ಪತ್ರಿಕಾ ಪ್ರಕಟಣೆ ದಿ 15.12.2015 ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ಜಿಲ್ಲಾ ಪೊಲೀಸ್ ಕಛೇರಿ,
ಕೋಲಾರ ಚಿನ್ನದ ಗಣಿ ಪ್ರದೇಶ.
ಸಂಖ್ಯೆ: ಪ್ರೆಸ್/೮೨/೨೦೧೫ ದಿನಾಂಕ: ೧೫.೧೨.೨೦೧೫.
ಪ ತ್ರಿ ಕಾ ಪ್ರ ಕ ಟ ಣೆ
ಕೆಜಿಎಫ್ : ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಕೆ.ಜಿ.ಎಫ್., ಡಿ. ೧೫ :
ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೧೫ ನೇ ಸಾಲಿನ ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮದ ಅಂಗವಾಗಿ, ಕೆಜಿಎಫ್ ನಗರ ಸೇರಿದಂತೆ, ಉರಿಗಾಂ, ಬೆಮೆಲ್‌ನಗರ, ಸರ್ ಎಂ.ವಿ.ನಗರ ಮೊದಲಾದೆಡೆಗಳಲ್ಲಿ ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳನ್ನು ತಡೆಗಟ್ಟುವ ಕುರಿತು ಜನಜಾಗೃತಿ ಕಾರ್ಯಕ್ರಮವು ನಡೆಯಿತು.
ಕೆಜಿಎಫ್‌ನ ಉರಿಗಾಂನಲ್ಲಿನ ಬಿಜಿಎಂಎಲ್ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉರಿಗಾಂ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಎಸ್. ಪವನ್‌ಕುಮಾರ್ ಅವರು ಭಾಗವಹಿಸಿ ಮಾತನಾಡಿದರು. ಪಿ.ಎಸ್.ಐ. ಶರತ್‌ಕುಮಾರ್, ಎಎಸ್‌ಐ ಅಬ್ದುಲ್‌ಖುದ್ದುಸ್ ಮತ್ತಿತರರು ಅಪರಾಧಗಳನ್ನು ತಡೆಗಟ್ಟುವ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿ, ಅಪರಾಧಗಳನ್ನು ತಡೆಗಟ್ಟಲು ಸಮಸ್ತ ಸಾರ್ವಜನಿಕರು ಸಹಕರಿಸಬೇಕೆಂದು ಕರೆ ನೀಡಿದರು.
ಉರಿಗಾಂ ಪೊಲೀಸ್ ಠಾಣೆಯ ಸರಹದ್ದು ಕೆಜಿಎಫ್ ಜಿವಿಇಟಿ ಪದವಿ ಪೂರ್ವ ಕಾಲೇಜು ಮೊದಲಾದೆಡೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಸ್‌ಐ ಶರತ್‌ಕುಮಾರ್ ಅವರು ಭಾಗವಹಿಸಿ, ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಮಾಜದಲ್ಲಿ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯವಶ್ಯಕವಾಗಿದೆಯೆಂದರು.
ಪರವನಹಳ್ಳಿಯ ಗುಚ್ಚ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕೋತ್ಸವ, ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ೧೩ ಶಾಲೆಗಳಿಂದ ನೂರಾರು ಮಂದಿ ಈ ಸಂದರ್ಭದಲ್ಲಿ ಕೆಜಿಎಫ್ ಪೊಲೀಸ್ ಇಲಾಖೆಯ ವತಿಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎ.ಎಸ್.ಐ. ವಿಕ್ರಂ ಶ್ರೀನಿವಾಸ್ ಅವರು ಭಾಗವಹಿಸಿ ಮಾತನಾಡಿ, ಅಪರಾಧಗಳನ್ನು ತಡೆಗಟ್ಟಲು ಈಗಾಗಲೇ ಪೊಲೀಸ್ ಇಲಾಖೆಯು ಸಾಕಷ್ಟು ವಿಶೇಷ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಮುದಾಯದಲ್ಲಿ ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವುದು ಅತ್ಯವಶ್ಯಕವಾಗಿದೆಯೆಂದು ತಮ್ಮದೇ ಆದ ಶೈಲಿಯಲ್ಲಿ ಹನಿಗವನ, ಚುಟುಕು, ಲಾವಣಿಗಳ ಮೂಲಕ ಜನಾಕರ್ಷಕ ರೀತಿಯಲ್ಲಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ಪೊಲೀಸ್ ಪೇದೆ ಭೀಮಸೇನಕಾಂಬ್ಳೆ, ಶಾಲಾ, ಕಾಲೇಜು ಭೋಧಕರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರಶಿರ್ಷಿಕೆ: ೧೫ಕೆಜಿಎಫ್೦೧: ಅಪರಾಧಗಳನ್ನು ತಡೆಗಟ್ಟುವ ಕುರಿತು ಪೊಲೀಸರು ಜನಜಾಗೃತಿ ಕಾರ್ಯಕ್ರಮ ನಡೆಸಿದರು.

15 KGF.01 15KGF01

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s