ದಿನದ ಅಪರಾಧಗಳ ಪಕ್ಷಿನೋಟ 28ನೇ ಆಗಸ್ಟ್ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ   ದಿನಾಂಕ 28.08.2015 ರಂದು ಬೆಳಿಗ್ಗೆ  10.00   ಗಂಟೆಯಿಂದ  ಸಂಜೆ 05.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುಳಮ್ಮ ಕೋಂ ಶ್ರೀರಾಮರೆಡ್ಡಿ, ಕ್ಯಾಸಂಬಳ್ಳ ಗ್ರಾಮ ರವರು ನೀಡಿದ ದೂರಿನಲ್ಲಿ, ಕ್ಯಾಸಂಬಳ್ಳಿಯಲ್ಲಿ ಪಂಚಾಯ್ತಿ ವತಿಯಿಂದ ಟ್ಯಾಂಕರ್ ನಲ್ಲಿ ಪ್ರತಿ ಮನೆಗೆ 20 ಬಿಂದಿಗೆಯಂತೆ ನೀರು ಬಿಡುತ್ತಿದ್ದು,  ದಿನಾಂಕ:25-08-2015 ರಂದು ರಾತ್ರಿ 8-00 ಗಂಟೆಯಲ್ಲಿ ದೂರುದಾರರು 10 ಬಿಂದಿಗೆ ನೀರನ್ನು ಹಿಡಿದುಕೊಂಡಾಗ ಟ್ರಾಕ್ಟರ್ ಚಾಲಕ ಆರೋಪಿ  ಶ್ರೀನಿವಾಸರೆಡ್ಡಿ, ಕ್ಯಾಸಂಬಳ್ಳ ಗ್ರಾಮ ರವರು ಹೊರಟು ಹೋಗಿದ್ದು, ದೂರುದಾರರು ಆರೋಪಿಯನ್ನು ಕೇಳಲಾಗಿ, ಆರೋಪಿಯು ಕೆಟ್ಟ ಮಾತುಗಳಿಂದ ಬೈದಿರುತ್ತಾನೆ. ವಿಚಾರವನ್ನು ತಿಳಿದು ದೂರುದಾರರ ಅಣ್ಣನಾದ ಸದಾಶಿವರೆಡ್ಡಿ ರವರು ಆರೋಪಿಯನ್ನು ಕೇಳಿದಾಗ ಸದಾಶಿವರೆಡ್ಡಿ ರವರನ್ನು ಸಹ ಆರೋಪಿಯು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾನೆ.

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ:  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಾಥ್, ಅರಣ್ಯ ಅಧಿಕಾರಿ ರವರು ನೀಡಿದ ದೂರಿನಲ್ಲಿ,  ದಿನಾಂಕ 28-08-2015 ರಂದು ಬೆಳಿಗೆ  8-30 ಗಂಟೆಯಲ್ಲಿ ದೂರುದಾರರು ಮೂತನೂರು ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದಾಗ, ಬಾದಗುಟ್ಟ ಅರಣ್ಯದಲ್ಲಿ ಸುಮಾರು 60 ರಿಂದ 65 ವರ್ಷ ವಯಸ್ಸುಳ್ಳ ಒಬ್ಬ ಅನಾಮಧೇಯ ಗಂಡಸು (ಗುಂಡು ಮುಖ, ತಿಳಿ ನೀಲಿ ಬಣ್ಣದ ಷರ್ಟು, ಬೂದು ಬಣ್ಣದ ಚಡ್ಡಿ, ಬಿಳಿ ಲುಂಗಿ, ಕತ್ತಿನ ಕೆಳಗೆ ಕಪ್ಪು ಮಚ್ಚೆ) ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s