ದಿನದ ಅಪರಾಧಗಳ ಪಕ್ಷಿನೋಟ 12ನೇ ಅಕ್ಟೋಬರ್‍ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 11.10.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 12.10.2015 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕನ್ನ ಕಳವಿಗೆ ಸಂಬಂಧಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪ್ರೆಸಿಲ್ಲಾ ಕೋಂ ಜ್ಞಾನ ಪ್ರಗಾಸಂ, ಇಟ್ಯಾಲಿಯನ್ ಕ್ವಾಟ್ರಸ್, ಮಾರಿಕುಪ್ಪಂ ರವರು ನೀಡಿದ ದೂರಿನಲ್ಲಿ,   ದಿನಾಂಕ 11-10-2015 ರಂದು 13-30 ಗಂಟೆಗೆ ದೂರುದಾರರು ಆಕೆಯ ಮಗ ಸುನಿಲ್ ಪ್ರಕಾಶ್ ರವರೊಂದಿಗೆ ಕೆಲಸಕ್ಕೆ ಹೋಗಿದ್ದು, 14-15 ಗಂಟೆಗೆ ವಾಪಸ್ಸು ಬಂದು ನೋಡಲಾಗಿ  ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಗೆ ಹೋಗಿ ಬೆಡ್ ರೂಂನ ಬೀರುವಿನ ಲಾಕರ್ ಅನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಪರ್ಸ್ ಗಳಲ್ಲಿ ಇಟ್ಟಿದ್ದ 1) ಒಂದು ಬಂಗಾರದ ನಕ್ಲೆಸ್- 27 ಗ್ರಾಂ ಅಂದಾಜು ಬೆಲೆ 54 ಸಾವಿರ 2) ಬ್ರಾಸ್ ಲೆಟ್ -16 ಗ್ರಾಂ  ಬೆಲೆ 32 ಸಾವಿರ, 3) ಕತ್ತಿನ ಚೈನ್- 16 ಗ್ರಾಂ ಬೆಲೆ 32 ಸಾವಿರ, 4) ಉಂಗುರ -10 ಗ್ರಾಂ ಬೆಲೆ 20 ಸಾವಿರ 5) 3 ವಿವಿಧ ತರಹೆ ಉಂಗುರಗಳು, 12 ಗ್ರಾಂ ಬೆಲೆ 24 ಸಾವಿರ ಒಟ್ಟು ಬೆಲೆ 1,60,000-00 ರೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಬ್ಯಾಟಪ್ಪ, ಜೆ.ಕೆ. ಪುರಂ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ,  ದಿನಾಂಕ10.10.2015 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ದೂರುದಾರರು ರಾಜಪೇಟೆ ರಸ್ತೆಯಲ್ಲಿರುವ ಅವರ ಟ್ಯಾಕ್ಟರ್ ಶೆಡ್ ಬಳಿ ಮಲಗಿದ್ದಾಗ ಆರೋಪಿ ಮಂಜುನಾಥ ಬಿನ್ ಕೃಷ್ಣಾರೆಡ್ಡಿ, ಸೊಣ್ಣೆಪಲ್ಲಿ ಗ್ರಾಮ ರವರು ದೂರುದಾರರನ್ನು ಎಬ್ಬಿಸಿ, ಮಗನನ್ನು ಕೇಳಿದ್ದು ದೂರುದಾರರು ತನ್ನ ಮಗ ಎಲ್ಲಿಗೋ ಕೆಲಸದ ಮೇಲೆ ಹೋಗಿದ್ದಾನೆ  ಎಂದು  ಹೇಳಿದಾಗ ಆರೋಪಿ ಟ್ಯಾಕ್ಟರ್ ಶೆಡ್ ನಲ್ಲಿ ಇಟ್ಟಿದ್ದ ಹೈಡ್ರಾಲಿಕ್ ಟಾಪ್ ನ್ನು  ತೆಗೆದುಕೊಂಡಿದ್ದು, ಅದನ್ನು ದೂರುದಾರರು ಕೇಳಿದ್ದಕ್ಕೆ ಆರೋಪಿ  ಜಗಳ ಮಾಡಿ ಕೆಟ್ಟಮಾತುಗಳಿಂದ ಬೈದು,  ಕಬ್ಬಿಣ್ಣದ ರಾಡಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸಯ್ಯ ಬಿನ್ ಮುನಿಯಪ್ಪ, ಮಾರುತಿ ನಗರ, ಬೆಮೆಲ್ ನಗರ ರವರು ನೀಡಿದ ದೂರಿನಲ್ಲಿ,  ದಿನಾಂಕ 11.10.2015 ರಂದು ಬೆಳಿಗ್ಗೆ 11.50 ಗಂಟೆಗೆ ದೂರುದಾರ ಆತನ ಮಗ  ಮುನಿರಾಜು ರವರೊಂದಿಗೆ ವಿಗೋ ದ್ವಿಚಕ್ರವಾಹನ ಸಂಖ್ಯೆ KA08 -R-0870 ರ ಹಿಂಬದಿಯಲ್ಲಿ ಕುಳಿತುಕೊಂಡು ರಾಬರ್ಟ್ ಸನ್ ಪೇಟೆಗೆ ಹೋಗುತ್ತಿದ್ದಾಗ, ಮುನಿರಾಜು ದ್ವಿಚಕ್ರವಾಹನವನ್ನು ಬಂಗಾರಪೇಟೆ- ಕೆ.ಜಿ.ಎಫ್ ಮುಖ್ಯರಸ್ತೆಯ  ಬೆಮೆಲ್ ರೈಲ್ವೆ ಟ್ರಾಕ್  ಹಾಗೂ ಟೋಲ್ ಗೇಟ್ ಮದ್ಯ ತಾರು ರಸ್ತೆಯಲ್ಲಿ ಚಲಾಯಿಸುತ್ತಿದ್ದಾಗ,  ಬಂಗಾರಪೇಟೆ ಕಡೆಯಿಂದ KA03 MR 1971 ಸಂಖ್ಯೆಯ ಮಾರುತಿ ಕಾರಿನ ಚಾಲಕ, ಸದರಿ ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ದೂರುದಾರರ KA08 -R-0870 ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದು, ದೂರುದಾರ ಮತ್ತು ಆತನ ಮಗ ಮುನಿರಾಜು ರವರು ದ್ವಿಚಕ್ರ ವಾಹನ  ಸಮೇತ ಕೆಳಗೆ ಬಿದ್ದಿದ್ದು, ದೂರುದಾರ ಮತ್ತು ಆತನ ಮಗ ಮುನಿರಾಜು ರವರಿಗೆ  ರಕ್ತಗಾಯಗಳಾಗಿರುತ್ತೆ.

-ಭದ್ರತಾ ಕಾಯ್ದೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. ಶ್ರೀ. ಲಕ್ಷ್ಮಣ್ ರಾವ್, ಎ.ಎಸ್.ಐ ರವರು ದಿನಾಂಕ:11/12-10-2015 ರಂದು ರಾತ್ರಿ ಗಸ್ತು ಮಾಡುತ್ತಿದ್ದಾಗ, ಬೆಳಿಗ್ಗೆ ಸುಮಾರು 2.25 ಗಂಟೆ ಸಮಯದಲ್ಲಿ ಶರತ್ ಬಿನ್ ಮುನಿಯಾ, ಟೂ ಬ್ಲಾಕ್, ಆಂಡ್ರಸನ್‌ಪೇಟೆ ಎಂಬುವನು ಉರಿಗಾಂಪೇಟೆಯಲ್ಲಿರುವ ಶ್ರೀ.ಈಶ್ವರ ದೇವಸ್ಥಾನದ ಬಳಿ ಕತ್ತಲಲ್ಲಿ ತನ್ನ ಇರುವಿಕೆಯನ್ನು ಮಾರೆಮಾಚಿಕೊಂಡು ಅನುಮಾನಾಸ್ಪದವಾಗಿ ಕುಳಿತಿದ್ದವನು, ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದಾಗ ಅನುಮಾನ ಬಂದು ಹಿಡಿದು ಕಾರಣ ಕೇಳಲಾಗಿ ಸರಿಯಾದ ಸಮಜಾಯಿಷಿಯನ್ನು ನೀಡದೆ ಇದ್ದು ಮತ್ತು ಆತನ ಬಳಿ ಒಂದು ಹರಿತವಾದ ಚಾಕುವನ್ನು(ಲಾಂಗ್) ಇಟ್ಟಿಕೊಂಡಿದ್ದು  ಆತನು ಅಪರಾಧ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿರಬಹುದೆಂತ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಕೇಸು ದಾಖಲು ಮಾಡಿರುತ್ತೆ.

-ಇತರೆ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s