ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 19.09.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 20.09.2015 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.
-ಕೊಲೆ : ಇಲ್ಲ
-ಕೊಲೆಗೆ ಪ್ರಯತ್ನ : ಇಲ್ಲ
-ಡಕಾಯತಿ : ಇಲ್ಲ
-ಸುಲಿಗೆ :ಇಲ್ಲ
-ಕನ್ನ ಕಳುವು : ಇಲ್ಲ
-ಕಳವು ಪ್ರಕರಣ : ಇಲ್ಲ
-ಸಾಮಾನ್ಯ ಕಳುವು : ಇಲ್ಲ
-ದೊಂಬಿ : ಇಲ್ಲ
-ಹಲ್ಲೆ : ಇಲ್ಲ
-ಅಪಹರಣ : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿರುತ್ತೆ.
ದಿನಾಂಕ 19.09.2015 ರಂದು ದೂರುದಾರರಾದ ಶ್ರೀಮತಿ ಸುಗುಣಮ್ಮ ಕೋಂ ಶ್ರೀನಿವಾಸ, ಗೊಲ್ಲಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ, ದಿನಾಂಕ 17.09.2015 ರಂದು ಸಂಜೆ 6.30 ಗಂಟೆಯಲ್ಲಿ ದೂರುದಾರರು ಮನೆಯಲ್ಲಿ ಇಲ್ಲದ ಸಮಯದಲ್ಲಿ ತನ್ನ ಮಗಳಾದ ಕುಮಾರಿ. ಮಾಲಾಶ್ರೀ, 17 ವರ್ಷ ರವರನ್ನು ಮನಯಿಂದ ಯಾರೋ ಅಪರೀಚಿತರು ಯಾವುದೋ ಕಾರಣಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.
-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ
-ಮನುಷ್ಯ ನಾಪತ್ತೆ : ಇಲ್ಲ
-ಜೂಜಾಟ ಕಾಯ್ದೆ : ಇಲ್ಲ
-ಅಪಘಾತಗಳು :
-ಭದ್ರತಾ ಕಾಯ್ದೆ :ಇಲ್ಲ
-ಇತರೆ ಪ್ರಕರಣಗಳು:-ಇಲ್ಲ
-ಅಸ್ವಾಭಾವಿಕ ಮರಣ:- 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯ ಚೀಮಲಬಂಡಹಳ್ಳಿ ಗ್ರಾಮದಲ್ಲಿ ನಡೆದಿರುತ್ತೆ.
ದಿನಾಂಕ 19-09-015 ರಂದು ದೂರುದಾರರಾದ ಶ್ರೀ.ಕೋದಂಡರಾಮಯ್ಯ, ಪಿಚ್ಚಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:19-09-015 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ದೂರುದಾರರ ಮೊಮ್ಮಗ ಹರೀಶ್, 18 ವರ್ಷ ರವರು ಹುಡುಗರ ಜೊತೆ ಚೀಮಲಬಂಡಹಳ್ಳಿ ಕೆರೆಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ.
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ