ದಿನದ ಅಪರಾಧಗಳ ಪಕ್ಷಿನೋಟ 25 ನೇ ಸೆಪ್ಟೆಂಬರ್‌ 2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 24.09.2015 ರಂದು  ಸಂಜೆ 05.00 ಗಂಟೆಯಿಂದ ದಿನಾಂಕ 25.09.2015 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 02

ಉರಿಗಾಂ ಪೊಲೀಸ್ ಠಾಣೆಯ ಸರಹದ್ದಿನ  ನ್ಯೂಮಡಲ್‌ ಹೌಸ್‌ನಲ್ಲಿ  ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 24.09.2015 ರಂದು ದೂರುದಾರರಾದ ಶ್ರೀಮತಿ  ಸತ್ಯಪ್ರೀಯ ಕೋಂ ವಿಜಯ, ನಂ  60, ನ್ಯೂಮಾಡಲ್‌ ಹೌಸ್‌‌, ಉರಿಗಾಂ ರವರು ನೀಡಿದ ದೂರಿನಲ್ಲಿ ದಿನಾಂಕ 24-09-2015 ರಂದು ದೂರುದಾರರು ಕಾಲೇಜಿಗೆ ಹೋಗಿ ಮನೆಯ ಬಳಿಗೆ ಬಂದಾಗ ಆರೋಪಿ ತಂಗರಸು ಎಂಬುವರು ದೂರುದಾರರ ಹತ್ತಿರ ಬಂದು ಖರ್ಚಿಗೆ ಹಣ ಕೊಡು ಎಂತ ಕೇಳಿದಾಗ ಹಣ ತನ್ನ ಬಳಿ ಇಲ್ಲವೆಂತ ಹೇಳಿದಕ್ಕೆ ಕೆಟ್ಟ ಮಾತುಗಳಿಂದ ಬೈದು ಜಗಳ ಕಾದು ಆತನ  ಕೈ ಮುಷ್ಟಿಯಿಂದ ಬಾಯಿಗೆ ಗುದ್ದಿದ ಕಾರಣ ಹಲ್ಲು ಮುರಿದು ಬಿದ್ದು ಹೋಗಿರುತ್ತೆ. ರಕ್ತ ಗಾಯವಾಗಿರುತ್ತದೆ.

ರಾಬರ್ಟ್ ಸನ್ ಪೇಟೆ  ಪೊಲೀಸ್ ಠಾಣೆಯ ಸರಹದ್ದಿನ ಶ್ರೀರಾಮ ನಗರ ಉರಿಗಾಂಪೇಟೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 24.09.2015 ರಂದು ದೂರುದಾರರಾದ ಶ್ರೀಮತಿ ಸೋನಿಯಾ ಕೋಂ ಸೆಲ್ವಂ. ಶ್ರೀರಾಮನಗರ, ಉರಿಗಾಂ ಪೇಟೆ ರವರು ನೀಡಿದ ದೂರಿನಲ್ಲಿ ಚೀಟಿ ಹಣ ಕಟ್ಟುವ ವಿಚಾರದಲ್ಲಿ ದೂರುದಾರರು ಮನೆಯಲ್ಲಿದ್ದಾಗ ಆರೋಪಿಗಳಾದ  ಲತಾ, ಕುಮಾರ್‌,  ಮಗಿ. ಎಂಬುವರು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು   ತಲೆ ಕೂದಲನ್ನು  ಎಳೆದಾಡಿ,  ಕೈಗಳಿಂದ  ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :01

ಮಾರಿಕುಪ್ಪಂ ಪೊಲೀಸ್‌ ಠಾಣೆಯ ಸರಹದ್ದಿನ  ವಾಚ್‌ಮನ್‌ ಲೈನ್‌ನಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 24.09.2015 ರಂದು ದೂರುದಾರರಾದ ಶ್ರೀಮತಿ ಶಾಂತಕುಮಾರಿ ಕೋಂ  ಪರುಶುರಾಮ್‌,  ನಂ 25,  ವಿವೇಕನಗರ ಬೆಂಗಳೂರು ರವರು ನೀಡಿದ ದೂರಿನಲ್ಲಿ ದಿನಾಂಕ 11.09.2010 ರಂದು ಪಿರ್ಯಾದಿಯು ಮಾರಿಕುಪ್ಪಂ ಪೊಲೀಸ್ ಠಾಣಾ ಸರಹದ್ದು ವಾಚ್ ಮೆನ್ ಲೈನ್ ವಾಸಿ  ಆರೋಪಿ  ಪರುಶುರಾಮ್‌ ರವರೊಂದಿಗೆ ಮದುವೆಯಾಗಿದ್ದು, ಮದುವೆ ಸಮಯದಲ್ಲಿ ಪಿರ್ಯಾದಿಯ ತವರಿನಿಂದ ವರದಕ್ಷಿಣೆಯಾಗಿ 60 ಗ್ರಾಂ ಚಿನ್ನದ ಸರ, ಉಂಗುರ ಮತ್ತು  ಬಟ್ಟೆ ಖರೀದಿಸಲು 20 ಸಾವಿರ ರೂ ನಗದು ಹಣ, ಪಿರ್ಯಾದಿಗೆ 80 ಗ್ರಾಂ ಚಿನ್ನದ ತಾಳಿ ಸರ, ನಕ್ಲೆಸ್, ಉಂಗುರ, ಇತ್ಯಾದಿ ಕೊಟ್ಟಿದ್ದು ಒಂದು ಮಗುವಾಗುವ ತನಕ ಅನ್ಯೋನ್ಯವಾಗಿ ಸಂಸಾರ ಮಾಡಿ ತದ ನಂತರ ಆರೋಪಿಗಳಾದ ಪರುಶುರಾಮ್‌, ಉಮಾದೇವಿ,  ಕೋದಂಡರಾಮ, ಲತಾ,  ಮತ್ತು ಗೋಪಿ ಎಂಬುವರು ಇನ್ನು ಹೆಚ್ಚಿಗೆ ವರದಕ್ಷಿಣೆ ಕೊಟ್ಟಿಲ್ಲ ಇನ್ನು ಹೆಚ್ಚಿಗೆ ವರದಕ್ಷಿಣೆ ಬೇಕೆಂತ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ದೂರುದಾರರಿಗೆ ಕೈಗಳಿಂದ ಹೊಡೆದು ಕೆಟ್ಟ ಮಾತುಗಳಿಂದ  ಬೈದು ಮನೆಯಿಂದ ಹೊರಗೆ ತಳ್ಳಿ 2 ಲಕ್ಷ ಹಣ ತರುವ ತನಕ ಮನೆಗೆ ಸೇರಿಸುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು:-ಇಲ್ಲ

-ಅಸ್ವಾಭಾವಿಕ ಮರಣ:- ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s