ದಿನದ ಅಪರಾಧಗಳ ಪಕ್ಷಿನೋಟ 28ನೇ ನವಂಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:28.11.2015 ರಂದು  ಬೆಳಿಗ್ಗೆ  10.00  ಗಂಟೆಯಿಂದ  ಸಂಜೆ 05.00 ಗಂಟೆ ಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ- ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ:  ೦೧

ಬಂಗಾರಪೇಟೇಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಹುಣಸನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ.    ಈ ಪ್ರಕರಣದ ದೂರೂದಾರರಾದ ಶ್ರೀಮತಿ. ಸರೋಜಮ್ಮ ಕೋಂ ತಿಮ್ಮರಾಯಪ್ಪ, ಯಳುವನಹಳ್ಳಿ, ಮಾಲೂರು ತಾಲ್ಲೂಕು ರವರ ತಂಗಿಯಾದ ನೀಲಮ್ಮ ಕೋಂ ತಿಮ್ಮರಾಯಪ್ಪ, ರವರಿಗೆ ಮದುವೆಯಾಗಿದ್ದು, ಈಗ್ಗೆ ಸುಮಾರು ಒಂದು ವರ್ಷದಿಂದ ಗಾಳಿಚೆಷ್ಟೆ ಇದ್ದುದಾಗಿ ಬುದ್ಧಿ ಭ್ರಮಣೆಯಾಗಿದ್ದು, ಆಕೆಗೆ ತನ್ನ ಗಂಡ ಮತ್ತು ಮಕ್ಕಳು ಯಾರೆಂಬುದೇ ಜ್ಞಾಪಕ ಇಲ್ಲದೆ ಇದ್ದು, ಈ ವಿಷಯದಲ್ಲಿ ಪಿರ್ಯಾದಿದಾರರಾದ ಸರೋಜಮ್ಮ ರವರು ಆಕೆಯನ್ನು ದೇವಸ್ಥಾನಗಳಲ್ಲಿ ಮತ್ತು ಬೆರೆ ಕಡೆಗಳಲ್ಲಿ ತೋರಿಸಿದ್ದಾಗಿಯೂ ಸಹ ಸರಿಹೋಗದೇ ಇದ್ದುದರಿಂದ ಯಾರೋ ಏಸು ದೇವರನ್ನು ಪ್ರಾಥನೆ ಮಾಡಿದರೆ ಸರಿಹೋಗುತ್ತೆ ಎಂದು ತಿಳಿಸಿದ ಕಾರಣ ಈಗ್ಗೆ  6 ತಿಂಗಳಿನಿಂದ ಚರ್ಚ್  ಗೆ ಹೋಗುತ್ತಿದ್ದು, ಮೃತಳಾದ ನೀಲಮ್ಮ ಆಗಾಗ  ಏಸು ದೇವರು ತನ್ನನ್ನು ಕರೆಯುತ್ತಿದ್ದಾರೆ. ಬೆಂಕಿ ಕೆಂಡವಾಗಿ ತನ್ನ ಕಣ್ಣಿಗೆ ಕಾಣುತ್ತಿದ್ದಾರೆ ಎಂದು ಹೇಳುತ್ತಿದ್ದು, ದಿನಾಂಕ 26.11.2015 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಮೊದಲನೆ ಮಗಳಾದ ಯಶೋದಮ್ಮ ರವರು ಫೋನ್ ಮಾಡಿ ಮೃತಳಾದ ನೀಲಮ್ಮ ರವರು ಬೆಳಿಗ್ಗೆ ಸುಮಾರು 10.30 ಗಂಟೆ ಸಮಯದಲ್ಲಿ ಬೆಂಕಿ ಹಚ್ಚಿಕೊಂಡಿದ್ದಾಳೆಂತಲು ಆಕೆಯನ್ನು ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಸೇರಿಸಿರುವುದಾಗಿ ತಿಳಿಸಿದ್ದರಿಂದ ಪಿರ್ಯಾದಿದಾರರು  ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ನೋಡಿದಾಗ ವಿಷಯ ನಿಜವಾಗಿದ್ದು, ನಂತರ ಈ ಬಗ್ಗೆ ಯಶೋದಮ್ಮ ರವರನ್ನು ಕೇಳಲಾಗಿ ಮೃತ ನೀಲಮ್ಗ ದಿನಾಂಕ 25.11.2015 ರಂದು ರಾತ್ರಿ ತಮ್ಮ ಮನೆಗೆ ಬಂದಿದ್ದು, ದಿನಾಂಕ 26.11.2015 ರಂಧು ಯಶೋದಮ್ಮ ಕೆಲಸಕ್ಕೆ ಹೋದ ಸಮಯದಲ್ಲಿ ಮೃತ ನೀಲಮ್ಮ ಮನೆಯಲ್ಲಿದ್ದ ಸ್ಟೌವ್ ನಿಂದ ಸೀಮೆ ಎಣ್ಣೆಯನ್ನು ತೆಗೆದು ಅದನ್ನು ಮೈ ಮೇಲೆ ಸುರಿದುಕೊಂಡು ಬೆಂಕಿ ಅಂಟಿಸಿಕೊಂಡಿರುತ್ತಾಳೆಂತ ತಿಳಿಸಿದ್ದು, ಆಕೆಗೆ ಆದ ಸುಟ್ಟ ಗಾಯಗಳ  ದೆಸೆಯಿಂದಾಗಿ ದಿನಾಂಕ 27.11.2015 ರಂದು ಸಂಜೆ 6.30 ಗಂಟೆಯಲ್ಲಿ ಮೃತ ಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s