ದಿನದ ಅಪರಾಧಗಳ ಪಕ್ಷಿನೋಟ 07 ನೇ ಸೆಪ್ಟೆಂಬರ್‌ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 07.09.2015 ರಂದು ಬೆಳಿಗ್ಗೆ  10.00  ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ದಾಖಲಾದ  ಪ್ರಕರಣಗಳು

-ಕೊಲೆ : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 07.09.2015 ರಂದು ದೂರುದಾರರಾದ ಶ್ರೀ.  ಸಯದ್‌ ಮುಸ್ತಾಫ್‌ ಬಿನ್‌  ಬಾಬಾಜಿ ನಂ 14,  1 ನೇ ಕ್ರಾಸ್‌, ವಿಜಯನಗರ, ಬೆಂಗಳೂರು ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಶಬೀನಾ ವಯಸ್ಸು 38 ವರ್ಷ ರವರನ್ನು ಈಗ್ಗೆ 16 ವರ್ಷಗಳ ಹಿಂದೆ ಆರೋಪಿ  ಮಹ್ಮದ್‌ ಅನೀಫ್‌,  ಸಂಗನಹಳ್ಳಿ ಗ್ರಾಮದವರಿಗೆ  ಕೊಟ್ಟು ಮದುವೆ ಮಾಡಿದ್ದು ಆರೋಪಿಗೆ ಮತ್ತು ಆತನ ಹೆಂಡತಿ ಶಬೀನಾ ರವರಿಗೆ  ಸಂಸಾರದ ವಿಚಾರದಲ್ಲಿ ಮನಸ್ಥಾಪಗಳಾಗಿ ಗಲಾಟೆಗಳು ಮಾಡಿಕೊಂಡಿದ್ದರಿಂದ  ಶಬೀನಾ ರವರು ತವರು ಮನೆಯಾದ ಬೆಂಗಳೂರಿನ ವಿಜಯನಗರಕ್ಕೆ ಹೋಗಿದ್ದು,  ವಾರಕ್ಕೊಮ್ಮೆ ತಿಂಗಳಿಗೊಮ್ಮೆ ತನ್ನ ಮಕ್ಕಳನ್ನು ನೋಡಿಕೊಂಡು ಬರಲು ಸಂಗನಹಳ್ಳಿಗೆ ಬರುತ್ತಿದ್ದರು.  ಆರೋಪಿ ದಿನಾಂಕ 06.09.2015 ರಂದು ಬೆಳಗ್ಗೆ 11.00 ಗಂಟೆಗೆ ಶಬೀನಾ ರವರನ್ನು ಬೆಂಗಳೂರಿನಿಂದ  ಸಂಗನಹಳ್ಳಿ ಗ್ರಾಮಕ್ಕೆ ಕರೆದುಕೊಂಡು ಬಂದು ದಿನಾಂಕ 07.09.2015 ರಂದು ಬೆಳಗಿನ  ಜಾವ 1.00 ಗಂಟೆಯಿಂದ 3.00 ಗಂಟೆಯ ಮದ್ಯ ಸಂಗನಹಳ್ಳಿ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಆರೋಪಿಗೆ ಸೇರಿದ ತೋಟದ ಮನೆಯ ಗುಡಿಸಿಲಿಗೆ ಶಬೀನಾ ರವರನ್ನು ಕರೆದುಕೊಂಡು ಹೋಗಿ ಆರೋಪಿ ಮಹಮದ್ ಅನೀಫ್ ರವರು ಹೆಂಡತಿ ಶಬೀನ ರವರನ್ನು ಹೊಡೆದು,  ಹಗ್ಗದಿಂದ ಶಬೀನ ರವರ  ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುತ್ತಾನೆ.

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 07.09.2015  ರಂದು ದೂರುದಾರರಾದ ಶ್ರೀ.  ಜಯರಾಮ್‌ ಬಿನ್‌ ಮುನಿವೆಂಕಟಪ್ಪ, ಗುಟ್ಟಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ 04.09.2015 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ದೂರುದಾರರು ಮತ್ತು ಅವರ ಹೆಂಡತಿ ಜಯಮ್ಮ ಇಬ್ಬರು ರಾಗಿ ಮಿಷನ್ ಗಾಗಿ ಕಾರಮಂಗಲ ಗ್ರಾಮಕ್ಕೆ ಹೋಗಿದ್ದಾಗ ಆರೋಪಿಗಳಾದ  ಗಂಗರಾಜು ಮತ್ತು  ನಾಗೇಶ್‌ ರವರು  ಬಂದು ನಮ್ಮ ಪಾರ್ಟಿಯವರಿಗೆ  ನೀವು ಓಟು ಹಾಕಿಲ್ಲ ಎಂದು ಹೇಳಿ  ಮನೆಯ ಮೇಲಿರುವ  ಹೆಂಚನ್ನು ತೆಗೆದು ದೂರುದಾರರಿಗೆ ಹೊಡೆದು  ಹೆಬ್ಬೆರಳನ್ನು ಕಚ್ಚಿ ರಕ್ತ ಗಾಯ ಮಾಡಿ  ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಆಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 07.09.2015 ರಂದು ದೂರುದಾರರಾದ ಶ್ರೀ. ಲಕ್ಷ್ಮಣ್‌ ಬಿನ್‌ ವೆಂಕಟೇಶಪ್ಪ,  ವೆಂಕಟಾಪುರ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 03-09-2015 ರಂದು ದೂರುದಾರರು ದ್ವಿಚಕ್ರ ವಾಹನ ಪಲ್ಸರ್ ಸಂಖ್ಯೆ ಕೆ ಎ 41, ಜೆ 1329 ರಲ್ಲಿ ತನ್ನ ಅಣ್ಣನ ಮಗನಾದ  ಅಭಿಲಾಷ್, 3 ವರ್ಷದ  ರವರನ್ನು ಕುಳಿರಿಸಿಕೊಂಡು ಕಾಮಸಮುದ್ರಂ ತೊಪ್ಪನಹಳ್ಳಿ ರಸ್ತೆಯ ನರಿನತ್ತಂ ಗೇಟ್ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಹಿಂದುಗಡೆಯಿಂದ ಬಂದ ಬೊಲೇರೋ ಟೆಂಪೋ ಸಂಖ್ಯೆ ಕೆ ಎ 08, 8495 ನ್ನು ಅದರ ಚಾಲಕ ಅತೀವೇಗ  ಮತ್ತು ಆಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡೆಸಿದ್ದರಿಂದ ದೂರುದಾರರು ಮತ್ತು  ಅಭಿಲಾಷ್‌ ರವರು ವಾಹನ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುವ ಕಾರಣ ಇವರಿಬ್ಬರೂ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ:  ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s