ದಿನದ ಅಪರಾಧಗಳ ಪಕ್ಷಿನೋಟ 30ನೇ ನವೆಂಬರ್‍ 2015ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ30.11.2015 ರಂದು  ಬೆಳಿಗ್ಗೆ  10.00  ಗಂಟೆಯಿಂದ  ಸಂಜೆ 05.00 ಗಂಟೆ ಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣನ್ ಬಿನ್ ಚಿನ್ನಪ್ಪನ್, ಮಸ್ಕಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ,  ದಿನಾಂಕ 29.11.2015 ರ ರಾತ್ರಿ 07-00 ಗಂಟೆಯಿಂದ 30.11.2015 ರ ಬೆಳಗ್ಗೆ 06-00 ಗಂಟೆಯ ಮಧ್ಯೆ ಮಸ್ಕಂ ಎ ಬ್ಲಾಕಿನಲ್ಲಿರುವ ದೂರುದಾರರ ಮನೆಯ ಮುಂಬಾಗಿಲಿನ ಬೀಗವನ್ನು ಯಾರೋ ಕಳ್ಳರು ಜಖಂಗೊಳಿಸಿ ಮನೆಯೊಳಗೆ ಪ್ರವೇಶಿಸಿ, ಮನೆಯೊಳಗಿದ್ದ ಬೀರುವಿನ ಬಾಗಿಲನ್ನು ಜಖಂಗೊಳಿಸಿ ಬೀರುವಿನಲ್ಲಿದ್ದ 1) ಚಿಕ್ಕದಾದ 3 ಬಂಗಾರದ ಉಂಗುರಗಳು 2)ಒಂದು ಚಿಕ್ಕ ಬಂಗಾರದ ಸಾಸ ನಕ್ಲೀಸ್ 3)ಒಂದು ಚಿಕ್ಕದಾದ ಬಂಗಾರದ ಕತ್ತಿನ ಚೈನು, ಒಟ್ಟು 20 ಗ್ರಾಮ ತೂಕದವುಗಳನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ. ಒಟ್ಟು ಮೌಲ್ಯ 22,500/- ರೂಗಳಾಗಿರುತ್ತೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : 02

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಜಯ್ ಬಿನ್ ಬಾಲನ್, ಹೆಚ್.ಪಿ ನಗರ, ಬೆಮೆಲ್ ನಗರ ರವರು ನೀಡಿದ ದೂರಿನಲ್ಲಿ, ದೂರಾದಾರರು 2013 ನೇ ಸಾಲಿನಲ್ಲಿ ಹೆನ್ರೀಸ್ ವಾಸಿ ಪ್ರಸಾದ್ ಎಂಬುವರಿಂದ 20,000/- ರೂಗಳು ಸಾಲತೆಗೆದುಕೊಂಡು, ಸಾಲವನ್ನು ವಾಪಸ್ಸು ನೀಡಿದ್ದರೂ ಸಹ ದಿನಾಂಕ 29.11.2015 ರಂದು ರಾತ್ರಿ ಸುಮಾರು 8.30 ಗಂಟೆಗೆ ದೂರುದಾರರು ಆಲದಮರದ ಬಳಿ ಇರುವ ತನ್ನ ಬೇಕರಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ, ಆರೋಪಿ  ಪ್ರಸಾದ್  ಇತರೆ ಮೂರು ಜನರನ್ನು  ಕರೆದುಕೊಂಡು ಬೇಕರಿಯ ಬಳಿ ಹೋಗಿ, ದೂರುದಾರರನ್ನು  “ಹಣ ಕೊಡು” ಎಂದು ಕೇಳಿ, ಕೆಟ್ಟಮಾತುಗಳಿಂದ ಬೈದು,  ದೂರುದಾರರ ಬೇಕರಿ ಒಳಗಡೆ ನುಗ್ಗಿ, ದೂರುದಾರರನ್ನು ಹೊಡೆದು, ಬೇಕರಿಯಲ್ಲಿರುವ ಶೋ ಕೇಸ್, ತೂಕ ಮಾಡುವ ಸ್ಕೇಲ್ ಮೆಷನ್, ಗ್ಲಾಸ್ ಬಾಟಲ್ ಗಳನ್ನು ಹೊಡೆದು, ಅವುಗಳಲ್ಲಿ ಇದ್ದ ತಿನ್ನುವ ಪದಾರ್ಥಗಳನ್ನು ನಾಶಪಡಿಸಿರುತ್ತಾರೆ.

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲೋಕೇಶ್ ಬಿನ್ ಪೊನ್ನನ್, ಉರಿಗಾಂಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದೂರುದಾರರಿಗೂ ಮತ್ತು  ಅವರ ಚಿಕ್ಕಪ್ಪನಾದ ಉರಿಗಾಂಪೇಟೆಯ ದೀನಾ ದಯಾಳನ್ ರವರಿಗೆ ನಿವೇಶನದ ವಿಚಾರದಲ್ಲಿ ತಕರಾರು ಇದ್ದು, ಸದರಿ ವಿಚಾರದಲ್ಲಿ ದೂರುದಾರರು ದಿನಾಂಕ 29.11.2015 ರಂದು ಸಂಜೆ 06.30 ಗಂಟೆಯಲ್ಲಿ ದೀನಾದಯಾಳನ್ ರವರ  ಮನೆಯ ಬಳಿ ಹೋಗಿ ನಿವೇಶನವನ್ನು ಯಾವಾಗ ತಮಗೆ ಬರೆದುಕೊಡುತ್ತೀರಿ”  ಎಂದು ಕೇಳಿದಾಗ ದೀನಾ ದಯಾಳನ್ ರವರು    ಬರೆದುಕೊಡುವುದಿಲ್ಲ, ಎಂದು ಹೇಳಿ ಚಾಕುವನ್ನು ಎತ್ತಿಕೊಂಡು ಹೊಡೆಯಲು ಬಂದಿದ್ದು,  ದೂರುದಾರರು  ಚಾಕುವನ್ನು ಕಿತ್ತುಕೊಂಡಾಗ ಕೆಟ್ಟಮಾತುಗಳಿಂದ ಬೈದಿರುತ್ತಾನೆ. ಆರೋಪಿ ಜನಾ@ಜನಾರ್ಧನ್ ಕಲ್ಲಿನಿಂದ ದೂರುದಾರರ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ- ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 08

ಉರಿಗಾಂ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಲು ಹೊಂಚುಹಾಕುತ್ತಿದ್ದ ಈ ಕೆಳಕಂಡ ಆಸಾಮಿಗಳ ವಿರುದ್ದ ಪ್ರತ್ಯೇಕವಾಗಿ ಭದ್ರತಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುತ್ತದೆ.

  1. ತಂಗರಾಜ್  ಬಿನ್ ಅಂತೋನಿ, ವಯಸ್ಸು 37 ವರ್ಷ, , ವಾಸ ನಂ 05, ಚಾಮರಾಜ ಪೇಟೆ, ಅಂಡ್ರಸನ್‌ಪೇಟೆ
  2.  ಸುರೇಶ್ ಬಿನ್ ಏಕಾಬರಂ, ವಯಸ್ಸು 38 ವರ್ಷ , ವಾಸ- ನಮ 51, ನ್ಯೂ ಮಿಲ್ ಬ್ಲಾಕ್ , ಉರಿಗಾಂ
  3. ಚಂದರ್‍ ಬಿನ್ ಕೃಷ್ಣನ್, 52 ವರ್ಷ, ಅಶೋಕ್ ನಗರ, ಕೆ.ಜಿ.ಎಫ್
  4.  ಇಳಂಗೋವನ್ ಬಿನ್ ಸದಾನಂದ, ವಯಸ್ಸು 55 ವರ್ಷ, ವಾಸ- ನಂ 13 ಅಶೋಕ ನಗರ, ಉರಿಗಾಂ

ಬೆಮಲ್ ನಗರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಯ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುತ್ತದೆ.

  1. ರಾಜು ಬಿನ್ ತಿಮ್ಮಪ್ಪ, ಕುವೆಂಪು ನಗರ, ದಾಸರಹೊಸಹಳ್ಳಿ, ಬಂಗಾರಾಪೇಟೆ

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಯ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುತ್ತದೆ.

  1. ನಹೀದ್ ಪಾಷಾ ಬಿನ್ ಮಹಮ್ಮದ್ ಗೌಸ್, ಕೃಷ್ಣಾವರಂ ಗ್ರಾಮ, ಕೆ.ಜಿ.ಎಫ್.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಗಳ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುತ್ತದೆ.

  1. ಭರತ್ ಬಿನ್ ಪೆರುಮಾಲ್, ಇಂದಿರಾನಗರ, ಬಂಗಾರಪೇಟೆ
  2. ಆದಿಲ್ ಪಾಷಾ, ಸೇಠ್ ಕಾಂಪೌಂಡ್, ಬಂಗಾರಪೇಟೆ.

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ:ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s