ದಿನದ ಅಪರಾಧಗಳ ಪಕ್ಷಿನೋಟ 03 ನೇ ನವೆಂಬರ್‌ 2015 ಸಂಜೆ

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 03.11.2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌‌ ಠಾಣೆಯಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 03.11.2015 ರಂದು  ದೂರುದಾರರಾದ ಶ್ರೀಮತಿ ಭುವನೇಶ್ವರಿ ಕೋಂ   ದಿನಕರನ್‌  ನಂ 253,   ಶ್ರೀರಾಮ ನಗರ, ಉರಿಗಾಂ ಪೇಟೆ, ರವರು ನೀಡಿದ ದೂರಿನಲ್ಲಿ ದಿನಾಂಕ 03.11.2015 ರಂದು   ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ದೂರುದಾರರು ಬೆಂಗಳೂರಿಗೆ  ಹೋಗುವ ಸಲುವಾಗಿ  ರಾಬರ್ಟ್ ಸನ್ ಪೇಟೆಯ  ಸೂರಾಜ್ ಮುಲ್ ಸರ್ಕಲ್ ಗೆ ಬಂದು ಖಾಸಗಿ ಬಸ್ಸಿನಲ್ಲಿ  ಕಿಟಕಿ ಪಕ್ಕದಲ್ಲಿ  ಕುಳಿತಿದ್ದಾಗ  ಆರೋಪಿ ಶಂಕರ್‌, 20 ವರ್ಷ, ಕ್ಯಾಸಂಬಳ್ಳಿ ಎಂಬುವರು ದೂರುದಾರರ ಕತ್ತಿನಲ್ಲಿದ್ದ ಬಂಗಾರದ ಚೈನ್ ನ್ನು  ಕಿತ್ತುಕೊಳ್ಳಲು  ಪ್ರಯತ್ನಿಸಿದ್ದು, ದೂರುದಾರರು ಹಾಗೂ  ಆಕೆಯ ಗಂಡ ಮತ್ತು ಸಾರ್ವಜನಿಕರು  ಆರೋಪಿಯನ್ನು  ಹಿಡಿದು ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ  ಹಾಜರು ಪಡಿಸಿರುತ್ತಾರೆ.

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ 03.11.2015 ರಂದು ದೂರುದಾರರಾದ ಶ್ರೀ  ಸದಾನಂದ ರೆಡ್ಡಿ ಬಿನ್‌  ಮುನಿಸ್ವಾಮಿ ರೆಡ್ಡಿ ರವರು ನೀಡಿದ ದೂರಿನಲ್ಲಿ  ದಿನಾಂಕ 02-11-2015 ರಂದು ರಾತ್ರಿ ದೂರುದಾರರು  ಅವರ ಮನೆಯಲ್ಲಿದ್ದಾಗ  ಆರೋಪಿಗಳಾಧ ನಾರಾಯಣಮ್ಮ, ವೀರಾರೆಡ್ಡಿ, ನಾಗಿರೆಡ್ಡಿ & ಗಂಟ್ಲಮ್ಮ ರವರುಗಳು ದೂರುದಾರರ ಮೇಲೆ ಜಗಳ ಕಾದು, ಕೆಟ್ಟ ಮಾತುಗಳಿಂದ ಬೈದು,  ಕಬ್ಬಿಣದ ಗಡಾರೆಯಿಂದ ದೂರುದಾರರ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿ ಸಾಯಿಸದೇ ಬಿಡುವುದಿಲ್ಲ’ ಎಂದು ಪ್ರಾಣಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :  ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s