ದಿನದ ಅಪರಾಧಗಲ ಪಕ್ಷಿನೋಟ 09 ನೇ ನವೆಂಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:08.11.2015 ರಂದು ಬೆಳಿಗ್ಗೆ ಗಂಟೆಯಿಂದ ದಿನಾಂಕ 09.11.012 ರಂದು 10.00 ಗಂಟೆಯ ವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 08.11.2015 ರಂದು ದೂರುದಾರರಾದ ಶ್ರೀ ಗೋಪಾಲ್‌ ಬಿನ್‌ ವೆಂಕಟೇಶಪ್ಪ, ದೇವೇರಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ:06-11-2015 ರಂದು  ದೇವೇರಹಳ್ಳಿ ಗ್ರಾಮದ ವಾಸಿಯಾದ ಪ್ರೇಮ್ ಕುಮಾರ್ ರವರೊಂದಿಗೆ ದೂರುದಾರರು ಬೇತಮಂಗಲದಿಂದ ದೇವೇರಹಳ್ಳಿಗೆ ಹೋಗಲು ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನ ಸಂಖ್ಯೆ KA-03-EA-4110 ದಲ್ಲಿ ಬೇತಮಂಗಲದ ಕ್ಯಾಸಂಬಳ್ಳಿ ರಸ್ತೆಯಲ್ಲಿರುವ  ಚಲಾಯಿಸಿಕೊಂಡು ಹೋಗುತ್ತಿರುವಾಗ ಬೇತಮಂಗಲ ಕಡೆಯಿಂದ ಯಾವುದೋ ಒಂದು ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಸತ್ತೀಶ್‌ ಮತ್ತು ಪ್ರೇಮ್‌ ಕುಮಾರ್‌ ರವರು ರಸ್ತೆಯಲ್ಲಿ ಬಿದ್ದು ರಕ್ತ ಗಾಯವಾಗಿರುತ್ತದೆ.

-ಭದ್ರತಾ ಕಾಯ್ದೆ : ಇಲ್ಲ

 

-ಇತರೆ ಪ್ರಕರಣಗಳು :ಇಲ್ಲ

-ಅಬ್ಕಾರಿ ಕಾಯ್ದೆ:- 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಬ್ಕಾರಿ ಕಾಯ್ದೆ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08.11.2015 ರಂದು ರಾಬರ್ಟ್‌‌ಸನ್‌ಪೇಟೆ ಪಿಎಸ್‌ಐ ರವರಿಗೆ ಬಂದ ವರ್ತಮಾನದ ಮೇರೆಗೆ  ಪಿಎಸ್‌‌ಐ ರವರು ಮತ್ತು ಸಿಬ್ಬಂದಿಯವರೊಂದಿಗೆ ಸೂರಾಜ್ ಮುಲ್ ವೃತ್ತದ ಬಳಿ ಬರುತ್ತಿದ್ದಾಗ ಯಾರೋ ಒಬ್ಬ ಅಸಾಮಿ ಎರಡು ರಟ್ಟಿನ ಮದ್ಯದ ಬಾಕ್ಸ್ ಗಳನ್ನು  ಆವರ ದ್ವಿಚಕ್ರ ವಾಹನದಲ್ಲಿ ಮುಂದೆ ಇಟ್ಟುಕೊಂಡಿದ್ದು, ಪೊಲೀಸರನ್ನು ಕಂಡು ಸದರಿ ವಾಹನವನ್ನು ಮತ್ತು ಮಧ್ಯದ ಬಾಕ್ಸ್  ಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ದ್ವಿಚಕ್ರ ವಾಹನದಲ್ಲಿದ್ದ ತಲಾ ಒಂದು ಮಧ್ಯದ ಬಾಕ್ಸ್ 180 ಮಿ.ಲೀ ಇರುವ Bangalore Malt Whisky ಯ 48 ಪ್ಯಾಕೆಟ್ ಗಳು ಇದ್ದು, ಒಟ್ಟು 96 ಪ್ಯಾಕೆಟ್ ಗಳನ್ನು ಮತ್ತು ಟಿ.ವಿ.ಎಸ್ ಸ್ಟಾರ್ ಸಿಟಿ ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ ಕೆ.ಎ-08 ಎಸ್ -3359  ರನ್ನು  ಅಮಾನತ್ತು  ಪಡಿಸಿಕೊಂಡು  ಪ್ರಕರಣ ದಾಖಲಿಸಿರುತ್ತಾರೆ.

-ಅಸ್ವಾಭಾವಿಕ ಮರಣ: 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 08.11.2015 ರಂದು ದೂರುದಾರರಾದ ಶ್ರೀ. ಸತ್ತೀಶ್‌ ಬಿನ್‌  ರಾಜೇಂದ್ರನ್‌, ಪಾರಂಡಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ: 08.11.2015 ರಂದು ದೂರುದಾರರ ತಾಯಿಯಾದ ಶ್ರೀಮತಿ.ಮಲ್ಲಿಗಾ, ವಯಸ್ಸು 46 ವರ್ಷ ರವರು ಬೆಳಗಿನ ಜಾವ 6.45 ಗಂಟೆಯಲ್ಲಿ ಪಾರಾಂಡಹಳ್ಳಿಯಲ್ಲಿರುವ ಅವರ ವಾಸದ ಮನೆಯ ಬಳಿ ಬಟ್ಟೆ ಒಣಗಿಸುವ ಸಲುವಾಗಿ ಮನೆಯ ಮುಂಭಾಗ ಅಳವಡಿಸಿದ್ದ ಕಬ್ಬಿಣದ ತಂತಿಯ ಮೇಲೆ ಬಟ್ಟೆಗಳನ್ನು ಹಾಕುತ್ತಿದ್ದಾಗ ಅವರಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ವರ್ಶವಾಗಿ ಕೆಳಗೆ ಬಿದ್ದಿದ್ದು, ಮೃತಪಟ್ಟಿರುತ್ತಾರೆ.

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08-11-2015 ರಂದು  ದೂರುದಾರರಾದ ಶ್ರೀ. ಮಂಜುನಾಥ್‌ ಬಿನ್‌  ರಾಮಚಂದ್ರಪ್ಪ ಪಿಚ್ಚಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ 08.11.2015 ರಂದು  ಮದ್ಯಾಹ್ನ ಸುಮಾರು  3.30 ಗಂಟೆ ಸಮಯದಲ್ಲಿ ದೂರುದಾರರ ತಮ್ಮನಾದ ಅಯ್ಯಪ್ಪ ರವರು ಅವರ ತಂದೆ- ತಾಯಿಯವರನ್ನು ಕುಡಿಯಲು ಹಣ ಕೇಳಿದ್ದು, ಅವರು ಹಣ ಕೊಡಲು ನಿರಾಕರಿಸಿದ್ದಕ್ಕೆ, ಮದ್ಯದ ಚಟಕ್ಕೆ ಬಲಿಯಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾಯಲು ಮನೆಯಲ್ಲಿದ್ದ ಮರದ ತರಾಯಿಗೆ ನೇಣು ಹಾಕಿಕೊಂಡು ಅಯ್ಯಪ್ಪ ಎಂಬುವರು  ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s