ಪತ್ರಿಕಾ ಪ್ರಕಟಣೆ- ನಿವೃತ್ತ ಎ.ಎಸ್.ಐ. ಮುನೀರ್‌ಪಾಷಗೆ ಬಿಳ್ಕೋಡುಗೆ

ಪೊಲೀಸ್ ಇಲಾಖೆಯಲ್ಲಿ  ಸೇವೆ ಸಲ್ಲಿಸುವುದು ಪುಣ್ಯದ ಕೆಲಸವಾಗಿರುವುದರಿಂದ, ಸೇವೆಯಲ್ಲಿರುವಾಗ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಜನತೆಯ ನಿರೀಕ್ಷೆಯಂತೆ ಉತ್ತಮವಾದ ಸೇವೆಯನ್ನು ಸಲ್ಲಿಸುವ ಮೂಲಕ, ನಿವೃತ್ತರ ಸೇವೆಯು ಇಂದಿನ ಸಮಾಜಕ್ಕೆ ಹಾಗೂ ಯುವ ಜನಾಂಗಕ್ಕೆ ಆದರ್ಶವಾಗುವ ರೀತಿಯಲ್ಲಿ ಜನಸಾಮಾನ್ಯರ ಮನಗೆಲ್ಲುವ ಕಾರ್ಯ ಮಾಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಆರ್.ಭಗವಾನ್‌ದಾಸ್ ಅವರು ಕರೆ ನೀಡಿದರು.
ಅವರು ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಮಾರಿಕುಪ್ಪಂ ಪೊಲೀಸ್ ಠಾಣೆಯ ಎ.ಎಸ್.ಐ. ಮುನೀರ್‌ಪಾಷ ಅವರು  ಆ.೩೧ ರಂದು ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಏರ್ಪಡಿಸಿದ್ದ, ಬಿಳ್ಕೋಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಎ.ಎಸ್.ಐ. ಮುನೀರ್‌ಪಾಷ ಅವರು ಕಳೆದ ೩೩ ವರ್ಷಗಳ ಕಾಲ ಪೊಲೀಸ್ ಇಲಾಖೆಯ ವಿವಿಧ ಠಾಣೆಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸುವ ಮೂಲಕ ಯಶಸ್ವಿಯಾಗಿರುತ್ತಾರೆ. ಇವರ ಸೇವೆ, ಅನುಭವವು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು.  ನಿವೃತ್ತರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ನಡೆಸುವ ಉದ್ದೇಶ ನಿವೃತ್ತರ ಸೇವಾವಧಿಯ ವಿಶೇಷ ಸಂದರ್ಭಗಳನ್ನು ಮೆಲುಕಾಕುವ ವಿಶೇಷ ಸಂದರ್ಭವಾಗಿದೆ, ಈ ಹೊಸ ದೃಷ್ಠಿಕೋನದ ಮೂಲಕ ನಿವೃತ್ತರ ಕಲ್ಯಾಣ ಕಾರ್ಯಕ್ರಮಗಳಿಗೆ ರೂಪುರೇಷೆಗಳನ್ನು ರೂಪಿಸಿ, ನಿವೃತ್ತರಾದವರ ಮಕ್ಕಳು, ಕುಟುಂಬದವರಿಗೆ ಉತ್ತಮ ಆರೋಗ್ಯ, ಶಿಕ್ಷಣ, ವಿಶೇಷ ಸ್ಥಾನಮಾನಗಳನ್ನು ದೊರಕಿಸಲು ಮುಂದಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಆರ್.ಭಗವಾನ್‌ದಾಸ್ ಅವರು ಕರೆ ನೀಡಿದರು.ನಿವೃತ್ತರಾದ ಎ.ಎಸ್.ಐ. ಮುನೀರ್‌ಪಾಷ ಅವರನ್ನು ಶಾಲು ಹೊದಿಸಿ, ಆತ್ಮಿಯವಾಗಿ ಸನ್ಮಾನಿಸಿ, ಹಣ್ಣುಹಂಪಲು, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ, ಸಹಾಯಕ ಆಡಳಿತಾಧಿಕಾರಿ ವಿ.ವಿಶ್ವನಾಥ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಎಂ.ಡಿ. ಲಕ್ಷ್ಮೀನಾರಾಯಣ, ಎನ್.ಉಮಾಶಂಕರ್, ಎಸ್.ಆರ್.ಜಗದೀಶ್, ಆರ್.ಪಿ.ಐ. ಕೆ.ಆರ್.ರಘು ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ಮೊದಲೀಗೆ ಎಂ.ಸಿ. ಚಾಣುಕ್ಯ ಅವರಿಂದ ಪ್ರಾರ್ಥನೆ, ಸಿಪಿಐ ಜಿ.ಎನ್.ವೆಂಕಟಾಚಲಪತಿ ಅವರಿಂದ ಸ್ವಾಗತ, ಭೀಮಸೇನಾ ಕಾಂಬ್ಳೆ ಅವರಿಂದ ನಿರೂಪಣೆ, ಮಾರಿಕುಪ್ಪಂ ಪಿಎಸ್‌ಐ ಎಲ್.ಆಂಜಪ್ಪ ಅವರಿಂದ ಪ್ರಾಸ್ತಾವಿಕ ಭಾಷಣ, ಬಂಗಾರಪೇಟೆ ಪಿಎಸ್‌ಐ ಸಿ.ರವಿಕುಮಾರ್ ಅವರಿಂದ ವಂದನೆಗಳಾದವು.

31 KGF 01 31 KGF.01
ಚಿತ್ರಶಿರ್ಷಿಕೆ: ೩೧ಕೆಜಿಎಫ್೦೧: ನಿವೃತ್ತ ಎಎಸ್‌ಐ ಮುನೀರ್‌ಪಾಷ ಅವರನ್ನು ಸನ್ಮಾನಿಸಿದ ಎಸ್ಪಿ ಭಗವಾನ್‌ದಾಸ್, ಡಿವೈಎಸ್ಪಿ ಪುಟ್ಟಮಾದಯ್ಯ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s