ಪತ್ರಿಕಾ ಪ್ರಕಟಣೆ 07.09.2015

ಪತ್ರಿಕಾ ಪ್ರಕಟಣೆ

ಕೆಜಿಎಫ್ : ಆರೋಪಿಯ ಬಂಧನ, ಕಳವು ಮಾಲು ವಶ
ಕೆಜಿಎಫ್., ಸೆ. ೭ :
ರಾಬರ್ಟ್‌ಸನ್‌ಪೇಟೆ ಅಪರಾಧ ವಿಭಾಗದ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, ಆತನಿಂದ ರೂ: ೩.೭೫ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಆರ್.ಭಗವಾನ್‌ದಾಸ್ ಅವರು ತಿಳಿಸಿದರು.
ರಾಬರ್ಟ್‌ಸನ್‌ಪೇಟೆಯ ಗೌತಮನಗರದ ನಿವಾಸಿ ನವೀನ್‌ಕುಮಾರ್ ಎಂಬುವರ ವಾಸದ ಮನೆಯ ಬಾಗಿಲನ್ನು ಮೀಟಿ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡಿದ್ದ ಬಗ್ಗೆ, ಎಸ್ಪಿ ಹೆಚ್.ಆರ್.ಭಗವಾನ್‌ದಾಸ್, ಡಿವೈಎಸ್ಪಿ ಪುಟ್ಟಮಾದಯ್ಯ ಅವರುಗಳ ಮಾರ್ಗದರ್ಶನದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲೆಂದು ರಾಬರ್ಟ್‌ಸನ್‌ಪೇಟೆ ಸಿಪಿಐ ಎಸ್.ಆರ್.ಜಗದೀಶ್, ಪಿಎಸ್‌ಐ ಸೂರ್ಯಪ್ರಕಾಶ್ ಮತ್ತು ಸಿಬ್ಬಂದಿಗಳ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.
ಅಪರಾಧ ಪತ್ತೆ ದಳದವರು ವಿಶೇಷ ಕಾರ್ಯಾಚರಣೆ ನಡೆಸಿ ಕಳವು ಮಾಡಿದ್ದ ಆರೋಪಿ ತಮಿಳುನಾಡು ಪ್ಯಾರ್‍ನಂಭಟ್‌ನ ನಿವಾಸಿ ಎಂ.ತಯೂಬ್ ಆಲಿಯಾಸ್ ಮುನ್ನಾ (೩೬) ಎಂಬಾತನನ್ನು ಬಂಧಿಸಿ, ಆತನಿಂದ ರೂ. ೩,೭೫,೦೦೦/- ಗಳ ಮೌಲ್ಯದ ೧೫೮ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಯನ್ನು ಬಂಧಿಸಿ, ಮಾಲನ್ನು ವಶಪಡಿಸಿಕೊಂಡ ಸಿಪಿಐ ಎಸ್.ಆರ್.ಜಗದೀಶ್, ಪಿಎಸ್‌ಐ ಸೂರ್ಯಪ್ರಕಾಶ್ ಮತ್ತು ಸಿಬ್ಬಂದಿಗಳಾದ ಶ್ರೀರಾಮರೆಡ್ಡಿ, ಗೋಪಾಲ್‌ಸಿಂಗ್, ಗಜೇಂದ್ರ, ವೆಂಕಟರಾಮರೆಡ್ಡಿ, ಹನುಮಪ್ಪ, ನಾರಾಯಣಸ್ವಾಮಿ ಇವೆರುಗಳ ಉತ್ತಮ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಆರ್.ಭಗವಾನ್‌ದಾಸ್ ಅವರು ಶ್ಲಾಘಿಸಿದ್ದಾರೆ.
ಚಿತ್ರಶೀರ್ಷಿಕೆ: ೦೭ಕೆಜಿಎಫ್೦೧: ಕಳವು ಮಾಲು ಆರೋಪಿಯೊಂದಿಗೆ ಸಿಪಿಐ ಜಗದೀಶ್, ಪಿಎಸ್‌ಐ ಸೂರ್ಯಪ್ರಕಾಶ್ ಇತರರು
ಕೆ.ಜಿ.ಎಫ್ : ಅಕ್ರಮ ಚಟುವಟಿಕೆ, ಕರ್ತವ್ಯ ಲೋಪ ಡಿ.ಎ.ಆರ್. ಪೇದೆ ಅಮಾನತ್ತು
ಕೆಜಿಎಫ್., ಸೆ. ೭ :
ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕೆಜಿಎಫ್‌ನ ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಅಸ್ಲಂಪಾಷ ಎಂಬಾತನನ್ನು ಕರ್ತವ್ಯ ಲೋಪ ವೆಸಗಿರುವ ಆರೋಪದ ಮೇರೆಗೆ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಆರ್. ಭಗವಾನ್‌ದಾಸ್ ಅವರು ಆದೇಶ ಹೊರಡಿಸಿದ್ದಾರೆ.
ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಅಸ್ಲಂಪಾಷ ಅವರು ಬಂಗಾರಪೇಟೆಯಲ್ಲಿ ಕೂಲಿ ಕೆಲಸಕ್ಕೆ ಬಂದು ನೆಲೆಸಿದ್ದವರ ಬಳಿ ಮತ್ತು ಬಾಂಗ್ಲಾದೇಶದಿಂದ ಬಂದವರನ್ನು ಬೆದರಿಸಿ ಅವರ ಕಡೆಯಿಂದ ತಿಂಗಳು, ತಿಂಗಳು ಮಾಮೂಲಿ ಕೊಡಬೇಕೆಂದೂ ಹಾಗೂ ಬಾಂಗ್ಲಾ ದೇಶದವರನ್ನು ತಾನು ಹೇಳಿದ ಜಾಗಕ್ಕೆ ಬರಬೇಕೆಂದೂ, ಇಲ್ಲದಿದ್ದರೆ ಅವರುಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸು ಹಾಕಿಸುವುದಾಗಿ ಬೆದರಿಸಿ, ಅವರಿಂದ ಅಕ್ರಮ ಸಂಭಾವನೆ ಹಣವನ್ನು ವಸೂಲ್ಮಾಡುತ್ತಿರುವುದು ಮತ್ತು ಅವರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದುದರ ಕುರಿತು ಹಾಗೂ ಹೊರದೇಶದವರು ಬಂಗಾರಪೇಟೆಯಲ್ಲಿ ವಾಸಿಸುತ್ತಿರುವ ವಿಷಯ ತಿಳಿದಿದ್ದರೂ ಸಂಬಂಧಪಟ್ಟ ಪೊಲೀಸ್ ಠಾಣೆಗಾಗಲೀ, ಇಲಾಖೆಯ ಮೇಲಧಿಕಾರಿಗಳಿಗಾಗಲೀ ಮಾಹಿತಿಯನ್ನು ನೀಡದೆ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತೆ, ಬೇಜವಾಬ್ದಾರಿ, ಅಶಿಸ್ತು ಮತ್ತು ದುರ್ನಡತೆಯನ್ನು ತೋರ್ಪಡಿಸಿರುವುದರ ಸಂಬಂಧ ಜಿಲ್ಲಾ ಗುಪ್ತ ದಳದ ನಿರೀಕ್ಷಕ ಎಂ.ಡಿ. ಲಕ್ಷ್ಮೀನಾರಾಯಣ ಅವರು ಪೂರ್ವಭಾವಿ ವಿಚಾರಣೆಯನ್ನು ನಡೆಸಿ, ಪೊಲೀಸ್ ಕಾನ್ಸ್‌ಟೇಬಲ್ ಅಸ್ಲಂಪಾಷ ಕರ್ತವ್ಯ ಲೋಪ ವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದಾಗಿ ವಿಶೇಷ ವರದಿಯನ್ನು ಸಲ್ಲಿಸಿದರು.
ಶಿಸ್ತಿನ ಇಲಾಖೆಯಲ್ಲಿದ್ದುಕೊಂಡು, ಕರ್ತವ್ಯ ಲೋಪ ವೆಸಗಿದ ಆರೋಪದ ಹಿನ್ನೆಲೆಯಲ್ಲಿ ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಅಸ್ಲಂಪಾಷ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಆರ್. ಭಗವಾನ್‌ದಾಸ್ ಅವರು ಆದೇಶ ಹೊರಡಿಸಿದ್ದಾರೆ.

07 KGF 01

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s