ದಿನದ ಅಪರಾಧಗಳ ಪಕ್ಷಿನೋಟ 22 ನೇ ಸೆಪ್ಟೆಂಬರ್‌ 2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 21.09.2015 ರಂದು  ಸಂಜೆ 05.00 ಗಂಟೆಯಿಂದ ದಿನಾಂಕ 22.09.2015 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : 01

ಬೆಮೆಲ್ ನಗರ ಪೊಲೀಸ್‌ ಠಾಣೆಯ ಸರಹದ್ದಿನ ದೊಡ್ಡೂರುಕರಪನಹಳ್ಳಿ ಗ್ರಾಮದಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.  ರಘು ಬಿನ್‌ ಮುನಿಯಪ್ಪ ಹಾಗೂ  ಆರೋಪಿ  ವೆಂಕಟಾಚಲಪತಿ ರವರಿಗೆ ದಾರಿಯ ವಿಚಾರದಲ್ಲಿ ಆಗಾಗ ಸಣ್ಣಪುಟ್ಟ ಗಲಾಟೆಗಳಾಗುತ್ತಿದ್ದು, ದಿನಾಂಕ 20.09.2015 ರಂದು  ದೂರುದಾರರಾದ ರಘು ರವರು ಆರೋಪಿ ವೆಂಕಟಾಚಲಪತಿ,  ರವರನ್ನು ಅವರ ಮನೆಯ ಬಳಿ ಕರೆದು ಸಿಮೆಂಟ್ ರಸ್ತೆಯಲ್ಲಿ ಮಾಡಿರುವ ಕಾಲುವೆಯನ್ನು  ಮುಚ್ಚು ಎಂದು ಹೇಳಿದ್ದಕ್ಕೆ  ಆರೋಪಿಗಳಾದ ವೆಂಕಟಾಚಲಪತಿ, ರವಿ, ಪ್ರಕಾಶ್‌,  ಬಾಬು, ರಂಗ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಆಯುಧಗಳನ್ನು  ಇಟ್ಟುಕೊಂಡು  ಕೈಯಲ್ಲಿದ್ದ ಮಚ್ಚಿನಿಂದ ದೂರುದಾರರ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಸಾಯಿಸಿ ಬಿಡಬೇಕೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ,

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :01

ಬೆಮೆಲ್‌‌ ನಗರ ಪೊಲೀಸ್‌ ಠಾಣೆಯ ಸರಹದ್ದಿನ ದೊಡ್ಡೂರುಕರಪನಹಳ್ಳಿ ಗ್ರಾಮದಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದ  ಪ್ರಕರಣ ದಾಖಲಾಗಿರುತ್ತದೆ. ದಿನಾಂಕ  21.09.2015 ರಂದು ದೂರುದರರಾದ ಶ್ರೀಮತಿ  ಮುನಿಲಕ್ಷ್ಮಮ್ಮ ಕೋಂ ರಾಮಯ್ಯ, ದೊಡ್ಡೂರು ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರಿಗೂ ಹಾಗೂ  ಅದೇ ಗ್ರಾಮದ ವೆಲ್ಡರ್ ಮುನಿಯಪ್ಪ ರವರಿಗೆ ದಾರಿಯ ವಿಚಾರದಲ್ಲಿ ಆಗಾಗ ಸಣ್ಣಪುಟ್ಟ ಗಲಾಟೆಗಳಾಗುತ್ತಿದ್ದು, ದಿನಾಂಕ 20.09.2015 ರಂದು ಸಂಜೆ ಸುಮಾರು 5.00 ಗಂಟೆಗೆ ವೆಲ್ಡರ್ ಮುನಿಯಪ್ಪನ ಮಗನಾದ ಆರೋಪಿ ರಘು ಎಂಬುವನು ದೂರುದಾರರ ಮನೆಯ ಬಳಿ ಬಂದು ಕೆಟ್ಟಮಾತುಗಳಿಂದ ಬೈಯುತ್ತಿದ್ದು,  ದೂರುದಾರರು ಏಕೆ ಕೆಟ್ಟ ಮಾತುಗಳಿಂದ ಬೈಯುತ್ತೀಯ, ಎಂದು ಕೇಳಿದಕ್ಕೆ ಆರೋಪಿಗಳಾದ ರಘು, ನರಸಿಂಹ, ಮಾದೇಶ ರವರುಗಳು  ಒಂದು ಕಲ್ಲಿನಿಂದ ಪಿರ್ಯಾದಿಯ ಸೊಂಟದ ಮೇಲೆ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ. ಅಡ್ಡ ಬಂದ  ರೂಪ ಎಂಬಾಕೆಯ ಮೇಲೆ ಕೈ ಹಾಕಿ ಆಕೆ ಧರಿಸಿದ್ದ ನೈಟಿಯನ್ನು ಹರಿದುಹಾಕಿ ಆಕೆಯ ಮನಸ್ಸಿಗೆ ಧಕ್ಕೆಯನ್ನುಂಟು ಮಾಡಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :01

ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದಿನ  ಕ್ಯಾಸಂಬಳ್ಳಿ ಮುಖ್ಯ ರಸ್ತೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.09.2015 ರಂದು ದೂರುದಾರರಾದ ಶ್ರೀ  ನಾಗರಾಜ್‌ ಬಿನ್‌ ಕಾರಿಯಪ್ಪ, ಚಿನ್ನಕೋಟೆ ಗ್ರಾಮ ರವರು ನೀಡಿದ ದೂರಿನಲ್ಲಿ  ದೂರುದಾರರ ತಮ್ಮನಾದ ಶಿವಾನಂದ ರವರು ಕೆ ಎಸ್.ಆರ್.ಟಿ.ಸಿ  ಮುಳಬಾಗಿಲು ಡಿಪೋ ನಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದು, ದಿನಾಂಕ.21.09.2015 ರಂದು  ದ್ವಿಚಕ್ರವಾಹನ ಪ್ಯಾಷನ್ ಪ್ರೋ ಸಂಖ್ಯೆ ಕೆಎ-08-ಎಸ್-0335 ರಲ್ಲಿ  ಹಲ್ಲಿಕುಂಟೆ ಕದಿರೇನಯಹಳ್ಳಿ ಕ್ರಾಸ್ ನ ಬಳಿ  ಹೋಗುತ್ತಿದ್ದಾಗ ಯಾವುದೋ ವಾಹನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿವಾನಂದ 30 ವರ್ಷ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಪ್ರಯುಕ್ತ ವಾಹನ ಸಮೇತ ಕೆಳಗೆ ಬಿದ್ದು ತಲೆಗೆ ರಕ್ತ ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಆರೋಪಿ ಅವರ ವಾಹನವನ್ನು ನಿಲ್ಲಿಸದೆ ಪರಾರಿಯಾಗಿರುತ್ತಾರೆ.

-ಭದ್ರತಾ ಕಾಯ್ದೆ :01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.09.2015 ರಂದು ಸಂಜೆ 19-15 ಗಂಟೆಯಲ್ಲಿ ದೂರುದಾರರಾದ ಶ್ರೀ. ಆನಂದ ಬಾಬು, ಎಎಸ್‌ಐ ಆಂಡ್ರಸನ್‌‌ಪೇಟೆ ರವರು ಗಸ್ತಿನ ಕರ್ತವ್ಯದಲ್ಲಿದ್ದಾಗ ಆಂಡ್ರಸನ್ ಪೇಟೆ ಪೊಲೀಸ್ ಠಾಣಾ ಸರಹದ್ದು ಗೋಣಮಾಕನಹಳ್ಲಿ ಸರ್ಕಾರಿ ಶಾಲೆಯ ಹಿಂಬಾಗದಲ್ಲಿ ಆರೋಪಿ  ಮಣಿದನ್ @ ಮಣಿ 29 ವರ್ಷ ಎಂಬುವರು ಅವರ ಇರುವಿಕೆಯನ್ನು ಮರೆಮಾಚಿಕೊಂಡು , ಅವರನ್ನು ಕಂಡು ಓಡಲು ಪ್ರಯತ್ನಿಸಿದಾಗ ಆತನನ್ನು ಹಿಡಿದುಕೊಂಡು ವಿಚಾರಿಸಲಾಗಿ ಆತನ ಇರುವಿಕೆಯ ಬಗ್ಗೆ ಸಮಂಜಸವಾದ ಉತ್ತರವನ್ನು ನೀಡದೇ ಇದ್ದುದ್ದರಿಂದ, ಈತನು ಅವೇಳೆಯಲ್ಲಿ ಯಾವುದೋ ಕಳ್ಳತನ ಮಾಡುಬಹುದೆಂದು ಅನುಮಾನದ ಮೇರೆಗೆ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು:-ಇಲ್ಲ

-ಅಸ್ವಾಭಾವಿಕ ಮರಣ:- ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s