ದಿನದ ಅಪರಾಧಗಳ ಪಕ್ಷಿನೋಟ 09 ನೇ ಅಕ್ಟೋಬರ್‍ 2015 ಸಂಜೆ

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 09.10.2015 ರಂದು  ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00  ಗಂಟೆಯವರೆಗೆ  ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು:- 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ:09.10.2015 ರಂದು ಬೆಳಿಗ್ಗೆ 06.45 ಗಂಟೆಯ ಸಮಯದಲ್ಲಿ ದೂರುದಾರರಾದ ಶ್ರೀ. ಎಸ್‌.ಆರ್‌. ಜಗದೀಶ್, ಪೊಲೀಸ್ ವೃತ್ತ ನಿರೀಕ್ಷಕರು, ರಾಬರ್ಟ್‌‌ಸನ್‌ಪೇಟೆ ವೃತ್ತ ರವರು ಮತ್ತು ಸಿಬ್ಬಂದಿಯವರಾದ ಶ್ರೀ. ಹನುಮಪ್ಪ, ಹೆಚ್.ಸಿ-23, ಶ್ರೀರಾಮರೆಡ್ಡಿ, ಹೆಚ್.ಸಿ-31 ರವರುಗಳು  ಬೆಳಿಗ್ಗೆ 07.30 ಗಂಟೆಗೆ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ಸರಹದ್ದಿನ ಮಿನಿ ಇಬ್ರಾಹಿಂ ರಸ್ತೆಯಲ್ಲಿರುವ ಎಂ.ಜಿ.ಮಾರ್ಕೆಟ್ 1ನೇ ಗೇಟಿನ ಮುಂಭಾಗವಿರುವ ವಿನಾಯಕ ವೈನ್ಸ್ ಮೇಲ್ಭಾಗದಲ್ಲಿ ಶ್ರೀನಾಥ್ ಬಾಬು ಬಿನ್ ಪಾಪಣ್ಣ, ವಯಸ್ಸು 46 ವರ್ಷ, ವಾಸ ಸುಂದರಪಾಳ್ಯ, ಕ್ಯಾಸಂಬಳ್ಳಿ ಹೋಬಳಿ, ಬಂಗಾರಪೇಟೆ ತಾಲ್ಲೂಕು ರವರು ಒಂದು ರಟ್ಟಿನ ಬಾಕ್ಸ್ ನಲ್ಲಿ ಮಧ್ಯವನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ವಿಚಾರಿಸಲಾಗಿ ಸದರಿ ಮಧ್ಯವನ್ನು ಕೂಲಿ ಕಾರ್ಮಿಕರಿಗೆ ಮತ್ತು ಮಾರ್ಕೆಟ್ ನಲ್ಲಿ ಬೆಳಿಗಿನ ಜಾವ ಕೆಲಸ ಮಾಡುವವರಿಗೆ ವಿನಾಯಕ  ವೈನ್ ಶಾಫ್ ನಿಂದ ತಂದು ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಸದರಿ ಬಾಕ್ಸ್ ನಲ್ಲಿದ್ದ ಮಧ್ಯವನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ.

-ಅಸ್ವಾಭಾವಿಕ ಮರಣ:  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 09.10.2015 ರಂದು ದೂರುದಾರರಾದ ಶ್ರೀ. ಭಾಸ್ಕರ್‍, ವಾಸ  ಕೃಷ್ಣಗಿರಿ ಲೈನ್, ಮಾರಿಕುಪ್ಪಂ ರವರು ನೀಡಿದ್ದ ದೂರಿನಲ್ಲಿ ದಿನಾಂಕ 09.10.2015 ರಂದು ಬೆಳಗ್ಗೆ 8.00 ಗಂಟೆಯಿಂದ 8.45 ಗಂಟೆಯ ಮದ್ಯ ಆಂಡ್ರಸನ್ ಪೇಟೆ ಓ ಡ್ಯಾನಿಯಲ್ ರಸ್ತೆಯಲ್ಲಿರುವ ಆನ್ವರ್ ರವರ ಮುಚ್ಚಿರುವ ಶೆಟರ್ ಮುಂದೆ ಸುಮಾರು 55-60 ವರ್ಷ ವಯಸ್ಸಿನ ಗಂಡಸು ಯಾವುದೋ ಕಾರಣದಿಂದ ಇಲ್ಲಿಗೆ ಬಂದು ತುಂಬ ದಿನ ಊಟ ತಿಂಡಿ ಇಲ್ಲದೇ ಆಯಾಸದಿಂದಲೋ ಅಥವಾ ಯಾವುದೋ ಖಾಯಿಲೆ ಇಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಮೃತಪಟ್ಟಿರುತ್ತಾನೆ. ಇತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s