ದಿನದ ಅಪರಾಧಗಳ ಪಕ್ಷಿನೋಟ 12ನೇ ನವೆಂಬರ್‍ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:11.11.2015 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 12.11.2015 ರಂದು ಬೆಳಿಗ್ಗೆ 10.00 ಗಂಟೆಯ ವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಡಕಾಯತಿ ಮಾಡುವ ಉದ್ದೇಶದಿಂದ ಹೊಂಚು ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 11.11.2015 ರಂದು ರಾತ್ರಿ 11.15 ಗಂಟೆಯಲ್ಲಿ ದೂರುದಾರರಾದ ಶ್ರೀ. ಸೂರ್ಯಪ್ರಕಾಶ್, ಪಿ.ಎಸ್‌.ಐ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆ ಮತ್ತು ಅವರ ಸಿಬ್ಬಂದಿಯವರಾದ ನಾಗರಾಜ ಪಿಸಿ 195, ಮತ್ತು ಶ್ರೀನಿವಾಸ ಪಿಸಿ 171 ರವರೊಂದಿಗೆ ಅಮವಾಸೆಯ ಪ್ರಯುಕ್ತ ವಿಶೇಷ ಗಸ್ತಿನಲ್ಲಿದ್ದು ಪೊಟ್ಟೆಪಲ್ಲಿ ರಸ್ತೆಯಲ್ಲಿರುವ ಕಾಟ್ ಮೇರಿ ಚರ್ಚ್ ನ ಕಾಂಪೌಂಡ್ ಒಳಗಡೆ ಹೋಗಿ ನೋಡಲಾಗಿ 05 ಜನ ಆರೋಪಿಗಳಾದ 1. ವಿಮಲ್ ಕುಮಾರ್‍ ಬಿನ್ ರಾಜ, ಮಸ್ಕಂ ಎ ಬ್ಲಾಕ್, ಆಂಡ್ರಸನ್‌ಪೇಟೆ, 2. ಎಬಿನೇಷನ್ ಬಿನ್ ಜೇವಿಯರ್‍, ಚಾಮರಾಜಪೇಟೆ, ಆಂಡ್ರಸನ್‌ಪೇಟೆ  3.ಸುನಿಲ್ ಬಿನ್ ಸುರೇಶ್, ಚಾಮರಾಜಪೇಟೆ, ಆಂಡ್ರಸನ್‌ಪೇಟೆ, 4. ಸೂರ್ಯ ಬಿನ್ ಸುರೇಶ್, ಚಾಮರಾಜಪೇಟೆ, ಆಂಡ್ರಸನ್‌ಪೇಟೆ 5. ಅಜಿತ್ ಬಿನ್ ವಿನ್ಸೆಂಟ್, ಚಾಮರಾಜಪೇಟೆ, ಆಂಡ್ರಸನ್‌ಪೇಟೆ ರವರುಗಳು ಆಯುಧಗಳ ಸಮೇತ ದರೋಡೆ ಮಾಡುವ ಬಗ್ಗೆ ಮಾತನಾಡಿಕೊಂಡು ಸಂಚನ್ನು ರೂಪಿಸುತ್ತಿದ್ದವರನ್ನು ಸುತ್ತುವರೆದು ಹಿಡಿಯಲು ಪ್ರಯತ್ನಿಸಿದಾಗ ಅವರು ಅಲ್ಲಿಂದ ಓಡಲು ಪ್ರಯತ್ನಿಸಿದ್ದು ಈ ಪೈಕಿ ಇಬ್ಬರು ವಿಮಲ್ ಕುಮಾರ್‍ ಮತ್ತು ಎಬಿನೇಷನ್ ರವರು ಸಿಕ್ಕಿದ್ದು ಇನ್ನು ಉಳಿದ ಮೂರು ಜನ ಆರೋಪಿಗಳು ತಪ್ಪಿಸಿಕೊಂಡಿರುತ್ತಾರೆ.

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶ್ರೀಮತಿ ಹೇಮಾವತಿ ಕೋಂ ಸಂಪತ್ ಕುಮಾರ್‍, ಕಾರಹಳ್ಳಿ ರಸ್ತೆ ಬಂಗಾರಪೇಟೆ ರವರ ಮಗಳಾದ ಕು// ಜೋತಿ, ೨೦ ವರ್ಷ  ರವರು ದಿನಾಂಕ 09.11.2015 ರಂದು ಕೋಲಾರ ಮಹಿಳಾ ಕಾಲೇಜಿನಲ್ಲಿ ಪರೀಕ್ಷೆ ಇದ್ದ ಪ್ರಯುಕ್ತ ಮಧ್ಯಾಹ್ನ 12.30 ಗಂಟೆಗೆ ಪರೀಕ್ಷೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಸಂಜೆಯಾದರು ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾಳೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಬ್ಕಾರಿ ಕಾಯ್ದೆ: ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s