ಪ್ರಕರಣ(ನಿರ್ದಿಷ್ಟ ದಾವೆ) ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ಕೋದಂಡಪಾಣಿ ಬಿನ್ ಕುಪ್ಪಸ್ವಾಮಿ ಮೊದಲಿಯಾರ್‍, ೪ನೇ ಕ್ರಾಸ್, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದೂರುದಾರರ ಬಾಬತ್ತು ಟಾಟಾ ಇಂಡಿಕಾ ಕಾರ್‍ ಸಂಖ್ಯೆ ಕೆ.ಎ-08  5188 ವಾಹನವನ್ನು ಆರೋಪಿ ಸಂದೀಪ್, ಉರಿಗಾಂ ರವರು  ಟ್ರಾವೆಲ್ಸ್‌ಗೆ ನೀಡಿ ಪ್ರತಿ ತಿಂಗಳು 33,000 ರೂಗಳನ್ನು ನೀಡುವುದಾಗಿ ಹೇಳಿ ವಾಹನವನ್ನು  ಪಡೆದು, ಒಂದು ಲಕ್ಷ ರೂಗಳನ್ನು ಠೇವಣಿ ಮಾಡಿಸಿಕೊಂಡು, ದಿನಾಂಕ 16-04-2012 ರಿಂದ 04-07-2012  ರವರೆಗೆ ಯಾವುದೇ ಹಣವನ್ನು ನೀಡದೆ ವಾಹನವನ್ನು ಮಾತ್ರ ವಾಪಸ್ಸು ನೀಡಿ  ಮೋಸ ಮಾಡಿದ್ದು,  ದಿನಾಂಕ 30-10-2015 ರಂದು ದೂರುದಾರರು ಆರೋಪಿಯ ಮನೆಯ ಬಳಿಗೆ ಹೋಗಿ ಹಣವನ್ನು ನೀಡುವಂತೆ ಕೇಳಿದಾಗ, ಆರೋಪಿ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಆಯುಧಗಳಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ಮೋಸ ಪ್ರಕರಣ(ನಿರ್ದಿಷ್ಟ ದಾವೆ) ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವ ಪ್ರಗಾಸಂ ಬಿನ್ ಕುಪ್ಪಸ್ವಾಮಿ ಮೊದಲಿಯಾರ್‍, ೪ನೇ ಕ್ರಾಸ್, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದೂರುದಾರರ ಬಾಬತ್ತು ಟಾಟಾ ಸುಮೋ ಸಂಖ್ಯೆ ಕೆಎ-51 ಎ-5474 ವಾಹನವನ್ನು ಆರೋಪಿ ಸಂದೀಪ್ ಉರಿಗಾಂ ರವರು    ಟ್ರಾವೆಲ್ಸ್‌ಗೆ ನೀಡಿ ಪ್ರತಿ ತಿಂಗಳು   54,000 ರೂಗಳನ್ನು ನೀಡುವುದಾಗಿ ಹೇಳಿ  ವಾಹನವನ್ನು ಪಡೆದು, ಒಂದು ಲಕ್ಷ ರೂಗಳನ್ನು ಠೇವಣಿ ಮಾಡಿಸಿಕೊಂಡು,   ದಿನಾಂಕ 16-04-2012 ರಿಂದ 04-07-2012 ರವರೆಗೆ ಯಾವುದೇ  ಹಣವನ್ನು ನೀಡದೆ, ಮೋಸ ಮಾಡಿದ್ದು,  ದಿನಾಂಕ 30-05-2015 ರಂದು ದೂರುದಾರರು ಆರೋಪಿಯ ಮನೆಯ ಬಳಿಗೆ ಹೋಗಿ ಹಣ ಕೇಳಿದಾಗ,  ಆರೋಪಿ ಗಲಾಟೆ ಮಾಡಿ, ಕೈಗಳಿಂದ ಮತ್ತು ಆಯುಧಗಳಿಂದ ಹೊಡೆದು, ಕೆಟ್ಟ ಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾನೆ.

-ಹಲ್ಲೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ(ನಿರ್ದಿಷ್ಟ ದಾವೆ) ದಾಖಲಾಗಿರುತ್ತದೆ. ದೂರುದಾರರಾದ ಕತ್ಲೀನ್‌ ಲ್ಯಾಂಬ್ ಕೋಂ ಲಿಯಾನ್ ಲ್ಯಾಂಬ್, ಇ.ಡಿ ಕಾಂಪ್ಲೆಕ್ಸ್‌, ಉರಿಗಾಂ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದೂರುದಾರರ ಪಕ್ಕದ ಮನೆಯ ವಾಸಿಗಳಾದ  ಆರೋಪಿ ಮೀನ ಮತ್ತು ರಾಮಚಂದ್ರನ್  ರವರು  ದಿನಾಂಕ  25-08-2015  ರಂದು ರಾತ್ರಿ  09.00  ಗಂಟೆಯಲ್ಲಿ ದೂರುದಾರರ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ, ವಿನಾ ಕಾರಣ ಜಗಳ ಕಾದು,  ಕೈಗಳಿಂದ ಮತ್ತು ಚೇರ್‌ನಿಂದ ದೂರುದಾರರಿಗೆ  ಹೊಡೆದು ಗಾಯಗಳುಂಟು ಪಡಿಸಿ, ಕೆಟ್ಟ ಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 02

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಭದ್ರತಾ ಕಾಯ್ದೆ ಅಡಿಯಲ್ಲಿ ಸೆಂಧಿಲ್ ಬಿನ್ ಲೇಟ್ ಚಿದಂಬರಂ, ಕನಿಗಾಪುರಂ, ಗುಡಿಯಾತಂ ಮುಖ್ಯೆ ರಸ್ತೆ, ವೇಲೂರು, ತಮಿಳು ನಾಡು ರವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ

ಉರಿಗಾಂ ಪೊಲೀಸ್ ಠಾಣೆಯಲ್ಲಿ ಭದ್ರತಾ ಕಾಯ್ದೆ ಅಡಿಯಲ್ಲಿ ಸುಂದರ್‍ ಮೂರ್ತಿ, ವಾಸ ನಂ ೦೨, ಬಾಲ್ಘಾಟ್ ಲೇನ್, ಕೋರಮಂಡಲ್‌, ಉರಿಗಾಂ ರವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s