ದಿನದ ಅಪರಾಧಗಳ ಪಕ್ಷಿನೋಟ 13 ನೇ ಸೆಪ್ಟೆಂಬರ್‌ 2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 12.09.2015 ರಂದು  ಸಂಜೆ 05.00 ಗಂಟೆಯಿಂದ ದಿನಾಂಕ 13.09.2015 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12/13/09.2015 ರಂದು ದೂರುದಾರರಾದ ಶ್ರೀ. ವೆಂಕಟಮುನಿ ಶೆಟ್ಟಿ, ಎಎಸ್‌‌ಐ ರವರು ರಾತ್ರಿ ಗಸ್ತುನಲ್ಲಿರುವಾಗ ಗೀತಾ ರಸ್ತೆಯ 1 ನೇ ಕ್ರಾಸ್‌ನ ರಾಜಲಕ್ಷ್ಮಿ ಬಂಗಾರದ ಅಂಗಡಿಯ ಮುಂಬಾಗ ಯಾರೋ ಒಬ್ಬ ಆಸಾಮಿಯು ಕತ್ತಲಿನಲ್ಲಿ ಅನುಮಾನಾಸ್ಪದವಾಗಿ ಕುಳಿತ್ತಿದ್ದು, ಸದರಿ ಆಸಾಮಿಯು ದೂರುದಾರರನ್ನು ನೋಡಿ ತನ್ನ ಇರುವಕೆಯನ್ನು  ಮರೆಮಾಚ್ಚುತ್ತಿದ್ದವನ ಹತ್ತಿರ ಹೋದಾಗ ಸದರಿ ಆಸಾಮಿಯು ಓಡಲು ಪ್ರಯತ್ನಿಸಿದ್ದು, ಆತನನ್ನು ಹಿಡಿದು ಹೆಸರು ವಿಳಾಸ ಕೆಳಲಾಗಿ ಗಾಬರಿಯಿಂದ ತನ್ನ ಹೆಸರು ಕಾರ್ತಿಕ್‌ ಬಿನ್‌ ಲಾರನ್ಸ್‌, 20 ವರ್ಷ. ಚಾಮರಾಜಪೇಟೆ, ಆಂಡ್ರಸನ್‌ಪೇಟೆ ಎಂದು ತಿಳಿಸಿದ್ದು, ಸದರಿ ಅಸಾಮಿಯು ಆವೇಳೆಯ ಸಮಯದಲ್ಲಿ  ಇರಲು ಕಾರಣ ಕೇಳಿದಾಗ ಸಮಂಜಸವಾದ ಉತ್ತರ ನೀಡದೆ ಇದ್ದು, ಇತ್ತೀಚಿನ ದಿನಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಆತನು ಕಳವು ಮಾಡುವ ಉದ್ದೇಶ ಇರುಬಹುದೆಂತ ಗುಮಾನಿಯ ಮೇಲೆ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು:- ಇಲ್ಲ

-ಅಸ್ವಾಭಾವಿಕ ಮರಣ:01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.09.2015 ರಂದು ದೂರುದಾರರಾದ ಶ್ರೀ. ಈಶ್ವರಾಚಾರಿ, ದೊಡ್ಡೂರು ಕರಪನಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದೂರುದಾರರ ಮಗನಾದ ಸತ್ಯ ಕುಮಾರ್‌, 13 ವರ್ಷ ರವರು, ಅವರ ಸ್ನೇಹಿತರ ಜೊತೆಯಲ್ಲಿ  ಗ್ರಾಮದ  ಕರೆಯಲ್ಲಿ ಈಜು ಕಲೆಯಲು ಹೋಗಿರುವಾಗ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಜೊತೆಯಲ್ಲಿದ್ದ, ಹುಡುಗರು ಕೂಗಿಕೊಂಡಾಗ ದೂಡ್ಡೂರು ಗ್ರಾಮದ ಅಮರೇಶ್‌ ರವರು ಓಡಿ ಬಂದು ಸತ್ಯಕುಮಾರ್‌ ರವರನ್ನು ನೀರಿನಿಂದ ಮೇಲೆ ಎತ್ತಿ ಕೂಡಲೆ ಆಟೋದಲ್ಲಿ ಅಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮದ್ಯ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s