ದಿನದ ಅಪರಾಧಗಳ ಪಕ್ಷಿನೋಟ 03 ನೇ ಸೆಪ್ಟೆಂಬರ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:02.09.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ:03.09.2015 ರಂದು ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಕಳುವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ 02.09.2015 ರಂದು ಸಂಜೆ ದೂರುದಾರರಾದ ಶ್ರೀ ದಂಡಾಯುಧಪಾಣಿ, ಭಾರತನಗರ, ಬೆಮಲ್ ನಗರ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ;01-09-2015 ರಂದು ರಾತ್ರಿ ದೂರುದಾರರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ದೂರುದಾರರ ಮನೆಯ ಮುಖ್ಯ ಬಾಗಿಲನ್ನು ಒಂದು ಆಯುದ್ಧದಿಂದ ಮೀಟಿ, ಒಳಗೆ ಪ್ರವೇಶಿಸಿ ಮನೆಯ ಬೆಡ್ ರೂಮಿನಲ್ಲಿದ್ದ ಗಾದ್ರೇಜ್ ಬೀರುವನ್ನು ನಕಲಿ ಕೀ ಬಳಸಿ ತೆಗೆದು ಬೀರುವಿನಲ್ಲಿದ್ದ 1) 36 ಗ್ರಾಂ ನ ಹಾರ, 2) 40 ಗ್ರಾಂ ನ ಒಂದು ಕಲ್ಲು ಅಡ್ಡಿಗೆ 3) 25 ಗ್ರಾಂ ನ ಒಂದು ಜೊತೆ ಬಳೆಗಳು, 4) 25 ಗ್ರಾಂ ನ ಮೂರು ಜೊತೆ ಓಲೆಗಳು, 5) 18 ಗ್ರಾಂ ನ ಚಿಕ್ಕ ಮಕ್ಕಳ ಐದು ಉಂಗುರಗಳು, 6) 42 ಗ್ರಾಂ ನ  ಒಂದು ಮೋಪ್ ಚೈನ್, 7) 9 ಗ್ರಾಂ ನ ಮುತ್ತು ಮಣಿ, ಒಟ್ಟು 195 ಗ್ರಾಂ ನಷ್ಟು ಬಂಗಾರದ ವಡವೆಗಳು ಹಾಗೂ 3500=00 ರೂ ನಗದು ಹಣ, ಇದರ  ಒಟ್ಟು 3,93,500.00/- ರೂ ಗಳ ಬೆಲೆಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ,

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ :

-ಹಲ್ಲೆ : ಇಲ್ಲ

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಜೂಜಾಟ ಕಾಯ್ದೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ 02-09-2015 ರಂದು ಸಂಜೆ ಸುಮಾರು 4-15 ಗಂಟೆಯಲ್ಲಿ ಕಾಮಸಮುದ್ರಂ ಪೊಲೀಸ್ ಠಾಣಾ ಸರಹದ್ದಿನ ಹುರ್ಲಹಳ್ಳಿ ಗ್ರಾಮದಲ್ಲಿ ಆರೋಪಿಗಳಾದ ತಿಮ್ಮರಾಯಪ್ಪ, ಯಲ್ಲಪ್ಪ, ರಾಜು, ವೆಂಕಟಮುನಿಯಪ್ಪ, ಈಶ್ವರ್‍ ಮತ್ತು ಮಂಜುನಾಥ್ ರವರುಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿದ್ದು, ಶ್ರೀ. ವಸಂತ, ಪಿಎಸ್‌ಐ ಕಾಮುಸಮುದ್ರಂ ಮತ್ತು ಸಿಬ್ಬಂದಿಯವರುಗಳು ದಾಳಿ ಮಾಡಿ ಆರೋಪಿಗಳಾದ ತಿಮ್ಮರಾಯಪ್ಪ, ಯಲ್ಲಪ್ಪ, ರಾಜು, ವೆಂಕಟಮುನಿಯಪ್ಪ ರವರುಗಳನ್ನು ವಶಕ್ಕೆ ಪಡೆದಿದ್ದು, ಈಶ್ವರ್ & ಮಂಜುನಾಥ ರವರು ಪರಾರಿಯಾಗಿರುತ್ತಾರೆ. ಪಣಕ್ಕಿಟ್ಟಿದ್ದ ನಗದು ಹಣ 1350-00 ರೂಗಳು ಹಾಗೂ 52 ಇಸ್ಪೀಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಕಾನೂನು ರೀತಿ ಕ್ರಮ ಜರುಗಿಸಿದ್ದು,

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ:  ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s