ದಿನದ ಅಪರಾಧಗಳ ಪಕ್ಷಿನೋಟ 17 ನೇ ಸೆಪ್ಟೆಂಬರ್‌ 2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 16.09.2015 ರಂದು  ಸಂಜೆ 05.00 ಗಂಟೆಯಿಂದ ದಿನಾಂಕ 17.09.2015 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ.  ಕಿಶೂರ್‌ ಕುಮಾರ್‌ ಬಿನ್‌ ಗೋವಿಂದಯ್ಯ,  ಸುಂದರಪಾಳ್ಯ ರವರು ನೀಡಿದ ದೂರಿನಲ್ಲಿ  ಅವರ ಸಂಬಂಧಿಯಾದ ಬಾರ್ಗವ್ ಬಿನ್ ಚಂದ್ರ ಕುಮಾರ್ 19 ವರ್ಷ, ಎಂಬ ಹುಡುಗನನ್ನು ಆತನ ಮೋಟರ್ ಸೈಕಲ್ ಹೋಂಡಾ ಶೈನ್ ಸಂಖ್ಯೆ ಎಪಿ-27-ಜೆ-6810 ರಲ್ಲಿ  ಕುಳ್ಳರಿಸಿಕೊಂಡು ಸುಂದರಪಾಳ್ಯದಿಂದ ಕೆ.ಜಿ.ಎಫ್ ಗೆ ಬರಲು ನೆರ್ನಹಳ್ಲಿ ಗ್ರಾಮದ ಬಳಿ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ಬೇತಮಂಗಲದಿಂದ ವಿಕೋಟೆ ಕಡೆಗೆ ಟಾಟಾ ಸುಮೋ ಸಂಖ್ಯೆ ಕೆಎ-27-ಎಂಎ-9136 ರ ಚಾಲಕ ಸದರಿ ಟಾಟಾ ಸುಮೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂಧು ದೂರುದಾರರ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದ ಪ್ರಯುಕ್ತ ಮೋಟರ್ ಸೈಕಲಿನ ಹಿಂಬಾಗದಲ್ಲಿ ಕುಳಿತ್ತಿದ್ದ ಬಾರ್ಗವ್ ರವರು ಕೆಳಗೆ ಬಿದ್ದ ಪ್ರಯುಕ್ತ ಬಲಕಾಲು ಮೊಣಕಾಲಿನ ಕೆಳಭಾಗದಲ್ಲಿ ರಕ್ತಗಾಯಗಳಾಗಿರುತ್ತೆ, ದೂರುದಾರರಿಗೂ ಸಹ ರಕ್ತ ಗಾಯಗಳಾಗಿರುತ್ತದೆ.  ಆರೋಪಿಯು ಟಾಟಾಸುಮೋ ವಾಹನವನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿರುತ್ತಾನೆ.

ಬೆಮೆಲ್ ನಗರ ಪೊಲೀಸ್‌ ಠಾಣೆಯ ಸರಹದ್ದಿನಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16.09.2015 ರಂದು ರಾತ್ರಿ 11.05 ಗಂಟೆಗೆ  ದೂರುದಾರರಾದ ಶ್ರೀ. ಕೆ.ನಾರಾಯಣಸ್ವಾಮಿ ಬಿನ್‌  ಕೃಷ್ಣಮೂರ್ತಿ, ಭಾರತ್‌ ನಗರ, ಬೆಮೆಲ್‌ ರವರು ನೀಡಿದ ದೂರಿನಲ್ಲಿ  ದೂರುದಾರು ಅವರ ದ್ವಿಚಕ್ರವಾಹನ ಸಂಖ್ಯೆ KA08-R-9187  ರಲ್ಲಿ ಆಲದಮರದ ಬಳಿ ಇರುವ ಗಣೇಶ್ ದರ್ಶನ್ ಹೋಟೆಲ್ ನಿಂದ, ಭಾರತ್ ನಗರದಲ್ಲಿರುವ ಅವರ ಮನೆಗೆ ಹೋಗುತ್ತಿದ್ದಾಗ, ಕೃಷ್ಣಾವರಂ ಕಡೆಯಿಂದ KA 53-J-5692 ಬಜಾಜ್ ದ್ವಿಚಕ್ರವಾಹನದ ಸವಾರ ಅವರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿಹೊಡೆದಾಗ ದೂರುದಾರರ ದ್ವಿಚಕ್ರವಾಹನ ಕೆಳಗೆ ಬಿದ್ದಾಗ, ತೊಡೆಗೆ, ಬಲಪಾದಕ್ಕೆ ರಕ್ತಗಾಯಗಳಾಗಿದ್ದು,  ಕೆ.ನಾರಾಯಣಸ್ವಾಮಿ ರವರು ಬೆಂಗಳೂರಿನ ಹಾಸ್ಮಟ್‌ ಅಸ್ಪತ್ರೆಯಲ್ಲಿ ಚಿಕಿತ್ದೆ ಪಡೆಯುತ್ತಿರುತ್ತಾರೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು:- ಇಲ್ಲ

-ಅಸ್ವಾಭಾವಿಕ ಮರಣ:- ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s