ಪತ್ರಿಕಾ ಪ್ರಕಟಣೆ

ಕರ್ನಾಟಕ ಸರ್ಕಾರ
ಪೊಲೀಸ್ ಇಲಾಖೆ

ಜಿಲ್ಲಾ ಪೊಲೀಸ್ ಕಛೇರಿ,
ಕೋಲಾರ ಚಿನ್ನದ ಗಣಿ ಪ್ರದೇಶ.
ದಿನಾಂಕ: ೦೮.೧೦.೨೦೧೫

ಚಾಂಫೀಯನ್‌ರೀಫ್ಸ್‌ನ ಬಿ ಬ್ಲಾಕ್‌ನಲ್ಲಿ ರೌಡಿ ಆಸಾಮಿಯ ಕೊಲೆ

ಕೋಲಾರ ಚಿನ್ನದ ಗಣಿ ಪ್ರದೇಶದ ಚಾಂಫೀಯನ್‌ರೀಫ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ಬ್ಲಾಕ್‌ನಲ್ಲಿ ಸಾರ್ವಜನಿಕ ನೆಮ್ಮದಿಗೆ ಕಂಟಕರಾಗಿದ್ದ ಕುಖ್ಯಾತ ರೌಡಿ ಆಸಾಮಿ ಆಂತೋಣಿ(೨೯) ಎಂಬಾತನು ಬುಧವಾರದಂದು ರಾತ್ರಿ ಬರ್ಬರವಾಗಿ ಕೊಲೆಯಾಗಿರುವುದಾಗಿ ವರದಿಯಾಗಿದೆ.

ಚಾಂಫೀಯನ್‌ರೀಫ್ಸ್ ಬಿ. ಬ್ಲಾಕ್‌ನ ನಿವಾಸಿ ದಿವಂಗತ ಆರೋಗ್ಯದಾಸ್ – ಸಗಾಯಮೇರಿ ದಂಪತಿಗಳ ಮಗ ಆಂತೋಣಿ (೨೯ ವರ್ಷ) ಎಂಬಾತನು ರೌಡಿ ಆಸಾಮಿಯಾಗಿದ್ದು, ಕೊಲೆ ಪ್ರಯತ್ನದ ಐದು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತನ್ನ ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು, ಆಗಾಗ್ಗೆ ಕೆಜಿಎಫ್ ಕೋರ್ಟಿಗೆ ಹಾಜರಾಗುತ್ತಿದ್ದನು.

ಈಗಿರುವಾಗ್ಗೆ ಅ. ೭ ರಂದು ಬೆಳಿಗ್ಗೆ ಬೆಂಗಳೂರಿನಿಂದ ಕೆಜಿಎಫ್‌ಗೆ ಬಂದು ನ್ಯಾಯಾಲಯಕ್ಕೆ ಹಾಜರಾಗಿ, ರಾತ್ರಿ ಬಿ.ಬ್ಲಾಕ್‌ನ ತಮ್ಮ ಸಂಬಂಧಿ ಪ್ರವೀಣ್ ಎಂಬುವರ ಮನೆಯಲ್ಲಿ ಮಲಗಿದ್ದಾಗ, ಯಾರೋ ದುಷ್ಕರ್ಮಿಗಳು ಹೊಂಚು ಹಾಕಿ, ಮಾರಣಾಯುಧಗಳಿಂದ ತಲೆ, ಕೈ ಮತ್ತು ಮುಖದ ಮೇಲೆ ಕೊಚ್ಚಿ ಕೊಲೆ ಮಾಡಿರುತ್ತಾರೆ.

ವಿಷಯ ತಿಳಿದಾಕ್ಷಣ ಚಾಂಫೀಯನ್‌ರೀಫ್ಸ್ ಪಿ.ಎಸ್.ಐ. ವೈ.ಆರ್. ರಂಗಶಾಮಯ್ಯ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸ್ಥಳದ ಮಹಜರು ಕ್ರಮಗಳನ್ನು ಅನುಸರಿಸಿ, ಕೊಲೆಯಾದ ಆಂತೋಣಿಯ ತಾಯಿ ಸಗಾಯಮೇರಿ ಅವರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಆರ್. ಭಗವಾನ್‌ದಾಸ್, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಡಿ. ಲಕ್ಷ್ಮೀನಾರಾಯಣ ಅವರುಗಳು ಭೇಟಿ ನೀಡಿದ್ದು, ಕೊಲೆ ಸ್ಥಳಕ್ಕೆ ಶ್ವಾನ ದಳ, ಬೆರಳು ಮುದ್ರೆ ತಜ್ಞರನ್ನು ಕರೆಯಿಸಲಾಗಿತ್ತು.

ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಡಿ. ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಪಿ.ಎಸ್.ಐ. ಎಲ್.ಆಂಜಪ್ಪ, ವೈ.ಆರ್.ರಂಗಶಾಮಯ್ಯ ಅವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಆರ್. ಭಗವಾನ್‌ದಾಸ್ ಅವರು ತಿಳಿಸಿದ್ದಾರೆ.

anthony

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s