ದಿನದ ಅಪರಾಧಗಳ ಪಕ್ಷಿನೋಟ 21 ನೇ ಡಿಸೆಂಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:20.12.2015 ರಂದು ಸಂಜೆ 5.00 ಗಂಟೆಯಿಂದ   ದಿನಾಂಕ:21.12.2015 ರಂದು ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 03

ಚಾಂಪಿಯನ್ ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.12.2015 ರಂದು ದೂರುದಾರರಾದ ಶ್ರೀ. ಅನ್ಬಳಗನ್‌ ಬಿನ್‌  ಅದಿ,  ನಂ 29,  ಸಿ ಬ್ಲಾಕ್‌, ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ ದಿನಾಂಕ;20.12.2015 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಅನ್ಬಳಗನ್‌  ಮನೆಗೆ ಬಂದಾಗ ಅವರ ತಮ್ಮ ಮುರುಗನ್‌ ಎಂಬುವರು ತಾಯಿಯ ಹತ್ತಿರ ಮನೆ ವಿಚಾರದಲ್ಲಿ  ಜಗಳವಾಡುತ್ತಿದ್ದು, ಈ ಮನೆ ನನ್ನದು ನೀನು ಬರಬೇಡ ಎಂದು ಹೇಳಿ ಕೈಗಳಿಂದ ಅನ್ಬಳಗನ್‌ ರವರ ಮುಖಕ್ಕೆ ಮುರುಗನ್‌ ರವರು ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

ಚಾಂಪಿಯನ್ ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.12.2015 ರಂದು ದೂರುದಾರರಾದ ಶ್ರೀ. ಮುರುಗನ್ ಬಿನ್‌ ಅದಿ ನಂ 29,  ಸಿ ಬ್ಲಾಕ್‌, ಚಾಂಪಿಯನ್‌ರೀಫ್ಸ್‌ ರವರು ದಿನಾಂಕ: 20.12.2015 ರಂದು ಸಂಜೆ 5,00 ಗಂಟೆಗೆ ದೂರುದಾರರ  ತಾಯೊಯಿಂದಿಗೆ ಮಾತನಾಡುವಾಗ ಆರೋಪಿ ಆನ್ವಳಗನ್‌ ಮನೆ ವಿಚಾರದಲ್ಲಿ ಜಗಳಮಾಡಿ ಕಬ್ಬಿಣದ ರಾಡಿನಿಂದ ಮುರುಗನ್‌ ರವರ ಹೊಡೆದು  ಕೈಗಳಿಂದ ಹೊಡೆದಿರುತ್ತಾನೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.12.2015 ರಂದು ದೂರುದಾರರಾದ ಶ್ರೀ. ನಾಗರಾಜ್‌ ಬಿನ್‌  ಮುನಿಯಪ್ಪ,  ಬಲಮಂದೆ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 19.12.2015 ರಂದು ರಾತ್ರಿ ಸುಮಾರು 11-00 ಗಂಟೆಯಲ್ಲಿ ಆರೋಪಿ ಕಿರನ್‌  ಎಂಬುವರು ನಾಗರಾಜ್‌ ರವರ ಮನೆಯ ಬಂದು ವಿನಾಕಾರಣ ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು, ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.12.2015 ರಂದು ದೂರುದಾರರಾದ ಶ್ರೀ ಮುನಿರಾಜು ಬಿನ್‌ ಮುನಿಸ್ವಾಮಿ, ಮುದ್ದೇಗೌಡನ ಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ,  ದಿನಾಂಕ 18.12.2015 ರಂದು  ಮದ್ಯಾಹ್ನ 1.30 ಗಂಟೆಯಲ್ಲಿ  ದೂರುದಾರರ ಬಾಮೈದನಾದ ಯಲ್ಲಪ್ಪ  ವಯಸ್ಸು 32 ವರ್ಷ, ಎಂಬುವರು ಕ್ಯಾಸಂಬಳ್ಳಿ- ಕೆ.ಜಿ.ಎಫ್, ಮುಖ್ಯ ರಸ್ತೆಯ ಸುರಾಜ್ ಮಿಲ್  ಹತ್ತಿರ ವಾಟರ್ ಟ್ಯಾಂಕರ್ ಸಂಖ್ಯೆ ಎ.ಪಿ-03 ವೈ-6375 ರಲ್ಲಿ ನೀರನ್ನು ತುಂಬಿಸಿಕೊಂಡು ಕೆ.ಜಿ.ಎಫ್ ಗೆ ಹೋಗುತ್ತಿದ್ದಾಗ  ಆಯತಪ್ಪಿ ವಾಟರ್ ಟ್ಯಾಂಕರ್ ಕೆಳಗೆ ಬಿದ್ದ ಪರಿಣಾಮ ಯಲ್ಲಪ್ಪನಿಗೆ ಎಡಭಾಗದ ಕಿವಿಗೆ ಮತ್ತು ಕತ್ತಿನ ಕೆಳಗಡೆ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೋಲಾರ ಆರ್.ಎಲ್ .ಜಾಲಪ್ಪ,ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು,  ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ 20.12.2015 ರಂದು ಆಸ್ವತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s