ದಿನದ ಅಪರಾಧಗಳ ಪಕ್ಷಿನೋಟ 04 ನೇ ಆಕ್ಟೋಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 03.10.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 04.10.2015 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ :02

ಕಾಮಸಮುದ್ರಂ ಪೊಲೀಸ್‌ ಠಾಣೆಯ ಸರಹದ್ದಿನ ದೊಡ್ಡಸಾಕರಸನಹಳ್ಳಿ ಗ್ರಾಮದಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.10.2015 ರಂದು ದೂರುದಾರರಾದ ಶ್ರೀ. ಮುರಳಿ ಬಿನ್‌ ಬಂಡಿ ಮುನಿಯಪ್ಪ, ದೊಡ್ಡಸಾಕರಸನಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ 03-10-2015 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ದೂರುದಾರರಾದ ಮುರಳಿ ರವರು ಅವರ ಜಮೀನು ಬಳಿ ಹೋಗಿದ್ದಾಗ ಅದೇ ಗ್ರಾಮದ  ಆರೋಪಿಗಳಾದ ಚಂದ್ರಬಾಬು, ದೇವರಾಜ, ಮತ್ತು ಲಕ್ಷ್ಮಿದೇವಮ್ಮರವರು ನಾವು ಬಿತ್ತನೆ ಮಾಡಿರುವ ಹುರಳಿ ಬೆಳೆಯಲ್ಲಿ ಉಳುಮೆ ಮಾಡುತ್ತಿದ್ದನ್ನು ದೂರುದಾರರು ಕೇಳಿದ್ದಕ್ಕೆ ಆರೋಪಿಗಳು  ಕಟ್ಟ ಮಾತುಗಳಿಂದ ಬೈದು ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

ಕಾಮಸಮುದ್ರಂ ಪೊಲೀಸ್‌ ಠಾಣೆಯ ಸರಹದ್ದಿನ ಸಾಕರಸನಹಳ್ಳಿ ಗ್ರಾಮದಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.10.2015 ರಂದು ದೂರುದಾರರಾದ ಶ್ರೀ. ಚಂದ್ರಬಾಬು ಬಿನ್‌ ನರಸಿಂಹಯ್ಯ, ಸಾಕರಸನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ 03-10-2015 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಸಾಕರಸನಹಳ್ಳಿ ಗ್ರಾಮದ ದೂರುದಾರರಾದ ಚಂದ್ರಬಾಬು ಮತ್ತು  ದೇವರಾಜ ಎಂಬುವವರು ಅವರ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಅದೇ ಗ್ರಾಮದ  ಆರೋಪಿ ಮುರಳಿ ಮತ್ತು ರಾಜು ಎಂಬುವವರು ಉಳುಮೆ ಮಾಡದಂತೆ ಅಡ್ಡಗಟ್ಟಿ ಆರೋಪಿಗಳು ದೂರುದಾರರನ್ನು ಹಿಡಿದುಕೊಂಡು ಮಚ್ಚಿನಿಂದ ಎಡಗೈ ಮೇಲೆ ಮತ್ತು ಬಲಕಾಲಿನ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s