ಪ ತ್ರಿ ಕಾ ಪ್ರ ಕ ಟ ಣೆ ದಿನಾಂಕ 28.11.2015

ಪ ತ್ರಿ ಕಾ ಪ್ರ ಕ ಟ ಣೆ

ಕನಕದಾಸರು ಚಿರಸ್ಮರಣೀಯರು:  ಮಾನ್ಯ ಹೆಚ್.ಆರ್. ಭಗವಾನ್‌ದಾಸ್, ಬಾಪೊಸೇ, ಪೊಲೀಸ್‌ ಅಧೀಕ್ಷಕರು ಕೆ.ಜಿಎಫ್ ರವರ ನೇತೃತ್ವದಲ್ಲಿ

ದಾಸ ಶ್ರೇಷ್ಠ ಕವಿ ಕನಕದಾಸರು ನಿತ್ಯ ಸ್ಮರಣೀಯರೆಂದು, ಭಾರತೀಯ ದಾಸ ಸಾಹಿತ್ಯದ ಸಂಸ್ಕೃತಿಯನ್ನು ಇಂದಿಗೂ ಉಳಿಸಿ ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್‌ಚೇತನ ಕನಕದಾಸರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾನ್ಯ ಹೆಚ್.ಆರ್. ಭಗವಾನ್‌ದಾಸ್ ಅವರು ನುಡಿದರು.

         ಅವರು ಕೆಜಿಎಫ್‌ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶ್ರದ್ದಾಭಕ್ತಿಯಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಪೂರ್ವ ಗೌರವವನ್ನು ಸಲ್ಲಿಸಿದ ಬಳಿಕ ಮಾತನಾಡಿ, ಕನ್ನಡ ಕೀರ್ತನಾ ಪರಂಪರೆಯನ್ನು ಬೆಳಗಿದ ಕನಕದಾಸರು ಆಧ್ಯಾತ್ಮ ಯಾತ್ರೆಯ ಮೂಲಕ ಈ ಜಗತ್ತಿನಲ್ಲಿ ನಿತ್ಯಸ್ಮರಣೀಯರಾಗಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಮಾನ್ಯ ಹೆಚ್.ಆರ್. ಭಗವಾನ್‌ದಾಸ್ ಅವರು ವಿವರಿಸಿದರು. ಕನಕದಾಸರ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಎಸ್ಪಿ ಭಗವಾನ್‌ದಾಸ್ಮಾನ್ಯ ಹೆಚ್.ಆರ್. ಭಗವಾನ್‌ದಾಸ್ ಅವರು ಕರೆ ನೀಡಿದರು.

ಶ್ರೀ.  ಪುಟ್ಟಮಾದಯ್ಯ, ಡಿವೈಎಸ್ಪಿ  ಅವರು ಮಾತನಾಡಿ, ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾಸರಲ್ಲಿ ಒಬ್ಬರಾಗಿದ್ದು, ಜೀವನಾನುಭವ, ಲೋಕಾನುಭವದ ಸತ್ಯಾಸತ್ಯತೆಗಳನ್ನು ಕಾವ್ಯದ ಮೂಲಕ ಜನಸಾಮಾನ್ಯರಿಗೆ ಸಮರ್ಪಿಸಿ,  ಜನಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರುಗಳಾದ   ಎಂ.ಡಿ. ಲಕ್ಷ್ಮೀನಾರಾಯಣ, ಜಿ.ಎನ್. ವೆಂಕಟಾಚಲಪತಿ, ಕೃಷ್ಣಾ,  ಎಂ.ಎಸ್. ಪವನ್‌ಕುಮಾರ್, ಸಶಸ್ತ್ರ ಮೀಸಲು ಪಡೆಯ ಇನ್ಸ್‌ಪೆಕ್ಟರ್ ಕೆ.ಆರ್. ರಘು,  ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ವಿ.ವಿಶ್ವನಾಥ,  ಕೆ.ಜಿ.ಎಫ್‌ ಎಲ್ಲಾ  ಪಿ.ಎಸ್.ಐ.ಗಳು, ಅಧಿಕಾರಿ,  ಹಾಗೂ ಜಿಲ್ಲಾ ಪೊಲೀಸ್‌ ಕಛೇರಿಯ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

28 KGF 01 28 KGF.01 28 KGF01 28KGF.01 DSC05248

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s