ದಿನದ ಅಪರಾಧಗಳ ಪಕ್ಷಿನೋಟ 06.09.2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 05.09.2015 ರಂದು  ಸಂಜೆ 05.00 ಗಂಟೆಯಿಂದ ದಿನಾಂಕ 06.09.2015 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಣೇಶ್ ಎಸ್. ಕೊರಲ್ಲಿ, ಕ್ಲಸ್ಟರ್ ಇಂಜಿನೀಯರ್, GTL ಕಂಪನಿ, ಬೆಂಗಳೂರು ರವರು ನೀಡಿರುವ ದೂರಿನಲ್ಲಿ, ದಿನಾಂಕ 29-08-2015 ರಂದು ಬೆಳಗಿನ ಜಾವ 3:48 ಐಡಿಯಾ ಒ.ಎಮ್.ಸಿ.ಯಿಂದ ಟವರ್ ಟೆಕ್ನಿಷಿಯನ್ ಗೆ ಕರೆ ಮಾಡಿ ಬಂಗಾರಪೇಟೆಯಲ್ಲಿನ ರಾಮಲಿಂಗಾಪುರದಲ್ಲಿರುವ ಟವರ್ ಆಪ್ ಆಗಿರುತ್ತದೆ ಎಂದು ತಿಳಿಸಿದ್ದು, ಅದರಂತೆ ಟವರ್ ಟೆಕ್ನಿಷಿಯನ್ ಸದರಿ ಟವರನ ಬಳಿ ಹೋಗಿ ನೋಡಲಾಗಿ ಯಾರೋ ಕಳ್ಳರು ಟವರ್ ನ ಕೆಳಗೆ ಅಳವಡಿಸಿದ್ದ ಶೆಲ್ಟರ್ನ ಬೀಗವನ್ನು ಹೊಡೆದು ಒಳಗೆ ಪ್ರವೇಶಿಸಿ ಅದರಲ್ಲಿ ಅಳವಡಿಸಿದ್ದ Amraja 515 AH 47 ಬ್ಯಾಟರಿ ಸೆಲ್ಸ್ ಗಳನ್ನು ಹಾಗೂ Vodafone BTS ಮತ್ತು Idea BTS ಒಟ್ಟು 12 ಕಾರ್ಡುಗಳು ಒಟ್ಟು ಬೆಲೆ ಸುಮಾರು ರೂ. 2,00,000/- ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ಕನ್ನಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಾಮ್ ರಾಜ್ ಬಿನ್ ಜಗನ್ನಾಥನ್, ನ್ಯೂ ಕ್ರಾಕರ್ ಮಾಡೆಲ್ ಹೌಸ್, ಮಾರಿಕುಪ್ಪಂ ರವರು ನೀಡಿರುವ ದೂರಿನಲ್ಲಿ, ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣಾ ಸರಹದ್ದು ಟಾಪ್ ಲೈನಿನಲ್ಲಿ ವಾಸವಾಗಿರುವ ದೂರುದಾರರ ಮಗಳು ಮತ್ತು ಅಳಿಯ ಪಳನಿ ಎಂಬುವರು ತಮ್ಮ ಮನೆಗೆ ಬೀಗ ಹಾಕಿಕೊಂಡು ದಿನಾಂಕ 04.09.2015 ರಂದು ತಿರುಪತಿಗೆ ಹೋಗಿದ್ದು, ದಿನಾಂಕ 05.09.2015 ರಂದು ಮದ್ಯಾಹ್ನ ಸುಮಾರು 12.20 ರಿಂದ 13.00 ಗಂಟಯ ನಡುವೆ ಯಾರೋ ಕಳ್ಳರು ಸದರಿ ಮನೆಗೆ ಹಾಕಿದ್ದ ಬೀಗಗಳನ್ನು ಮುರಿದು ಒಳಗೆ ಹೋಗಿ, ಬೆಡ್ ರೂಮ್ ನಲ್ಲಿದ್ದ ಎರಡು ಬೀರೊಗಳ ಬೀಗಗಳನ್ನು ಹೊಡೆದು ಕಳವು ಮಾಡಿರುತ್ತಾರೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 01

ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕುಮಾರ್ ಬಿನ್ ಸೀತರಾಂ, ವಿಜಯನಗರ, ಬೆಮೆಲ್ ನಗರ ರವರು ನೀಡಿದ ದೂರಿನಲ್ಲಿ,   ದಿನಾಂಕ 05.09.2015 ರಂದು ಸಂಜೆ 4.30 ಗಂಟೆಯಲ್ಲಿ ದೂರುದಾರರು ಆಂಡ್ರಸನ್ ಪೇಟೆ ಬಿ.ಎಂ ರಸ್ತೆಯಲ್ಲಿರುವ ಮುಜೀರ್ ಬಾಯ್ ರವರ ಗ್ಯಾರೇಜಿನ ಬಳಿ ತನ್ನ ಆಟೋವನ್ನು ರಿಪೇರಿ ಮಾಡಿಸುತ್ತಿರುವಾಗ, ಈ ಮೊದಲೇ ಪರಿಚಯವಿರುವ ಆಟೋ ಚಾಲಕನಾದ ಆರೋಪಿ ಶೇಖರ್, ಸುಸೈಪಾಳ್ಯಂ, ಆಂಡ್ರಸನ್ ಪೇಟೆ ಎಂಬಾತನು ದೂರುದಾರರ ಬಳಿ ಬಂದು ವಿನಾಕಾರಣ ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈಯ್ದು, ಕತ್ತಿಯಿಂದ ಹೊಡೆದು ರಕ್ತ ಗಾಯ ಪಡೆಸಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.

-ಮೋಸ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಸ ಪ್ರಕರಣ(ನಿರ್ದಿಷ್ಟ ದಾವೆ) ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಮ.ವಿ ಬಿನ್ ರವಿಕುಮಾರ್, ಮುನಿಯಮ್ಮ ಲೇಔಟ್, ಬಂಗಾರಪೇಟೆ ರವರು ನೀಡಿರುವ ದೂರಿನಲ್ಲಿ, ದೂರುದಾರರು ಡಾ||ಅರ್ ಸುಧಾಕರ್ ರವರಿಗೆ ಬಂಗಾರಪೇಟೆ ದೇಶಿಹಳ್ಳಿ ಪುರಸಭೆ ಖಾತೆ ಸಂಖ್ಯೆ 4079 ಮತ್ತು 4080 ರಲ್ಲಿನ ಸೈಟ್ ನಂಬರ್ 103, 104 ರಲ್ಲಿ 56* 40 ವಿಸ್ತೀರ್ಣಕ್ಕೆ ಜಿ.ಪಿ.ಎ ನೀಡಿದ್ದು, ದಿನಾಂಕ 25.01.2007 ರಂದು ದೂರುದಾರರ ಸ್ವತ್ತು ಸಂಖ್ಯೆ 101 & 102 ರಲ್ಲಿನ 56*40   ವಿಸ್ತೀರ್ಣವನ್ನು ಹಿಂದಿನ ಮಾಲೀಕರು ಖರೀದಿಸಿ ಕ್ರಯ ಪತ್ರ ಮಾಡಿಸಿಕೊಂಡಿರುತ್ತಾರೆ. ಆರೋಪಿಗಳಾದ ಮಹೇಂದ್ರನ್, ಜಗನ್ನಾಥ್, ಆಧಿನಾರಾಯಣಪ್ಪ, ವೆಂಕಟೇಶ್ ಮತ್ತು ಅಮರೇಶ್ ರವರುಗಳು ಉದ್ದೇಶ ಪುರಕವಾಗಿ ಈ ಸ್ವತ್ತಿಗೆ ಸಂಬಂಧಿಸಿದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ದೂರುದಾರರ ಸೈಟ್ ಗಳನ್ನು ನೋಂದಣಿ ಮಾಡಿಕೊಂಡು ದೂರುದಾರರಿಗೆ ವಂಚಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪಿ.ಟೋನಿ ಬಿನ್ ಫಿಲಿಫ್ಸ್, ಆಫೀಸರ್ಸ್ ಕ್ವಾಟ್ರಸ್, ಬೆಮೆಲ್ ನಗರ ರವರು ನೀಡಿದ ದೂರಿನಲ್ಲಿ, ದಿನಾಂಕ 08.05.2014 ರಂದು ಬೆಳಿಗ್ಗೆ 7.30 ಗಂಟೆಗೆ ದೂರುದಾರ ಮತ್ತು ಅವರ ಪತ್ನಿ ಮಾಲಾ ರವರು ಕೆಲಸಕ್ಕೆ ಹೋದಾಗ ಮಗ ಪ್ರಿಯದರ್ಶನ್ @ ಆಂಟೋನಿ ದರ್ಶನ್, 19 ವರ್ಷ ರವರು ಮನೆಯಲ್ಲಿದ್ದು, ಸಂಜೆ ಕೆಲಸದಿಂದ ಬಂದಾಗ ಮಗ ಮನೆಯಲ್ಲಿರದೆ ಎಲ್ಲಿಯೋ ಹೋಗಿದ್ದು, ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾನೆ.

-ಇತರೆ ಪ್ರಕರಣಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ(ನಿರ್ದಿಷ್ಟ ದಾವೆ) ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಘುನಾಥ್ ಬಿನ್ ಸೂರ್ಯಪ್ರಕಾಶ್, ಚಂದ್ರಲೇಔಟ್, ಬೆಂಗಳೂರು ರವರು ನೀಡಿರುವ ದೂರಿನಲ್ಲಿ, ದಿನಾಂಕ 22.09.2009 ರಂದು ದೂರುದಾರರು ಸ್ವತ್ತನ್ನು ಖರೀದಿಸಿ ಸೇಲ್ ಡೀಡ್ ಮಾಡಿಕೊಂಡು ಅವರೇ ಸ್ವಾದೀನಾನುಭವದಲ್ಲಿದ್ದು, ಕಂದಾಯ ಪಾವತಿಸುತ್ತಿರುತ್ತಾರೆ. ಆರೋಪಿ ಆನಂದನ್, ಮೇಲ್ ಕೃಷ್ಣಾವರಂ, ಕೆ.ಜಿ.ಎಫ್ ರವರು ಅಕ್ರಮವಾಗಿ ದೂರುದಾರರ ಸ್ವತ್ತಿನಲ್ಲಿ ಪ್ರವೇಶಿಸಿ ಆತನ ಸಹೋದರನ ಸಹಾಯದಿಂದ ಸ್ವತ್ತಿನಲ್ಲಿದ್ದ ಕಲ್ಲುಗಳನ್ನು ಜೆಸಿಬಿಯಿಂದ ಹೊಡೆದು ನೆಲಸಮ ಮಾಡಿರುತ್ತಾನೆ, ದೂರುದಾರರ ಸ್ವತ್ತಿಗೆ ನಷ್ಟವನ್ನುಂಟುಮಾಡಿ, ಪ್ರಾಣಬೆದರಿಕೆ ಹಾಕಿರುತ್ತಾನೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s