ಪತ್ರಿಕಾ ಪ್ರಕಟಣೆ ದಿನಾಂಕ 02.12.2015

ಪತ್ರಿಕಾ    ಪ್ರಕಟಣೆ

ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಅಪರಾಧ ತಡೆ ಮಾಸಾಚರಣೆ.
ದಿನಾಂಕ:02.12.2015 ರಂದು ಬುದುವಾರ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ ಉಧ್ಘಾಟನಾ ಸಮಾರಂಭವನ್ನು ಬಂಗಾರಪೇಟೆಯ ಲಯನ್ಸ್ ಕ್ಲಬ್‌ನಲ್ಲಿ ನಡೆಸಲಾಯಿತು. ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಾನ್ಯ ಶ್ರೀ. ಹೆಚ್. ಆರ್. ಭಗವಾನ್‌ದಾಸ್ ಬಾಪೊಸೇ ರವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ, ಬಸವರಾಜಪ್ಪ, ಸಿಜೆಎಂಎಫ್‌ಸಿ ನ್ಯಾಯಾಲಯ ಮತ್ತು ಶ್ರೀ. ಮರಿಯಪ್ಪ, ಹೆಚ್ಚುವರಿ ಜೆ.ಎಂ.ಎಫ್‌ಸಿ ನ್ಯಾಯಾಲಯ ಬಂಗಾರಪೇಟೆ ರವರು ಉಪಸ್ಥತರಿದ್ದರು.

ಸಮಾರಂಭವನ್ನು ಕುರಿತು ಮುಖ್ಯ ಅತಿಥಿಗಳು ಮಾತನಾಡಿ ಸಾರ್ವಜನಿಕರು ಸಾಮಾನ್ಯ ಜ್ಞಾನ ಬೆಳಸಿಕೊಳ್ಳಬೇಕೆಂದು, ಸಮಾಜದ ಸ್ವಾಸ್ಥಕ್ಕೆ ಹಾನಿ ಉಂಟಾಗುವ ಕೆಲಸಗಳನ್ನು ಮಾಡಬಾರದು ಮಹಿಳೆ ಮತ್ತು ಮಕ್ಕಳನ್ನು ಸೋದರ ಬಾಂದವ್ಯದಿಂದ ಕಾಣಬೇಕು ಸಾರ್ವಜನಿಕರು ಅಪರಾದಗಳನ್ನು ತಡೆಗಟ್ಟಲು ಹಾಗೂ ಪತ್ತೆ ಮಾಡಲು ಪೊಲೀಸರಿಗೆ ಸಹಕಾರ ನೀಡಬೇಕು ಪೊಲೀಸರ ಮತ್ತು ಸಾರ್ವಜನಿಕರ ಮದ್ಯ ಇರುವ ಉತ್ತಮ ಕಾರ್ಯಾವೈಖರಿ ಬಗ್ಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಇತರೆ ಇಲಾಖೆಗಳ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿಗಳು, ವರದಿಗಳನ್ನು ಕಳುಹಿಸಿಕೊಟ್ಟು, ಸಮಸ್ಯೆ ಇತ್ಯರ್ಥಕ್ಕಾಗಿ ಕ್ರಮವಿಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾನ್ಯ ಶ್ರೀ. ಹೆಚ್. ಆರ್. ಭಗವಾನ್‌ದಾಸ್ ಬಾಪೊಸೇ ಅವರು ಸವಿಸ್ಥಾರವಾಗಿ ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ. ಹೆಚ್. ಆರ್. ಭಗವಾನ್‌ದಾಸ್, ಬಾಪೊಸೇ ಅವರು ಉಪಸ್ಥಿತರಿದ್ದು, ಅಪರಾಧ ತಡೆ ಮಾಸಾಚರಣೆಯ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಒದಗಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀ. ಪುಟ್ಟಮಾದಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀ. ಜಿ.ಎನ್. ವೆಂಕಟಾಚಲಪತಿ, ಶ್ರೀ. ಜಗದೀಶ್ ಸಿ.ಪಿ.ಐ ಶ್ರೀ. ಲಕ್ಷ್ಮಿನಾರಾಯಣ, ಪಿಐ, ಡಿಎಸ್‌ಬಿ, ಶ್ರೀ. ಕೃಷ್ಣಾ, ಪಿಐ, ಡಿಸಿಐಬಿ, ಹಾಗೂ ಈ ಜಿಲ್ಲೆಯ ಎಲ್ಲಾ ಪಿ.ಎಸ್.ಐ. ರವರುಗಳು ಹಾಜರಿದ್ದರು.

DSC05320 DSC05324 DSC05327 DSC05330 DSC05331 DSC05332 DSC05338 DSC05341

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s