ದಿನದ ಅಪರಾಧಗಳ ಪಕ್ಷಿನೋಟ 17 ನೇ ಡಿಸೆಂಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:16.12.2015 ರಂದು ಸಂಜೆ 5.00 ಗಂಟೆಯಿಂದ   ದಿನಾಂಕ:17.12.2015 ರಂದು ಬೆಳಿಗ್ಗೆ  10.00 ಗಂಟೆಯವರೆಗೆ  ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16.12.2015 ರಂದು ದೂರುದಾರರಾದ ಶ್ರೀ.ಜಯರಾಜ್‌,  ಶಿಕ್ಷಣಾಧಿಕಾರಿಗಳು ಬಂಗಾರಪೇಟೆ ಕ್ಷೇತ್ರ  ರವರು  ನೀಡಿದ ದೂರಿನಲ್ಲಿ   ದಿನಾಂಕ:16.12.2015 ರಂದು ಮದ್ಯಾಹ್ನ 02.30 ಗಂಟೆಯ ಸಮಯದಲ್ಲಿ  ಬೂದಿಕೋಟೆ ಪದವಿ ಪೂರ್ವ ಕಾಲೇಜು ಪ್ರೌಡ ಶಾಲಾ ವಿಭಾಗದ ಶಾಲೆಯ ಮಕ್ಕಳಿಗೆ ಮದ್ಯಾಹ್ನದ ಊಟಕ್ಕೆಂದು ನೀಡಿರುವ ಅಕ್ಷರದಾಸೋಹದ 02 ಮೂಟೆ ಅಕ್ಕಿ, ಒಂದೂವರೆ ಮೂಟೆ ತೊಗರಿ ಬೇಳೆ, ಒಂದು ಮೂಟೆ ಗೋದಿ, ಮೂರು ಕಾಟನ್ ಎಣ್ಣೆ ಮತ್ತು ಇತರೆ ವಸ್ತುಗಳನ್ನು ಕನ್ನಡ ಶಿಕ್ಷಕರಾದ  ಪ್ರಸನ್ನ ಕುಮಾರ್, ಹಾಗೂ ಮತ್ತೊಬ್ಬ ಶಿಕ್ಷಕರಾದ ನಾಗರಾಜು, ಮತ್ತು ದ್ವಿತೀಯ ದರ್ಜೆ ಸಹಾಯಕರಾದ  ಶ್ರೀನಿವಾಸ ರಾಜು ರವರು ಕೆಎ-02-ಎಂ.ಕೆ.9990 ನೋಂದಣಿ ಸಂಖ್ಯೆಯ ಸ್ಕಾರ್ಪಿಯೋ ಕಾರಿನಲ್ಲಿ ಬಂದು  ಶಾಲೆಯಲ್ಲಿಟ್ಟಿದ್ದವುಗಳನ್ನು ಕಳುವು ಮಾಡಲು ಪ್ರಯತ್ನಿಸಿರುತ್ತಾರೆ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16.12.2015 ರಂದು ದೂರುದಾರರಾದ ಶ್ರೀ. ಸುರೇಶ್‌‌ ಬಾಬು ಬಿನ್‌ ಜಗನ್‌ನಾಥನ್‌ 5 ನೇ ಕ್ರಾಸ್‌‌, ರಾಬರ್ಟ್‌‌ಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ: 11.12.2014 ರಂದು  ದೂರುದಾರರು ಮತ್ತು ಆತನ ಹೆಂಡತಿ ಶ್ರೀಮತಿ ಶಿವಶಂಕರಿ ಹಾಗೂ ಬಾಮೈದನಾದ ಸುರೇಶ್ ಎಂಬುವವರು ಮನೆಯಲ್ಲಿದ್ದಾಗ ಯಾರೋ ಇಬ್ಬರು ಅಪರಿಚಿತ ಅಸಾಮಿಗಳು ಬಂದು ನಿಮ್ಮ ಆರ್ಥಿಕ ಅಭಿವೃದ್ದಿಗಾಗಿ ಪೂಜೆ ಮಾಡಿಸಿದರೆ ನಿಮಗೆ ಒಳೆಯದಾಗುತ್ತೆಂದು  ಹೇಳಿದ್ದಕ್ಕೆ, ದೂರುದಾರರ ಅಪರಿಚಿತರ ಮಾತುಗಳನ್ನು ನಂಬಿ ಮನೆಯಲ್ಲಿದ್ದ ಎರಡು ಚಿನ್ನದ ಚೈನುಗಳು ಮತ್ತು  ನಾಲ್ಕು ಚಿನ್ನದ ಉಂಗುರಗಳು ಎಲ್ಲಾ ಒಟ್ಟು ತೂಕ 36 ಗ್ರಾಂ  ಬೆಲೆ ಸುಮಾರು  ರೂ 72000 /- ಮೌಲ್ಯದ ಒಡವೆಗಳನ್ನು ಅಪರಿಚಿತರಿಗೆ ಪೂಜೆಗೆ ಎಂತ ನೀಡಿದ್ದು,  ಆ ಅಪರಿಚಿತರು ಸದರಿ ಒಡವೆಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿಟ್ಟು ಸುಮಾರು ಅರ್ಧ ಗಂಟೆ ಪೂಜೆಯನ್ನು ಮಾಡಿ ನಂತರ ಸದರಿ ಸ್ಟೀಲ್ ಪಾತ್ರೆಯನ್ನು ದೇವರ ಕೋಣೇಯಲ್ಲಿಟ್ಟು ಅದನ್ನು ನಾವು ನಾಳೆ ಬಂದು ತೆಗೆದುಕೊಡುವವರೆಗೂ ಅದು ಅಲ್ಲೆ ಇರಲಿ ಎಂದು ಹೇಳಿ  ಹೊರಟುಹೋದರು. ನಂತರ ಮಾರನೇ ದಿನ ಸದರಿ ಅಸಾಮಿಗಳು ಬರುತ್ತಾರೆಂದು  ಕಾದು ನೋಡಲಾಗಿ ಅವರು ಬರದೇ ಕಾರಣ ದೂರುದಾರರಿಗೆ ಸಂಶಯ ಬಂದು ದೇವರ ಕೋಣೆಯಲ್ಲಿದ್ದ ಸ್ಟೀಲ್ ಪಾತ್ರೆಯನ್ನು  ತೆಗೆದು ನೋಡಲಾಗಿ ಒಡವೆಗಳು ಕಾಣೆಯಾಗಿದ್ದು, ಸದರಿ ಆಸಾಮಿಗಳು ಒಡವೆಗಳನ್ನು ತೆಗೆದುಕೊಂಡು ಹೋಗಿ ದೂರುದಾರರಿಗೆ ಮೋಸ ಮಾಡಿರುತ್ತಾರೆ.

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s