ದಿನದ ಅಪರಾಧಗಳ ಪಕ್ಷಿನೋಟ 06ನೇ ಡಿಸೆಂಬರ್‍ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:06.12.2015 ರಂದು  ಬೆಳಿಗ್ಗೆ  10.00  ಗಂಟೆಯಿಂದ  ಸಂಜೆ 05.00 ಗಂಟೆ ಯವರೆಗೆ ದಾಖಲಾಗಿರವ ಪ್ರಕರಣಗಳ ವಿವರಗಳು

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :೦೧

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.12.2015 ರಂದು ಮದ್ಯಾಹ್ನ 3.00 ಗಂಟೆಗೆ ದೂರುದಾರರಾದ ಶ್ರೀ. ಕೃಷ್ಣಮೂರ್ತಿ, ಹೆಚ್.ಸಿ 27, ಮತ್ತು ಶಂಕರಪ್ಪ, ಹೆಚ್.ಸಿ 128 ರವರು ಪುಲಿಯೇಂದ್ರ ಲೇಔಟ್‌ ಬಳಿ ಗಸ್ತುಮಾಡುತ್ತಿದ್ದಾಗ, ಆರೋಪಿ ರಾಮಾಂಜಿ @ ರಾಮಾಂಜಿನಪ್ಪ ಬಿನ್ ಸೊಣ್ಣಪ್ಪ, ವಯಸ್ಸು 27 ವರ್ಷ, ವಾಸ ಚೋಳಘಟ್ಟ ಗ್ರಾಮ, ಕೋಲಾರ ತಾಲ್ಲೂಕು ರವರ ಮೇಲೆ ಅನುಮಾನಗೊಂಡು ದ್ವಿಚಕ್ರ ವಾಹನದ ಬಗ್ಗೆ ವಿಚಾರಿಸಲಾಗಿ ಸದರಿ ದ್ವಿಚಕ್ರವಾಹನಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲ, ಈಗ್ಗೆ ಎರಡು ತಿಂಗಳ ಹಿಂದೆ, ಡಿ.ಕೆ.ಹಳ್ಳಿ ರಸ್ತೆಯಲ್ಲಿರುವ ಸಂಭ್ರಮ್ ಆಸ್ಪತ್ರೆ ಬಳಿ ಯಾರೋ ನಿಲ್ಲಿಸಿ ಹ್ಯಾಂಡಲ್ ಲಾಕ್ ಹಾಕದೆ ಬಿಟ್ಟಿದನ್ನು, ಕಳುವು ಮಾಡಿಕೊಂಡು ಹೋಗಿದ್ದು, ಈ ದಿನ ದಾಸರಹೊಸಹಳ್ಳಿ ಕಡೆ ಎಲ್ಲಿಯಾದರೂ ಮಾರಾಟ ಮಾಡೋಣವೆಂದು ತೆಗೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ದ್ವಿಚಕ್ರವಾಹನದ ವಿವರವನ್ನು ಪರಿಶೀಲಿಸಲಾಗಿ ಬಜಾಜ್ ಸಿಟಿ 100 ದ್ವಿಚಕ್ರವಾಹನವಾಗಿದ್ದು, ನೋಂದಣಿ ಸಂಖ್ಯೆ KL-13 N 1574  ಇಂಜಿನ್ ನಂ DUMBMB11426 ಚಾರ್ಸಿ ನಂ DUFBMB46988  ಆಗಿದ್ದು, ಕಪ್ಪು ಮತ್ತು ಸಿಲ್ವರ್ ಬಣ್ಣದ್ದಾಗಿರುತ್ತೆ.

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ- ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ೦೧

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೇಸಿನ ದೂರುದಾರರಾದ ಶ್ರೀ.ಕಾರ್ತಿಕ್ ಬಿನ್ ರಾಜಣ್ಣ, ಕೆ.ವಿ.ಲೇಔಟ್, ಜಯನಗರ ೪ನೇ ಬ್ಲಾಕ್, ಬೆಂಗಳೂರು ರವರು  ದಿನಾಂಕ 05.12.2015 ರಂದು ರಾತ್ರಿ ಸುಮಾರು 11.00 ಗಂಟೆಯ ಸಮಯದಲ್ಲಿ ಬೇತಮಂಗಲ ಗುಟ್ಟಹಳ್ಳಿಯ ಟಿ.ಟಿ.ಡಿ ಕಲ್ಯಾಣ ಮಂಟಪದಲ್ಲಿದ್ದರಿಂದ  ಮದುವೆಯ  ಅರತಕ್ಷತೆ  ಮುಗಿಸಿ ತನ್ನ ಸಂಬಂದಿಯಾದ ಅಮರ ನಾರಾಯಣ ರವರನ್ನು  ಕಾರಿನಲ್ಲಿ  ಕುಳ್ಳಿತುಕೊಂಡು ಪೆಡದಂಪಲ್ಲಿ ಗ್ರಾಮಕ್ಕೆ ಹೋಗುತ್ತಿದ್ದಾಗ ಕಾವರಗಾನಹಳ್ಳಿ ಗ್ರಾಮದ ಕ್ರಾಸ್ ಬಳಿ ಎದುರು ಗಡೆಯಿಂದ ಆಟೋ ಸಂಖ್ಯೆ  ಕೆಎ-03-ಎಸಿ-6611 ರ ಚಾಲಕ  ಆಟೋವನ್ನು   ಅತಿ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಕಾರಿನ ಬಲಬಾಗದ ಮುಂಬಾಗ ಜಖಂಗೊಂಡಿರುತ್ತೆ. ಯಾರಿಗೂ ಯಾವುದೇ ಗಾಯಗಳು ಆಗಿರುವುದಿಲ್ಲ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ:ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s