ದಿನದ ಅಪರಾಧಗಳ ಪಕ್ಷಿನೋಟ 22 ನೇ ಸೆಪ್ಟೆಂಬರ್‌ 2015 ಸಂಜೆ

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 22.09.2015 ರಂದು  ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. 

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು : 01

ರಾಬರ್ಟ್‌‌ಸನ್‌ಪೇಟೆ  ಪೊಲೀಸ್ ಠಾಣೆಯ ಸರಹದ್ದಿನ ಎಂಜಿ ಮಾರುಕಟ್ಟೆಯ ಬಳಿ ಕಳವು ಪ್ರಕರಣಕ್ಕೆ ಸಂಬಂದಿಸಿ ಪ್ರಕರಣ ದಾಖಲಾಗಿರುತ್ತದೆ ದಿನಾಂಕ 22.09.2015 ರಂದು ದೂರುದಾರರಾದ ಶ್ರೀ.  ಗಂಗಪ್ಪ ಬಿನ್‌ ಮುನಿವೆಂಕಟಪ್ಪ, ಪಿಚ್ಚಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ 17.09.2015 ರಂದು  ರಾಬರ್ಟ್ ಸನ್ ಪೇಟೆ ಠಾಣಾ ಸರಹದ್ದಿನ ಎಂ.ಜಿ ಮಾರ್ಕೆಟ್ ನಲ್ಲಿರುವ ಸುಮನ್ ರವರ ಗೋಡನ್ ಮುಂಭಾಗ ಅವರ ಟಿ.ವಿ.ಎಸ್. ಹೆವಿ ಡ್ಯೂಟಿ, ಸಂಖ್ಯೆ KA-08 U-2839 ರ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ಪಕ್ಕದಲ್ಲಿರುವ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಅವರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸುಮಾರು 28,000/-ರೂ ಬಾಳುತ್ತದೆ.

-ದೊಂಬಿ : ಇಲ್ಲ

-ಹಲ್ಲೆ : 02

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯ ಸರಹದ್ದಿನ  ನೀಲಗಿರಿ ಹಳ್ಳಿ ಗ್ರಾಮದಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.09.2015 ರಂದು ದೂರುದಾರರಾದ ಶ್ರೀಮತಿ ಅಮರಾವತಿ  ನೀಲಗಿರಿಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ 21.09.2015 ರಂದು ಬೆಳಗ್ಗೆ 08-00 ಗಂಟೆ ಸಮಯದಲ್ಲಿ ದೂರುದಾರರು ತನ್ನ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ಆರೋಪಿ ಅಮರೇಶ್ ಎಂಬುವರು  ಈ ಜಾಗವು ನಮಗೆ ಸೇರುತ್ತೆ, ನೀನು ಕಸವನ್ನು ಗುಡಿಸಬೇಡ ಎಂತ ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು  ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಚಾಂಪಿಯನ್ ರೀಪ್ಸ್‌ ಪೊಲೀಸ್‌ ಠಾಣೆಯ ಸರಹದ್ದಿನ  ಡಿಟೈಲ್‌‌ ಬ್ಲಾಕ್‌ ನಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ 22.09.2015   ರಂದು  ದೂರುದಾರರಾದ ಶ್ರೀಮತಿ ಇಂದ್ರ ಕೋಂ  ದಯಾಶಂಕರ್‌ ನಂ 03 ಡಿ ಟೈಲ್‌ ಬ್ಲಾಕ್‌ ಚಾಂಪಿಯನ್‌‌ರೀಫ್ಸ್‌ ರವರು ನೀಡಿದ ದೂರಿನಲ್ಲಿ ಈ ದಿನ ಬೆಳಿಗ್ಗೆ ಸುಮಾರು 09.15 ಗಂಟೆಯಲ್ಲಿ ದೂರುದಾರರು ಅವರ  ಮನೆ ಬಳಿ ಕಸ ಸ್ವಚ್ಚ ಮಾಡುತ್ತಿದ್ದಾಗ ಆರೋಫಿಗಳಾದ ಉದ್ದಂಡಿ,  ಕುಟ್ಟಿಮಾ, ವಾಣಿ ಎಂಬುವೆರು ಪಿಟ್ ಅಗೆಯುವ ವಿಚಾರದಲ್ಲಿ ಜಗಳ ತೆಗೆದು ದೂರುದಾರರ ತಲೆ ಹಿಂಭಾಗಕ್ಕೆ ಹೊಡೆದು ರಕ್ತ ಗಾಯ ಮಾಡಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು:- ಇಲ್ಲ

-ಅಸ್ವಾಭಾವಿಕ ಮರಣ:  01

ಕಾಮಸಮುದ್ರಂ ಪೊಲೀಸ್‌ ಠಾಣೆಯ ಸರಹದ್ದಿನ  ಪುರಂ ಗ್ರಾಮದಲ್ಲಿ ಹಾವು ಕಚ್ಚಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.09.2015 ರಂದು ದೂರುದಾರರಾದ ಶ್ರೀ ಪ್ರದೀಫ್‌, ಬಿನ್‌  ರಾಮಚಂದ್ರ ಪುರಂ ಗ್ರಾಮ ರವರು ನೀಡಿದ ದೂರಿನಲ್ಲಿ      ದಿನಾಂಕ 19-09-2015 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ  ರಾಮಚಂದ್ರಪ್ಪ  ರವರು ಅವರ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಯಾವುದೋ ವಿಷಪೂರಿತ ಹಾವು ಕಚ್ಚಿದ್ದರಿಂದ  ಚಿಕಿತ್ಸೆ ಗಾಗಿ ಕುಪ್ಪಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಈ  ದಿನ ಬೆಳಿಗ್ಗೆ  ಆಸ್ವತ್ರೆಯಲ್ಲಿ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s