ದಿನದ ಅಪರಾಧಗಳ ಪಕ್ಷಿನೋಟ 31ನೇ ಆಗಸ್ಟ್ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:30.08.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ:31.08.2015 ರಂದು ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಂಗಪ್ಪ ಬಿನ್ ಮುನಿಯಪ್ಪ, ಬ್ಯಾಟರಾಯನಹಳ್ಳಿ ಗ್ರಾಮ ರವರು ನೀಡಿರುವ ದೂರಿನಲ್ಲಿ,  ದಿನಾಂಕ 30.08.2015 ರಂದು ಬೆಳಗ್ಗೆ 11-30 ಗಂಟೆಗೆ ದೂರುದಾರರ ಅಣ್ಣನ ಮಗನಾದ ರಂಜೀತ್ ಕುಮಾರ್, ಬ್ಯಾಟರಾಯನಹಳ್ಳಿ ಗ್ರಾಮ ರವರು ದ್ವಿಚಕ್ರ ವಾಹನ ಬಜಾಜ್ ಪಲ್ಸರ್  ಸಂಖ್ಯೆ ಕೆ.ಎ 08 ಎಸ್ 3186 ರಲ್ಲಿ ರಾಬರ್ಟ್ ಸನ್ ಪೇಟೆಯಿಂದ ಮನೆಗೆ ಬರಲು ಕುಪ್ಪಂ-ಕೆಜಿಎಫ್ ಮುಖ್ಯ ರಸ್ತೆಯ ಚಾಮರಾಜಪೇಟೆಯ ಕುಮಾರ್ ರವರ ಗ್ಯಾರೇಜ್ ನ ಮುಂಭಾಗದ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿರುವ ಕಬ್ಬಿಣ್ಣದ ವಿದ್ಯತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಂಜೀತ್ ಕುಮಾರ್ ರವರಿಗೆ ತಲೆಯ ಮೇಲೆ ಮತ್ತು ಮುಖದ ಮೇಲೆ ರಕ್ತ ಗಾಯಗಳಾಗಿರುತ್ತೆ.

-ಭದ್ರತಾ ಕಾಯ್ದೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.   ಶ್ರೀ.ವೆಂಕಟಮುನಿಶೆಟ್ಟಿ, ಎ.ಎಸ್.ಐ ಮತ್ತು ಸಿ.ಪಿ.ಸಿ-132 ರವರು ದಿನಾಂಕ: 30.08.2015 ರಂದು ರಾತ್ರಿ ಪಿಚ್ಚರ್ಡ್‌ ರಸ್ತೆ ಕಡೆ ಗಸ್ತು ಮಾಡುತ್ತಿದ್ದಾಗ  3ನೇ ಕ್ರಾಸ್‌ ಕೃಷ್ಣ ಗ್ಯಾರೇಜ್‌ ಬಳಿ  ರಾತ್ರಿ 2.10 ಗಂಟೆಯ ಸಮಯದಲ್ಲಿ ಯಾರೋ ಒಬ್ಬ ಆಸಾಮಿಯು ಬೀದಿ ದೀಪದ ಕತ್ತಲಿನಲ್ಲಿ ಕುಳಿತು ತನ್ನ ಇರುವಿಕೆಯನ್ನು ಮರೆಮಾಚುತ್ತಿದ್ದವನು ಪೊಲೀಸರನ್ನು ಕಂಡು ಸ್ಥಳದಿಂದ ಓಡಲು ಪ್ರಯತ್ನಿಸಿದ್ದು, ಆತನನ್ನು ಹಿಡಿದು  ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಪ್ರವೀಣ್‌ ಬಿನ್ ವೆಂಕಟೇಶ, 20 ವರ್ಷ, ಎಸ್.ಸಿ ಜನಾಂಗ, ಗಾರೆ ಕೆಲಸ, ವಾಸ. ನಂ.73, ಚಾಂಪಿಯನ್‌ ರೀಪ್ಸ್‌, ಎಸ್-ಬ್ಲಾಕ್‌, ಕೆ.ಜಿ.ಎಫ್‌ ಎಂತ ತಿಳಿಸಿದ್ದು. ಸದರಿ ಸ್ಥಳದಲ್ಲಿರಲು ಸಮಂಜಸವಾದ ಉತ್ತರ ನೀಡದ ಕಾರಣ ಈತನು ಕಳುವು ಮಾಡಲು ಹೊಂಚು ಹಾಕುತ್ತಿರಬಹುದೆಂತ ಗುಮಾನಿ ಮೇರೆಗೆ ಆಸಾಮಿಯನ್ನು ಮುಂಜಾಗ್ರತಾ ಕ್ರಮಕ್ಕಾಗಿ ರಾತ್ರಿ 2.45 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಭದ್ರತಾ ಪ್ರಕರಣ ದಾಖಲು ಮಾಡಿರುತ್ತೆ.

-ಅಸ್ವಾಭಾವಿಕ ಮರಣ:  ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s