ಪ ತ್ರಿ ಕಾ ಪ್ರ ಕ ಟ ಣೆ

ಪ ತ್ರಿ ಕಾ   ಪ್ರ ಕ ಟ ಣೆ

ಕೆಜಿಎಫ್‌ನ ಉಪ ಕಾರಾಗೃಹ ಪರಿವೀಕ್ಷಣೆ ನಡೆಸಿದ ಎ.ಡಿ.ಜಿ.ಪಿ ಮಾನ್ಯ ಕಮಲ್‌ಪಂತ್ ಭೇಟಿ

         ಕೆಜಿಎಫ್‌ನ ಉಪ ಕಾರಾಗೃಹಕ್ಕೆ ಸೋಮವಾರದಂದು ಸಂಜೆ ರಾಜ್ಯ ಕಾರಾಗೃಹಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ  ಮಾನ್ಯ ಕಮಲ್‌ಪಂತ್ ಅವರು ಭೇಟಿ ನೀಡಿ, ಪರಿವೀಕ್ಷಣೆ ನಡೆಸಿದರು.
ಚಾಂಫೀಯನ್‌ರೀಫ್ಸ್‌ನಲ್ಲಿನ ಉಪಕಾರಾಗೃಹಕ್ಕೆ ಎ.ಡಿ.ಜಿ.ಪಿ. ಮಾನ್ಯ  ಕಮಲ್‌ಪಂತ್ ಅವರು ಅಧಿಕೃತ ಭೇಟಿ ನೀಡಿ, ಪರಿವೀಕ್ಷಣೆಯನ್ನು ನಡೆಸಿದರು.

       ಕಾರಾಗೃಹಗಳ ಎ.ಡಿ.ಜಿ.ಪಿ. ಮಾನ್ಯ ಕಮಲ್‌ಪಂತ್ ಅವರು ಕೆಜಿಎಫ್ ಉಪ ಕಾರಾಗೃಹಕ್ಕೆ ಭೇಟಿ ನೀಡಿ, ಇಲ್ಲಿನ ಖೈದಿಗಳ ಕುಂದುಕೊರತೆಗಳನ್ನು ವಿಚಾರಿಸಿದರು. ಖೈದಿಗಳಿಗೆ ಲಭ್ಯವಿರುವ ಮೂಲಭೂತ ಸೌಕರ್ಯ, ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ಕಾರಾಗೃಹ ಅಧಿಕಾರಿ, ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು. ಉಪ ಕಾರಾಗೃಹದ ಮುಖ್ಯ ವಾರ್ಡನ್  ಶ್ರೀ ಕೃಷ್ಣಮೂರ್ತಿ ಅವರು ಹಾಜರಿದ್ದು, ಎ.ಡಿ.ಜಿ.ಪಿ. ಮಾನ್ಯ ಕಮಲ್‌ಪಂತ್ ಅವರಿಗೆ ಅಗತ್ಯ ಮಾಹಿತಿಯನ್ನು ಒದಗಿಸಿದರು.

        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಮಾನ್ಯ  ಹೆಚ್.ಆರ್. ಭಗವಾನ್‌ದಾಸ್ ಅವರು ಎಡಿಜಿಪಿ, ಮಾನ್ಯ ಕಮಲ್‌ಪಂತ್ ಅವರಿಗೆ ಪುಷ್ಪಗುಚ್ಚವನ್ನು ನೀಡಿ ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ಡಿ.ಎ.ಆರ್.ನ ಆರ್‌ಪಿಐ, ಶ್ರೀ. ಕೆ.ಆರ್.ರಘು ಅವರು ಗೌರವ ರಕ್ಷೆ ನೀಡಿ, ಗೌರವ ವಂದನೆ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಪ್ರಭಾರ ಡಿವೈಎಸ್ಪಿ  ಶ್ರೀ. ಎಂ.ಡಿ.ಲಕ್ಷ್ಮೀನಾರಾಯಣ, ಶ್ರೀ  ಆರ್‌ಪಿಐ ಕೆ.ಆರ್.ರಘು ಹಾಗೂ ಪಿಎಸ್‌ಐ ಶ್ರೀ. ರಂಗಶಾಮಯ್ಯ, ಶ್ರೀ. ರಾಘವೇಂದ್ರ ಬೈಂದೂರು, ಆರ್.ಎಸ್.ಐ. ಶ್ರೀ. ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

30 KGF 02 (1) 30 KGF 02 (2) 30 KGF 02 (3) KAMALPANTH KGF 1

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s