ದಿನದ ಅಪರಾಧಗಳ ಪಕ್ಷಿನೋಟ 04ನೇ ಡಿಸೆಂಬರ್‍ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:03.12.2015 ರಂದು ಸಂಜೆ 5.00 ಗಂಟೆಯಿಂದ   ದಿನಾಂಕ: 04.12.2015 ರಂದು ಬೆಳಿಗ್ಗೆ  10.00 ಗಂಟೆಯವರೆಗೆ  ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ ಪ್ರಕರಣ (ನಿರ್ದಿಷ್ಟ ದಾವೆ) ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯನ್ ಬಿನ್ ರಾಮನ್, ಕೆ.ಜಿ.ಎಫ್ ರಸ್ತೆ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ,  ದೂರುದಾರರ ಬಾಬ್ತು ದೇಶಿಹಳ್ಳಿ ಗ್ರಾಮದ ಸರ್ವೆ ನಂಬರ್  88  ರಲ್ಲಿನ  ಜಮೀನಿನಲ್ಲಿ ಆಯಿಲ್ ಮಿಲ್ ನ್ನು ನಡೆಸುತಿದ್ದು,  ಆರೋಪಿಗಳಾದ ಅಶೋಕ್, ಮಾದವ ಪ್ರಸಾದ್, ಸಂಧ್ಯಾ ಪ್ರಸಾದ್, ನಿರ್ಮಲಾ ರವರುಗಳು ಸದರಿ ಸರ್ವೆ ನಂಬರ್ ಗೆ  ಸುಳ್ಳುದಾಖಲಾತಿಗಳನ್ನು ಸೃಷ್ಟಿಸಿ ದೂರುದಾರರಿಗೆ ಮೋಸಮಾಡಿ,  ದಿನಾಂಕ 06.10.2015 ರತಂದು ಬೆಳೆಗ್ಗೆ 10.00 ಗಂಟೆಗೆ ಆರೋಪಿಗಳು ಜಮೀನಿನೊಳಗೆ ಆಕ್ರಮ ಪ್ರವೇಶಮಾಡಿ ಜೆ.ಸಿ.ಬಿ ಯಿಂದ  ಸುಮಾರು  1 ಲಕ್ಷ ರೂ ಗಳ ಬೆಳೆಯನ್ನು ನಾಶಪಡೆಸಿದ್ದು,  ಇದನ್ನು ಕೇಳಿದಾಗ  ಆರೋಪಿಗಳು ದೂರುದಾರರನ್ನು ಕೆಟ್ಟಮಾತುಗಳಿಂದ ಬೈದು, ಕೈಗಳಿಂದ  ಹೋಡೆದು ಪ್ರಾಣ ಬೇದರಿಕೆ  ಹಾಕಿರುತ್ತಾರೆ.

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ- 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ (ನಿರ್ದಿಷ್ಟ ದಾವೆ) ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಫಾತಿ ಪುಷ್ಪರಾಣಿ ಕೋಂ ದಾಸ್, ಮೆಷಿನ್ ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ,  ದಿನಾಂಕ 30-08-2015 ರಂದು ಸುಮಾರು 19-00 ಗಂಟೆಯಲ್ಲಿ ಅರೋಪಿಗಳಾದ ಪ್ರವೀಣ್, ಪೌಳ್‌ರಾಜ್ ಮತ್ತು ಇಮ್ಯಾನುಯಲ್  ರವರು  ದೂರುದಾರರೊಂದಿಗೆ  ವಿನಾಕಾರಣ ಜಗಳ ಮಾಡಿ,  ಕೆಟ್ಟ ಮಾತುಗಳಿಂದ ಬೈದು, ಕಲ್ಲು ಮತ್ತು ರಾಡ್‌ಗಳಿಂದ ಹೊಡೆದು  ಚಾಕು ತೋರಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :  ಇಲ್ಲ

-ಭದ್ರತಾ ಕಾಯ್ದೆ :  ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a comment