ದಿನದ ಅಪರಾಧಗಳ ಪಕ್ಷಿನೋಟ 22ನೇ ಆಕ್ಟೋಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 21.10.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 22.10.2015 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.10.2015 ರಂದು ದೂರುದಾರರಾದ ಶ್ರೀಮತಿ ಲಕ್ಷ್ಮಮ್ಮ ಕೋಂ ಅಂಬರೀಶ್‌,  ಕರಿಮಾನಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ, ದಿನಾಂಕ 19.10.2015 ರಂದು ದೂರುದಾರರು ಅವರ ಮನೆಯಲ್ಲಿದ್ದಾಗ, ಆರೋಪಿಗಳಾದ  ಮುನಿವೆಂಕಟಪ್ಪ, ಬೀರೇಶ್‌,  ಕೃಷ್ಣಮೂರ್ತಿ,  ಪ್ರಕಾಶ್‌ , ಶಿವಣ್ಣ,  ಅಂಬರೇಶ್‌ ಎಂಬುವರು  ಆಕ್ರಮ ಗುಂಪು ಕಟ್ಟಿಕೊಂಡು ದೂರುದಾರರರ ಮನೆಯ ಬಳಿಗೆ ಬಂದು, ಬೆಳಿಗ್ಗೆ ಪಾತ್ರೆ ಸಾಮಾನುಗಳನ್ನು ತೊಳೆಯುವ ವಿಚಾರದಲ್ಲಿ ನಡೆದ ಗಲಾಟೆ ವಿಚಾರವನ್ನು ಮನಸ್ಸಿನಲ್ಲಿಟ್ಟು ಕೊಂಡು ಆರೋಪಿಗಳು ಲಕ್ಚ್ಮಮ್ಮ ರವರ ಮನೆಯೊಳಕ್ಕೆ ಆಕ್ರಮ ಪ್ರವೇಶ ಮಾಡಿ, ಕೆಟ್ಟ ಮಾತುಗಳಿಂದ ಬೈದು, ದೊಣ್ಣೆ ಮತ್ತು ಕೈಗಳಿಂದ ಹೊಡೆದು, ಕಾಲುಗಳಿಂದ  ಒದ್ದು, ಲಕ್ಚ್ಮಮ್ಮ ಮತ್ತು  ಅಂಬರೀಶ್‌ ಎಂಬುವರಿಗೆ ರಕ್ತಗಾಯ ಪಡಿಸಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.10.2015 ರಂದು ದೂರುದಾರರಾದ  ಶ್ರೀ. ಕೃಷ್ಣಪ್ಪ  ಬಿನ್‌‌ ಚಿಕ್ಕನಲ್ಲಪ್ಪ, ಬೆಟ್ಟಕೂರು  ಗ್ರಾಮ ರವರು  ನೀಡಿದ ದೂರಿನಲ್ಲಿ,  ಹುಲ್ಕೂರು ಗ್ರಾಮ ಪಂಚಾಯ್ತಿ ವತಿಯಿಂದ ನೀರಿನ ಟ್ಯಾಂಕರ್‌ ನಲ್ಲಿ  ಪ್ರತಿ ಮನೆಗೆ ತಲಾ ಹತ್ತು ಬಿಂದಿಗೆ  ನೀರು ಸರಬರಾಜು ಮಾಡುತ್ತಿದ್ದು, ದೂರುದಾರರ ಹೆಂಡತಿಯಾದ ಶ್ರೀಮತಿ ಯಶೋದಮ್ಮ ರವರು ದಿನಾಂಕ: 18.10.2015 ರಂದು ಬೆಳಿಗ್ಗೆ 6.00 ಗಂಟೆಯ ಸಮಯದಲ್ಲಿ  ಸರದಿಯ ಸಾಲಿನಲ್ಲಿ ನಿಂತು   5 ಬಿಂದಿಗೆಗಳಷ್ಟು ನೀರು ಹಿಡಿದುಕೊಂಡು ಉಳಿದ 5 ಬಿಂದಿಗಳ ನೀರನ್ನು ಹಿಡಿಯಲು ಹೋದಾಗ, ಆರೋಪಿಗಳಾದ  ಮಂಜುನಾಥ, ಅಗ್ಗಿ ರಾಮುಡು,  ಮುನಿಯಮ್ಮ,  ಲಕ್ಷ್ಮಿದೇವಿ,  ಲಕ್ಷ್ಮಪ್ಪ,  ಸುಬ್ಬಮ್ಮ ಎಂಬುವರು  ಯಶೋದಮ್ಮ ರವರಿಗೆ ದೊಣ್ಣೆ ಮತ್ತು ಕೈಗಳಿಂದ ಹೊಡೆದು ರಕ್ತ  ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮೋಸ: 01

ಬೆಮೆಲ್ ನಗರ  ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.10.2015 ರಂದು ದೂರುದಾರರಾದ ಶ್ರೀ.  ಪ್ರಭು ಬಿನ್‌ ರಾಧಕೃಷ್ಣ, ನಂ  313, ದಾಸರಹೋಸಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ 20.10.2015 ರಂದು ದೂರುದಾರರ ಮನೆಯ ಬಳಿಗೆ ಸುಮಾರು 40 ರಿಂದ 42 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ  ದ್ವಿಚಕ್ರವಾಹನದಲ್ಲಿ ಬಂದು  ಮನೆಯ ಬಾಗಿಲು ತಟ್ಟಿದ್ದು, ಆಗ ದೂರುದಾರರ ತಾಯಿ ಬಾಗಿಲು ತೆಗೆದಾಗ ಅಪರಿಚಿತ ಆರೋಪಿ ದೂರುದಾರರ ತಾಯಿಯ ಹತ್ತಿರ  ನಿಮ್ಮ ಜಮೀನಿನಲ್ಲಿ 3 ರಿಂದ 4 ಮೊಬೈಲ್ ಟವರ್ ಹಾಕುವ ಸಲುವಾಗಿ ಪರಿಶೀಲನೆಗಾಗಿ ಬಂದಿದ್ದೇನೆಂದು ಹೇಳಿದಾಗ, ದೂರುದಾರರ ತಾಯಿ ಮನೆಯಲ್ಲಿ ಮಕ್ಕಳು ಯಾರೂ ಇಲ್ಲ ಅವರು ಬಂದ ಮೇಲೆ ಮಾತನಾಡಿ ಎಂದು ಹೇಳಿರುತ್ತಾರೆ. ಆಗ ಸದರಿ ವ್ಯಕ್ತಿ ಯಾರ ಬಳಿಯೋ ಪೋನ್ ನಲ್ಲಿ ಮಾತನಾಡಿ, ಅವರು ಮನೆಯಲ್ಲಿ ಯಾರೂ ಇಲ್ಲವಂತೆ ಎಂದು ಹೇಳಿ ನಂತರ ನಮ್ಮ ಸೂಪರ್ ವೈಸರ್ ಮಣ್ಣು ಟೆಸ್ಟ್ ಮಾಡಿಕೊಂಡು ಬರಲು ಹೇಳಿದರು, ಮಣ್ಣು ತೆಗೆಯಲು ಚನಿಕೆ ಕೊಡಿ ಎಂದು ಕೇಳಿದ್ದು,  ಆ ಅಪರಿಚಿತ ವ್ಯಕ್ತಿ  ಜಮೀನಿನಲ್ಲಿ ಚನಿಕೆಯಿಂದ ಒಂದು ಸಣ್ಣ ಗುಣಿ ತೆಗೆದು,  ನಿಮ್ಮ ಮನೆಯಲ್ಲಿರುವ ಒಂದು ಬಂಗಾರದ ಚೈನನ್ನು ತಂದು ಇದರಲ್ಲಿ ಹಾಕಿ ಮಣ್ಣು ಪರೀಕ್ಷೆ ಮಾಡಬೇಕೆಂದು ಹೇಳಿರುತ್ತಾನೆ. ಆಗ ದೂರುದಾರರ  ತಂದೆ ಮತ್ತು ತಾಯಿಯವರಿಂದ ರೂ 60.000/-  ಬೆಲೆ ಬಾಳುವ 47 ಗ್ರಾಂ ಬಂಗಾರದ ಚೈನನ್ನು ತೆಗೆದುಕೊಂಡು ಹೋಗಿ ಆ ಅಪರಿಚಿತ ವ್ಯಕ್ತಿ ಕೈಗೆ  ಕೊಟ್ಟಿರುತ್ತಾರೆ. ಆತ ಸದರಿ ಚೈನನ್ನು ಗುಣಿಯಲ್ಲಿಡುವಂತೆ ಇಟ್ಟು ಸೂಪರ್ ವೈಸರ್ ರವರನ್ನು ಕರೆದುಕೊಂಡು ಬರುತ್ತೇನೆಂದು  ಹೇಳಿ ಮೋಸ ಮಾಡಿ ಬಂಗಾರದ ಚೈನನ್ನು ತೆಗೆದುಕೊಂಡು ಹೊರಟುಹೋಗಿರುತ್ತಾನೆ.

-ಹಲ್ಲೆ :01

ರಾಬರ್ಟ್‌‌ಸನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.10.2015 ರಂದು ದೂರುದಾರರಾದ ಶ್ರೀ.  ವಿಜಯರಾಜ್‌ ಬಿನ್‌ ಪಳನಿ,  ನಂ 880, ಶ್ರೀರಾಮನಗರ ಉರಿಗಾಂಪೇಟೆ ರವರು ನೀಡಿದ ದೂರಿನಲ್ಲಿ, ದೂರುದಾರರು ದಿನಾಂಕ 21.10.2015 ರಂದು  ಉರಿಗಾಂಪೇಟೆಯ ಬಜಾರ್ ಸ್ಟ್ರೀಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ, ಆರೋಪಿ ರಾಜ  ರವರನ್ನು ಕಂಡು, ಸಾಲದ ಹಣವನ್ನು  ಯಾಕೆ  ವಾಪಸ್ಸು ಕೊಟ್ಟಿಲ್ಲ ಎಂದು ದೂರುದಾರರು ಕೇಳಿದಾಗ  ಆರೋಪಿ ರಾಜ  ಜಗಳ ಕಾದು ಕೆಟ್ಟ ಮಾತುಗಳಿಂದ ಬೈದು,  ಚಾಕುವಿನಿಂದ  ಹೊಡೆದು ರಕ್ತಗಾಯಪಡಿಸಿರುತ್ತಾನೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s