ದಿನದ ಅಪರಾಧಗಳ ಪಕ್ಷಿನೋಟ 20 ನೇ ಸೆಪ್ಟೆಂಬರ್‌ 2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 20.09.2015 ರಂದು  ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. 

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಬೆಮೆಲ್ ನಗರ ಪೊಲೀಸ್‌ ಠಾಣೆಯ ಸರಹದ್ದಿನ  ಪುಲೆಂದರ್‌‌ ಲೈ ಔಟ್ ನಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದ ಪ್ರಕರಣ  ದಾಖಲಾಗಿರುತ್ತದೆ.  ದಿನಾಂಕ 20.09.2015 ರಂದು  ದೂರುದಾರರಾದ ಶ್ರೀಮತಿ ರಾಧಕುಮಾರಿ ಕೋಂ. ಲೋಕೇಶ್‌  ನಂ 13,  ಪುಲೆಂದರ್‌‌ ಲೈ ಔಟ್,  ದಾಸರಹೊಸಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ 19.09.2015 ರಂದು ನೀರಿನ ವಿಚಾರನ ಬಗ್ಗೆ ದೂರುದಾರರು  ಆರೋಪಿ ಸ್ವಪ್ನ ರವರ ಮನೆಯ ಬಳಿ ಹೋಗಿ ಅವರನ್ನು ಕುರಿತು ನಾನು ನೀರಿನ ಮೋಟಾರನ್ನು ಅನ್‌ ಮಾಡಿಲ್ಲ “ನೀನು ಯಾಕೆ ಯಾವಾಗಲೂ ಸುಳ್ಳು ಸುಳ್ಳು ಹೇಳುತ್ತೀಯ ಎಂದು  ಕೇಳಿದ್ದಕ್ಕೆ ಆರೋಪಿ ಸ್ವಪ್ನ ರವರ ಗಂಡ ರಂಗಾರಾವ್ ರವರು ದೂರುದಾರರಾದ ಶ್ರೀಮತಿ ರಾಧಕುಮಾರಿ ರವರ ತಲೆಯ ಕೂದಲನ್ನು ಹಿಡಿದುಕೊಂಡು ಎಳೆದು ಆತನ ಕೈಯಲ್ಲಿದ್ದ  ಬೀಗದ ಕೀಯಿಂದ ತಲೆಯ ಮೇಲೆ ಹೊಡೆದು, ಕೈಗಳ ಮೇಲೆ ಪರಚಿ ಗಾಯಗಳನ್ನುಂಟು ಮಾಡಿ ಕಾಲಿನಿಂದ ಒದ್ದಿರುತ್ತಾನೆ, ಹಾಗೂ ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾನೆ,  ಕೆಟ್ಟಮಾತುಗಳಿಂದ ಬೈದಿರುತ್ತಾರೆ.

-ಮನುಷ್ಯ ನಾಪತ್ತೆ : 01

ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದಿನ 4ನೇ ಬ್ಲಾಕ್‌ನಿಂದ ಮನುಷ್ಯ ಕಾಣಿಯಾಗಿರುವ ಪ್ರಕರಣ  ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ದಿನಾಂಕ 20.09.2015 ರಂದು ದೂರುದಾರರಾದ ಶ್ರೀ.  ಮಹ್ಮದ್‌ಇಮ್ರಾನ್‌ ಬಿನ್‌  ನೂರ್‌ ಮಹ್ಮದ್‌ ಶರೀಫ್‌ @ ಸಜದ್ ಪಾಷ ರವರು ನೀಡಿದ ದೂರಿನಲ್ಲಿ  ದೂರುದಾರರ ತಂದೆಯಾದ ನೋರ್ ಮೊಹಮದ್ ಷರೀಪ್ ರವರು ಅವರ ಹೆಂಡತಿಯೊಂದಿಗೆ  ಕೋತ್ತೂರು ಗ್ರಾಮದಲ್ಲಿ ವಾಸವಾಗಿದ್ದು,   ನೋರ್ ಮೊಹಮದ್ ಷರೀಪ್ ರವರಿಗೆ  ಈಗ್ಗೆ ಸುಮಾರು 6 ತಿಂಗಳ ಹಿಂದೆ ಬಲಕೈಗೆ  ಪಾಶ್ವ ವಾಯು ಕಾಯಿಲೆ  ಬಂದಿದ್ದು,   ಸರಿಯಾಗಿ  ಮಾತನಾಡಲು ಆಗದೆ  ಇರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು ಸಹ ಗುಣ ಮುಖವಾಗದೆ  ದಿನಾಂಕ 14.09.2015 ರಂದು ಬೆಳಗ್ಗೆ 7.30 ಗಂಟೆಯಲ್ಲಿ ದೂರುದಾರರ ತಾಯಿಯಾದ ಸೈಯದ್ ಉನ್ನಿಸ್ಸಾ ರವರಿಗೆ ಬೇತಮಂಗಲಕ್ಕೆ ಹೋಗಿ ಬರುವುದಾಗಿ  ತಿಳಿಸಿ ಮನೆಯಿಂದ ಹೋದವರು ಮತ್ತೆ ಮನೆಗ  ವಾಪಸ್ಸು ಬರದೆ ಕಾಣಿಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು:- ಇಲ್ಲ

-ಅಸ್ವಾಭಾವಿಕ ಮರಣ:  ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s