ಪತ್ರಿಕಾ ಪ್ರಕಟಣೆ ದಿನಾಂಕ 18.12.2015

ಪತ್ರಿಕಾ ಪ್ರಕಟಣೆ

ಕೆಜಿಎಫ್ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟನೆ

        ಕೆಜಿಎಫ್ ಪೊಲೀಸ್ ಜಿಲ್ಲೆಯ   2015 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಶುಕ್ರವಾರದಂದು ಉದ್ಘಾಟನೆ ಮಾಡಲಾಯಿತು. ಕೆಜಿಎಫ್‌ನ ಚಾಂಫೀಯನ್‌ರೀಫ್ಸ್‌ನಲ್ಲಿನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಪೊಲೀಸ್ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು (ಕೆಜಿಎಫ್ ಪೀಠ) ಶ್ರೀ. ಎಂ. ಜಗದೀಶ್ವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟನೆ ನೆರವೇರಿಸಿ ನ್ಯಾಯಾಧೀಶರಾದ ಶ್ರೀ. ಎಂ. ಜಗದೀಶ್ವರ ಅವರು ಮಾತನಾಡಿ, ಪೊಲೀಸರು ಕಾನೂನು ಸುವ್ಯವಸ್ಥೆ ಅಡಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಮಧ್ಯೆ ಮನೋವಿಕಾಸಕ್ಕಾಗಿ ವರ್ಷಕ್ಕೊಮ್ಮೆ ಕ್ರೀಡಾಕೂಟವನ್ನು ನಡೆಸುತ್ತಿದ್ದು, ಕೆಜಿಎಫ್‌ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು, ಸಕ್ರಿಯವಾಗಿ ಕ್ರೀಡಾಸಕ್ತಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪೊಲೀಸರು, ಸಾರ್ವಜನಿಕರ ನಡುವೆ ಉತ್ತಮ ಸಂಬಂಧವಿದ್ದು ಸಹಕಾರ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ,  ಪೊಲೀಸರಿಲ್ಲದ ಸಮಾಜವನ್ನು ನಡೆಸುವುದು ಕಷ್ಟಸಾಧ್ಯದ ಸಂಗತಿ, ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯ ಮೂಲಕ ಸಮಾಜವನ್ನು ಶಾಂತಿ, ಸಂಯಮಯುತವಾಗಿ ಕೊಂಡೊಯ್ಯಬೇಕೆಂದು ನ್ಯಾಯಾಧೀಶರಾದ  ಶ್ರೀ.ಎಂ. ಜಗದೀಶ್ವರ ಅವರು ಕರೆ ನೀಡಿದರು.

ಶ್ರೀ. ಫಾಸ್ಟರ್ ಗಾಡ್ ಬರ್ಗ್ ಜಾನ್, ವಕೀಲರಾದ  ಶ್ರೀ. ಮಣಿವಣ್ಣನ್, ಕಲೈಸೆಲ್ವಿ, ವೈದ್ಯಾಧಿಕಾರಿ ಡಾ|| ಎಂ. ಮಹೇಂದ್ರ, ನಿವೃತ್ತ ಎಸ್‌ಐ ವಿ.ರಾಮಪ್ಪ, ಕೆ.ಆರ್.ಗೌಡಪ್ಪ, ಪ್ರಾಂಶುಪಾಲ ಡಾ|| ಕೃಷ್ಣಕುಮಾರ್, ಬೆಮೆಲ್ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ  ಶ್ರೀ. ರಾಜ್‌ಶೇಖರ್, ಅಧ್ಯಾಪಕ  ಶ್ರೀ. ಚಂದ್ರಶೇಖರ್, ಕರಾಟೆ ಗಿನ್ನೆಲೆ ದಾಖಲೆ ಪಟು  ಶ್ರೀ. ರಮೇಶ್‌ಕುಮಾರ್ ಮತ್ತಿತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಕ್ರೀಡಾಕೂಟಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಶ್ರೀ. ಹೆಚ್.ಆರ್. ಭಗವಾನ್‌ದಾಸ್ ಅವರು ಅಧ್ಯಕ್ಷತೆ ವಹಿಸಿದ್ದು, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸರ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು. 100 ಮೀಟರ್ ಓಟದ ಸ್ಪರ್ಧೆಗೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ನ್ಯಾಯಾಧೀಶರಾದ  ಶ್ರೀ. ಜಗದೀಶ್ವರ ಅವರು ಚಾಲನೆ ನೀಡಿದರು.

ಕ್ರೀಡಾಕೂಟದ ಜ್ಯೋತಿಯನ್ನು ಎಪಿಸಿ ಹಾಲಪ್ಪ ಅವರು ಹೊತ್ತು ಆಕರ್ಷಕ ರೀತಿಯಲ್ಲಿ ಸಂಚರಿಸಿದರು.  ಕ್ರೀಡಾಕೂಟದಲ್ಲಿ ಆರ್.ಪಿ.ಐ. ಕೆ.ಆರ್.ರಘು ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ, ಜನಾಕರ್ಷಕ ರೀತಿಯಲ್ಲಿ ಪಥಸಂಚಲನ ನಡೆಯಿತು. ಕ್ರೀಡಾ ತಂಡಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರವಾಯಿತು. ಎಸ್ಪಿ ಶ್ರೀ. ಹೆಚ್.ಆರ್. ಭಗವಾನ್‌ದಾಸ್ ಅವರು ಮೊದಲಿಗೆ ಸ್ವಾಗತಿಸಿ, ವಿಕ್ರಂಶ್ರೀನಿವಾಸ್ ಅವರು ನಿರೂಪಿಸಿದರು. ಡಿವೈಎಸ್ಪಿ  ಶ್ರೀ. ಪುಟ್ಟಮಾದಯ್ಯ ಅವರು ವಂದಿಸಿದರು.

18 KGF 01 18 KGF01 18.KGF 01 18.KGF01 18KGF01

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s