ದಿನದ ಅಪರಾಧಗಳ ಪಕ್ಷಿನೋಟ 27 ನೇ ಆಗಸ್ಟ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:26.08.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 27.08.2015 ರಂದು ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 02

ರಾಬರ್ಟ್ ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಶಾಂತ್ ಬಿನ್ ಶ್ರೀನಿವಾಸ್, ತೊಂಗಲಕುಪ್ಪ ಗ್ರಾಮ ರವರು ನೀಡಿದ ದೂರಿನಲ್ಲಿ, ದಿನಾಂಕ: 20/08/2015 ರಂದು ಬೆಳಿಗ್ಗೆ  ದೂರುದಾರರು ಶ್ರೀವಿನಾಯಕ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಗೆ ಬಂದು ತರಗತಿಯಲ್ಲಿದ್ದಾಗ, ಆರೋಪಿ ವಿಜ್ಞ್ನೇಶ್ ಎಂಬಾತನು ಅಭಿಷೇಕ್ ರವರ ಪೋನ್ ನಂಬರ್ ನ್ನು ಕೇಳಿದ್ದು, ದೂರುದಾರರು  ಗೊತ್ತಿಲ್ಲವೆಂತ ತಿಳಿಸಿರುತ್ತಾರೆ. ನಂತರ   ದೂರುದಾರರು ಸಂಜೆ ಸುಮಾರು 4.30 ಗಂಟೆಯಲ್ಲಿ ಕಾಲೇಜಿನಿಂದ ಹೊರಗಡೆ ಗೇಟ್ ಬಳಿ ಬಂದಾಗ, ಆರೋಪಿ ವಿಜ್ಞ್ನೇಶ್ ಆತನ ಅಣ್ಣ ಮತ್ತು ಇತರರನ್ನು ಕರೆದುಕೊಂಡು ಬಂದು  ದೂರುದಾರರನ್ನು ಕೆಟ್ಟ ಮಾತುಳಿಂದ ಬೈದು, ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ್ ಬಿನ್ ಲಕ್ಷ್ಮಯ್ಯ, ಗೊಲ್ಲಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ,  ದಿನಾಂಕ 26.08.2015 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ದೂರುದಾರರು ಬಜಾರ್ ರಸ್ತೆಯಿಂದ ಸ್ವಲ್ಪ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ದೂರುದಾರರಿಗೆ ಪರಿಚಯವಿರುವ 2 ನೇ ಬ್ಲಾಕ್ ವಾಸಿ (ಹೆಸರು ವಿಳಾಸ ಗೊತ್ತಿಲ್ಲ) ದೂರುದಾರನ ಬಳಿ ಬಂದು, ಸಾಲವಾಗಿ  ಹಣ ಕೇಳಿದ್ದು ದೂರುದಾರರು ತನ್ನ ಬಳಿ 100 ರೂ ಮಾತ್ರ ಇದ್ದು, ತನಗೆ ಖರ್ಚಿಗೆ ಬೇಕು ಎಂದಾಗ, ಆರೋಪಿಯು ಗಲಾಟೆ ಮಾಡಿ, ಕೆಟ್ಟ ಮಾತುಗಳಿಂದ ಬೈದು, ಚಾಕುವಿನಿಂದ ಹೊಟ್ಟೆಯ ಮೇಲೆ ಹೊಡೆದು ರಕ್ತಗಾಯ ಪಡೆಸಿರುತ್ತಾನೆ.

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ:  ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : 01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಎಸ್.ಸಿ/ಎಸ್.ಟಿ ದೌರ್ಜನ್ಯಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಿನ್ನಪ್ಪ ಬಿನ್ ಮುನಿಯಪ್ಪ, ವಿರುಪಾಕ್ಷಪುರ ಗ್ರಾಮ ರವರು ನೀಡಿದ ದೂರಿನಲ್ಲಿ,  ದಿನಾಂಕ 26.08.2015 ರಂದು ವಿರುಪಾಕ್ಷಪುರದಲ್ಲಿ ಶ್ರೀ ಬ್ಯಾಟರಾಯಸ್ವಾಮಿ ದೇವರ ಉತ್ಸವ ಇದ್ದು, ಮದ್ಯಾಹ್ನ 12.00 ಗಂಟೆಯಲ್ಲಿ ಆರೋಪಿಗಳಾದ ವಡಿವೇಲು, ಪುರುಷೋತ್ತಮ್, ವೆಂಕಟರಾಮ್, ವಿನಯ್ ಕುಮಾರ್‍, ರಾಘವೇಂದ್ರ, ರಾಮಕೃಷ್ಣರೆಡ್ಡಿ ಮತ್ತು ಗೋಪಾಲ್ ದೊಡ್ಡಕಲ್ಲಹಳ್ಳಿ ಗ್ರಾಮದವರು ವಿರುಪಾಕ್ಷಪುರ ಗ್ರಾಮಸ್ಥರಿಗೆ ದೇವರನ್ನು ಬೇಗ ಕೊಡಿ, ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಕೆಂದು ಕೇಳಿದ್ದು, ಅದಕ್ಕೆ ಒಪ್ಪದಿದ್ದಾಗ, ಆರೋಪಿಗಳು  ಬೈದಾಡುತ್ತ ಹೋಗಿ  ಮಧ್ಯಾಹ್ನ ಸುಮಾರು 1.00 ಗಂಟೆಗೆ  ದ್ವಿ ಚಕ್ರ ವಾಹನಗಳಲ್ಲಿ ಬಂದು, ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದು ಅಕ್ರಮ ಕೂಟ ಕಟ್ಟಿಕೊಂಡು ಗ್ರಾಮಸ್ಥರ ಮೇಲೆ ಜಗಳ ಕಾದು, ದೂರುದಾರ ಚಿನ್ನಪ್ಪ, ಶ್ರೀನಿವಾಸ್,  ಶ್ರೀದೇವಿ,  ನಾರಾಯಣಪ್ಪ,  ಶ್ರೀನಿವಾಸ್ ರವರುಗಳಿಗೆ ಸಾಯಿಸುವ ಉದ್ದೇಶದಿಂದ  ಹೊಡೆದು ಗಾಯಗಳನ್ನುಂಟುಮಾಡಿ,   ಗಾಯಾಳುಗಳನ್ನು ಕುರಿತು ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s