ದಿನದ ಅಪರಾಧಗಳ ಪಕ್ಷಿನೋಟ 14 ನೇ ಸೆಪ್ಟೆಂಬರ್‌ 2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.09.2015 ರಂದು  ಸಂಜೆ 05.00 ಗಂಟೆಯಿಂದ ದಿನಾಂಕ 14.09.2015 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :04

ಬೆಮೆಲ್ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 13-09-2015  ರಂದು ದೂರುದಾರರಾದ ಶ್ರೀ .  ರಾಜರಾಮ್‌, ಬೆಮೆಲ್‌‌ ನಗರ  ರವರು ನೀಡಿದ ದೂರಿನಲ್ಲಿ  ದಿನಾಂಕ 13.09.2015 ರಂದು  ಮಧ್ಯಾಹ್ನ 2-45 ಗಂಟೆಗೆ  ದೂರುದಾರರ ಮಗನಾದ ಬರಣೀಧರನ್ ರವರೊಂದಿಗೆ ಹಿಂಬದಿ ಸವಾರನಾಗಿ ಅವರ ಟಿವಿಎಸ್. ವಿಕ್ಟರ್ ದ್ವಿಚಕ್ರ ವಾಹನ ಸಂಖ್ಯೆ ಕೆಎ- 08 ಇಎಂ 6689 ರಲ್ಲಿ ಕುಳಿತುಕೊಂಡು ಬಂಗಾರಪೇಟೆ ಕಡೆಯಿಂದ ಕೆ.ಜಿ.ಎಫ್. ಕಡೆಗೆ ಹೋಗಲು ಸರ್ಕಾರಿ ಐ.ಟಿ.ಐ. ಬಳಿಯಿರುವ ರೈಲ್ವೇ ಟ್ರಾಕ್ ಬಳಿ ಹೋಗುತ್ತಿದ್ದಾಗ, ಯಾವುದೋ ದ್ವಿಚಕ್ರ ವಾಹನ ಸವಾರ ವಾಹನವನ್ನು ಬಂಗಾರಪೇಟೆ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಬರಣೀಧರನ್ ರವರ ಚಲಾಯಿಸುತ್ತಿದ್ದ, ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪ್ರಯುಕ್ತ ಪಿರ್ಯಾದಿ ಮತ್ತು ಅವರ ಮಗ ಇಬ್ಬರೂ ಕೆಳಗೆ ಬಿದ್ದಿದ್ದು, ಪಿರ್ಯಾದಿಯ ಎಡಕೈ ತೋಳಿನ ಬಳಿ  ರಕ್ತ  ಗಾಯವಾಗಿರುತ್ತೆ,  ವಾಹನ ಸವಾರ ವಾಹನವನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 13.09.2015 ರಂದು ದೂರುದಾರರಾದ ಶ್ರೀ. ಶ್ರೀಧರ್‌ ಬಿನ್‌ ಸುಬ್ಬರಾಯಪ್ಪ, ತಿಮ್ಮಾಪುರ ಗ್ರಾಮ,  28 ವರ್ಷ  ರವರು ನೀಡಿದ ದೂರಿನಲ್ಲಿ ದಿನಾಂಕ 12.09.2015 ರಂದು ಮದ್ಯಾಹ್ನ 3.30 ಗಂಟೆ ಸಮಯದಲ್ಲಿ ದೂರುದಾರರು ಬಂಗಾರಪೇಟೆಗೆ ಬರಲು ತಿಮ್ಮಾಪುರ ಗೇಟ್ ಬಳಿ ಬರುತ್ತಿರುವಾಗ ಎದುರಿಗೆ ಬಂಗಾರಪೇಟೆ ಕಡೆಯಿಂದ ತಿಮ್ಮಾಪುರ ಗ್ರಾಮದ ಟಿ.ಎಂ ವೆಂಕಟೇಶಪ್ಪ ಬಿನ್ ಲೇಟ್ ಮುನಿಯಪ್ಪ 65 ವರ್ಷ ಎಂಬುವರು ಅವರ ದ್ವಿಚಕ್ರ ವಾಹನ ಸಂ KA-08, E-9267 TVS ಹೆವಿ ಡ್ಯೂಟಿ ವಾಹನವನ್ನು ಚಲಾಯಿಸಿಕೊಂಡು ಬಂಗಾರಪೇಟೆ ಕಡೆಯಿಂದ ಬಂದು ತಿಮ್ಮಾಪುರ ಗೇಟ್ ಸಮೀಪ ರಸ್ತೆಯ ತಿರುವಿನಲ್ಲಿ ತನ್ನ ವಾಹನವನ್ನು ತಿಮ್ಮಾಪುರ ಕಡೆ ತಿರುಗಿಸುತ್ತಿರುವಾಗ ಹಿಂದಗಡೆಯಿಂದ ಅಂದರೆ ಬಂಗಾರಪೇಟೆ ಕಡೆತಯಿಂದ ಆರೋಪಿಯು ಅಪ್ಪಾಚಿ ದ್ವಿಚಕ್ರ ವಾಹನ ಸಂಖ್ಯೆKA-40, R-3845 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವೆಂಕಟೇಶಪ್ಪನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವೆಂಕಟೇಶಪ್ಪ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು, ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಬಲಗಾಲು, ಬಲ ಭುಜದ ಬಳಿ ರಕ್ತ ಗಾಯಗಳಾಗಿರುತ್ತೆ. ಆರೋಪಿಯು ತನ್ನ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ.  ವೆಂಕಟೇಶಪ್ಪ ರವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ 13.09.2015 ರಂದು ಬೆಳಿಗ್ಗೆ 7.00 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ವೆಂಕಟೇಶಪ್ಪ ಮೃತ ಹೊಂದಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 13.09.2015 ರಂದು ದೂರುದಾರರಾದ ಶ್ರೀ. ಕೋದಂಡಪ್ಪ ಬಿನ್‌ ಕೆಂಚಲ ರಾಮಪ್ಪ,  60 ವರ್ಷ, ನಾಗರಹಳ್ಳಿ ಗ್ರಾಮ ಮುಳಬಾಗಿಲು ತಾಲ್ಲೂಕು ರವರು ದಿನಾಂಕ.13.09.2015 ರಂದು ಸಂಜೆ 7.00 ಗಂಟೆಗೆ ದೂರುದಾರರು ದೂರಿನಲ್ಲಿ ದಿನಾಂಕ.13.09.2015 ರಂದು ಸಂಜೆ 5.30 ಗಂಟೆಯಲ್ಲಿ ಪಿರ್ಯಾದಿದಾರರು ಬೇತಮಂಗಲ ದಿಂದ ತನ್ನ ಗ್ರಾಮಕ್ಕೆ ಹೋಗಲು ಬೇತಮಂಗಲ ವಿಕೋಟೆ ಮುಖ್ಯರಸ್ತೆಯ  ದೊಡ್ಡಕಾರಿ  ಕ್ರಾಸ್ ಬಳಿ ಹೋಗುತ್ತಿದ್ದಾಗ ತನ್ನ ಮುಂದುಗಡೆ ಸೂಪರ್ ಎಕ್ಸಲ್ ಹೆವಿಡ್ಯೂಟಿ ಸಂಖ್ಯೆ ಕೆಎ-07-ಯು-7564 ರ ವಾಹನವನ್ನು  ಅನ್ಬು ನಾಗರಹಳ್ಳಿ ವಾಸಿಯು ಹೋಗುತ್ತಿದ್ದು ವಿಕೋಟೆ ಕಡೆಯಿಂದ ಬೇತಮಂಗಲ ಕಡೆಗೆ ಮಿನಿ ಬಸ್ ಸಂಖ್ಯೆ ಕೆಎ-40-3681 ರ ವಾಹನ  ಚಾಲಕನು ಸದರಿ ಬಸ್ ನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಹೆವಿ ಡ್ಯೂಟಿ ವಾಹನದ ಚಾಲಕನಿಗೆ ಅಪಘಾತ ಪಡಿಸಿದ ಪ್ರಯುಕ್ತ  ಅನ್ಬು , 30  ವರ್ಷ, ನಾಗರಹಳ್ಳಿ ರವರು ರಸ್ತೆಯ ಮೇಲೆ ಬಿದ್ದ ಪ್ರಯುಕ್ತ  ತಲೆಗೆ ತೀವ್ರವಾದ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ  ಪಟ್ಟಿರುತ್ತಾನೆ.  ಸದರಿ ಬಸ್ಸಿನ ಚಾಲಕ ಮಿನಿ ಬಸ್ಸನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿರುತ್ತಾನೆ.

ಉರಿಗಾಂ  ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 13.09.2015 ರಂದು ದೂರುದಾರರಾದ ಶ್ರೀ.  ಮೋಹನ್‌ ರಾಜ್‌, ಬಿನ್‌  ಚಂದ್ರನ್‌,  ಪೆದ್ದಪಲ್ಲಿ ಗ್ರಾಮ,  ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ  13.09.2015  ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ಮೋನಿಶಾ ರವರು ಪೆದ್ದಪಲ್ಲಿ ಗ್ರಾಮದ ಬಳಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ  ಕೆ.ಜಿ.ಎಫ್ ಕಡೆಯಿಂದ  ಪೆದ್ದಪಲ್ಲಿ ಗ್ರಾಮದ ಕಡೆಗೆ ಹೋಗಲು ಬರುತ್ತಿದ್ದ ಪಲ್ಸರ್ ದ್ವಿ-ಚಕ್ರ  ವಾಹನ  ಸಂಖ್ಯೆ ಕೆಎ-08 ಎಸ್ -9220 ರ ಚಾಲಕ  ಆರೋಪಿ  ಗಣೇಶ್ ರವರು ತನ್ನ ವಾಹನವನ್ನು ಅತೀವೇಗ  ಮತ್ತು ಅಜಾಗರೂಕತೆಯಿಂದ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಮೋನಿಶ್‌ ರವರಿಗೆ  ಡಿಕ್ಕಿ ಹೊಡೆದು  ಪ್ರಯುಕ್ತ ಮೋನಿಶಾ  ರವರಿಗೆ ರಕ್ತ ಗಾಯವಾಗಿರುತ್ತದೆ. ಆರೋಪಿ  ಗಣೇಶ್ ವಾಹನವನ್ನು ಅಲ್ಲಿಯೇ  ನಿಲ್ಲಿಸಿ ಅಲ್ಲಿಂದ ಪರಾರಿಯಾಗಿರುತ್ತಾರೆ.

-ಭದ್ರತಾ ಕಾಯ್ದೆ :01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.12/13.09.2015 ರಂದು ಬೆಳೆಗಿನ ಜಾವ 2.00 ಗಂಟೆ ಸಮಯದಲ್ಲಿ  ದೂರುದಾರರಾದ ಶ್ರೀ  ಎನ್‌ ಪಿ. ಸಿಂಗ್‌ ಬೇತಮಂಗಲ ರವರು ನೀಡಿದ ದೂರಿನಲ್ಲಿ  ಬೇತಮಂಗಲ 1 ನೇ ರಾತ್ರಿ ಗಸ್ತಿನಲ್ಲಿ ವಿಕೋಟೆ ಬೇತಮಂಗಲ ಮುಖ್ಯ ರಸ್ತೆಯಲ್ಲಿ ರಾತ್ರಿ 2.00 ಗಂಟೆ ಸಮಯದಲ್ಲಿ ಬಲಾಲ್ ಮಸೀಧಿಯ ಬಳಿ ಹೋಗುತ್ತಿದ್ದಾಗ ಆರೋಪಿಗಳಾದ  ಬಾಬು @ ಗಣೇಶ್‌ ಬಾಬು ,  ಶಬಿರೇಷ್‌, ಸಿದ್ದಪ್ಪ, ಎಂಬುವರು  ಟಾಟಾ ಏಸ್ ಸಂಖ್ಯೆ ಕೆಎ-40-3092 ರನ್ನು ರಸ್ತೆಯ ಬದಿಯಲ್ಲಿ  ನಿಲ್ಲಿಸಿಕೊಂಡಿರುವಾಗ ದೂರುದಾರರಿಗೆ  ಅನುಮಾನ ಬಂದು   ಅವರ ಹೆಸರು ವಿಳಾಸವನ್ನು ಕೇಳಿ  ಆವೇಳೆಯಲ್ಲಿ ವಾಹನವನ್ನು ಏಕೆ ನಿಲ್ಲಿಸಿಕೊಂಡಿರುವ ಬಗ್ಗೆ ವಿಚಾರಣೆ ಮಾಡಲಾಗಿ ಸದರಿ ಆರೋಪಿಗಳು ಅಲ್ಲಿರುವ ಬಗ್ಗೆ ಸರಿಯಾದ ಸಮಜಾಹಿಷಿ ನೀಡದ ಕಾರಣ ಹಾಗೂ ಸದರಿ ಆರೋಪಿಗಳು ಬೇರೆ ಊರಿನವರಾಗಿದ್ದು, ಕಳುವು ಮಾಡುವ ಉದ್ದೇಶದಿಂಧ ಹೊಂಚು ಹಾಕುತ್ತಿರುಬಹುದೆಂದು ಸಂಶಯದ ಮೇರೆಗೆ ಆರೋಪಿ ಮತ್ತು ವಾಹನ ಹಾಗೂ ಅದರಲ್ಲಿ ಇದ್ದಂತಹ ಗಾಡಾರೆ ಮತ್ತು ಸುತ್ತಿಗೆಯನ್ನು ಮುಂದಿನ ಕ್ರಮಕ್ಕಾಗಿ  ಠಾಣೆಗೆ ಹಾಜರುಪಡಿಸಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ.

-ಇತರೆ ಪ್ರಕರಣಗಳು:- ಇಲ್ಲ

-ಅಸ್ವಾಭಾವಿಕ ಮರಣ:ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s