ದಿನದ ಅಪರಾಧಗಳ ಪಕ್ಷಿನೋಟ 10 ನೇ ಸೆಪ್ಟೆಂಬರ್‌ 2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 09.09.2015 ರಂದು  ಸಂಜೆ 05.00 ಗಂಟೆಯಿಂದ ದಿನಾಂಕ 10.09.2015 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : o1

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.09.2015 ರಂದು  ರಾತ್ರಿ  12.15 ಗಂಟೆಯಲ್ಲಿ  ದೂರುದಾರರಾದ ಶ್ರೀ.  ತ್ಯಾಗರಾಜ್‌ ಬಿನ್‌ ಅಪ್ಪಾದೊರೈ,  52 ವರ್ಷ ನಂ 114, 8ನೇ ಕ್ರಾಸ್‌, ಗೌತಮ್‌ ನಗರ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ  ಕಾಮಸಮುದ್ರಂ ದಲ್ಲಿರುವ ಗಿರಿ ವೈನ್ಸ್ ಅಂಗಡಿಯನ್ನು ದಿನಾಂಕ 09.09.2015 ರಂದು ರಾತ್ರಿ 10.45 ಗಂಟೆಗೆ ಮುಚ್ಚಿಕೊಂಡು ವ್ಯಾಪಾರದ ಹಣ ಸುಮಾರು ರೂ 30.000 ರಿಂದ 40.000 ಗಳೊಂದಿಗೆ  ಕೆ.ಜಿ.ಎಫ್ ಗೌತಮನಗರದಲ್ಲಿರುವ ಪಿರ್ಯಾದಿ ಮನೆಗೆ ಬರಲು ಕೆ.ಜಿ.ಎಫ್-ಕಾಮಸಮುದ್ರಂ ರಸ್ತೆಯ ಬೋಯಿಸೊಣ್ಣೆನಹಳ್ಳಿಯ ರಸ್ತೆಯ ಮುಖಾಂತರ ಮೈಸೂರು ಮೈನ್ಸ್ ಶಾಲೆಯಿಂದ ಸುಮಾರು 1/2 ಕಿ.ಮೀ ದೂರದ  ರಸ್ತೆಯಲ್ಲಿ  ದೂರುದಾರರು ಬರುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತರು ರಸ್ತೆಗೆ ಅಡ್ಡಲಾಗಿ 2 ಬೈಕ್ ಗಳನ್ನು ನಿಲ್ಲಿಸಿದ್ದು, ದೂರುದಾರರು  ಮುಂದೆ ಹೋಗಲು ಅವರ ಗಾಡಿಗಳು ಅಡ್ಡ ಇದ್ದುದ್ದರಿಂದ ಗಾಡಿ ನಿಲ್ಲಿಸುತ್ತಿದ್ದಂತೆ ಇನ್ನಿಬ್ಬರು ಗಿಡಗಳ ಮರೆಯಿಂದ ಅಲ್ಲಿಗೆ ಬಂದು ಆ ಪೈಕಿ ಒಬ್ಬ ಮುಖಕ್ಕೆ ಮಂಕಿ ಕ್ಯಾಂಪ್, ರೆಡ್ ಟಿ-ಶರ್ಟ್ ಪ್ಯಾಂಟ್ ಧರಿಸಿದ್ದವ ತನ್ನ ಕೈಯಲ್ಲಿದ್ದ ಚಾಕುವನ್ನು ತೋರಿಸಿ ಹಣ ಕೊಡುವಂತೆ ಬೆದರಿಸಿದ್ದು , ದೂರುದಾರರ  ಜೋಬಲ್ಲಿದ್ದ ಸುಮಾರು ರೂ 30.000 ರಿಂದ 40.000 ಗಳ ಹಣವನ್ನು ಮತ್ತು ಸುಮಾರು 25.000 ರೂ ಬೆಲೆ ಬಾಳುವ ಚಿನ್ನದ ಉಂಗುರವನ್ನು  ಕಿತ್ತುಕೊಂಡು 4 ಜನ ಅಪರಿಚಿತರು ಅವರು ತಂದಿದ್ದ 3  ಬೈಕ್ ಗಳಲ್ಲಿ ಕೆ.ಜಿ.ಎಫ್ ಕಡೆಗೆ ಹೊರಟು ಹೋಗಿರುತ್ತಾರೆ.

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 09.09.2015 ರಂದು ದೂರುದಾರರಾದ ಶ್ರೀ. ಚಾಂದ್‌ಪಾಷ್ ಬಿನ್‌  ಸೈಯದ್‌ ಬಾಷಾ, ಆಶೋಕನಗರ ರವರು ನೀಡಿದ ದೂರಿನಲ್ಲಿ ದಿನಾಂಕ 16-08-2015 ರಂದು   ರಾತ್ರಿ  ಸುಮಾರು 7.30 ಗಂಟೆಗೆ ದೂರುದಾರರ ತಮ್ಮನಾದ ಸೈಯದ್ ರೀಯಾಜ್ ಪಾಷ ರವರು ಸಂಸಾರದ ವಿಚಾರದಲ್ಲಿ ಬೇಜಾರು ಮಾಡಿಕೊಂಡು ಮನೆಯಿಂದ ಹೊರಗಡೆ ಹೋದವರು ಪುನಃ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ  ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.09.2015 ರಂದು  ದೂರುದಾರರಾದ ಶ್ರೀ. ವೆಂಕಟರಾಮ್‌ ಬಿನ್‌ ಕೃಷ್ಣಪ್ಪ,  56 ವರ್ಷ, ವಿವೇಕ ನಗರ, ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರ ದೊಡ್ಡಪ್ಪನ ಮಗನಾದ ಮುನಿಶಿವಯ್ಯ 56 ವರ್ಷ,  ನಂ 17 3 ನೇ ಕ್ರಾಸ್‌, ಸ್ವರ್ಣ ನಗರ , ರಾಬರ್ಟ್‌‌ಸನ್‌‌ಪೇಟೆ ರವರು ಬೆಮೆಲ್ ಕಾರ್ಖಾನೆಯ ಹೆಚ್.& ಪಿ ವಿಭಾಗದಲ್ಲಿ ನೌಕರನಾಗಿ ಕೆಲಸಮಾಡುತ್ತಿದ್ದು, ದಿನಾಂಕ 07.09.2015 ರಂದು ಬೆಳಿಗ್ಗೆ 7.00 ಗಂಟೆಗೆ ಕೆಲಸಕ್ಕೆ ಹೋಗಿ, ಕೆಲಸ ಮುಗಿಸಿಕೊಂಡು ಸಂಜೆ 6.15 ಗಂಟೆಗೆ, ಆತನ ದ್ವಿಚಕ್ರವಾಹನ ಸಂಖ್ಯೆ KA07-R-1724  ಹಿರೋ ಹೋಂಡಾ ಗ್ಲಾಮರ್ ನಲ್ಲಿ ಮನೆಗೆ ಬರುತ್ತಿದ್ದಾಗ, ಬಂಗಾರಪೇಟೆ-ಕೆ.ಜಿ.ಎಫ್ ಮುಖ್ಯರಸ್ತೆಯಲ್ಲಿ, ಪೊನ್ನುಮಲೈ ಟೆಂಪಲ್ ಹತ್ತಿರ ದ್ವಿಚಕ್ರವಾಹನ ಸಮೇತ ಮುಗಿಚಿ ಬಿದ್ದಿದ್ದು, ವಾಹನವನ್ನು ಮೇಲಕ್ಕೆ ಎತ್ತುತ್ತಿದ್ದಾಗ, ಯಾವುದೋ ಅಟೋ ಚಾಲಕ ತನ್ನ ಆಟೋ ವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುನಿಶಿವಯ್ಯ ರವರಿಗೆ ಡಿಕ್ಕಿಹೊಡೆದು ಪರಾರಿಯಾಗಿರುತ್ತಾನೆ, ಮುನಿಶಿವಯ್ಯ ರವರಿಗೆ ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು, ಪ್ರಜ್ಞೆ ತಪ್ಪಿರುತ್ತಾರೆ, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 09.09.2015 ರಂದು ರಾತ್ರಿ 7.45 ಗಂಟೆಗೆ ಮೃತಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು:- ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s