ದಿನದ ಅಪರಾಧಗಳ ಪಕ್ಷಿನೋಟ 26ನೇ ಆಗಸ್ಟ್ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:26.08.2015 ರಂದು ಬೆಳಿಗ್ಗೆ  10.00 ಗಂಟೆಯಿಂದ  ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ  ವಿವರಗಳು:-  

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26.08.2015  ರಂದು 11.30 ಗಂಟೆಯಲ್ಲಿ ದೂರುದಾರರಾದ ಶ್ರೀ. ಶ್ರೀನಿವಾಸ್ ರೆಡ್ಡಿ, ಕ್ಯಾಸಂಬಳ್ಳ ಗ್ರಾಮ ರವರು ನೀಡಿದ ದೂರಿನಲ್ಲಿ, ದಿನಾಂಕ 25.08.2015 ರಂದು ರಾತ್ರಿ 9.00  ಗಂಟೆಯಲ್ಲಿ ಪಂಚಾಯ್ತಿವತಿಯಿಂದ ನೀರು ಬಿಡುವ ವಿಚಾರದಲ್ಲಿ ಆರೋಪಿಗಳಾದ ಶ್ರೀರಾಮರೆಡ್ಡಿ, ಮಂಜುಳಮ್ಮ, ಸದಾಶಿವರೆಡ್ಡಿ, ವನಜಮ್ಮ, ನೀಲಮ್ಮ ಮತ್ತು ಸುಬ್ರಮಣಿ ಎಂಬುವರು ಇನ್ನೂ ಹೆಚ್ಚಿಗೆ ನೀರು ಬಿಡಬೇಕೆಂದು ದೂರುದಾರರೊಂದಿಗೆ ಗಲಾಟೆಮಾಡಿ ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಚಾಂಪಿಯನ್ ರೀಫ್ಸ್  ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ (ನಿರ್ದಿಷ್ಟ ದಾವೆ) ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಚಂದ್ರಮೂರ್ತಿ ಬಿನ್ ಮುನಿಸ್ವಾಮಿ, ಟಾಪ್ ಲೈನ್, ಚಾಂಪಿಯನ್ ರೀಫ್ಸ್ ರವರು ನೀಡಿರುವ ದೂರಿನಲ್ಲಿ, ದೂರುದಾರರು ಚಾಂಫಿಯನ್‌ರೀಫ್ಸ್ ಟಾಪ್‌ಲೈನ್ ಪಂಚಾಯತ್ ಮತ್ತು ವೆಲ್ಪೇರ್‍ ಅಸೋಷಿಯೇಶನ್‌ನಲ್ಲಿ ಜನರಲ್ ಸೆಕ್ರೆಟರಿ ಆಗಿದ್ದು ಲೈನಿನಲ್ಲಿ ಅಸೋಷಿಯೇಶನ್‌ ಪರವಾಗಿ ಸಾಮಾಜಿಕ ಮತ್ತು ಧಾರ್ಮಿಕ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಹೀಗಿರುವಾಗ ಆರೋಪಿಗಳು ವಿನಾಃಕಾರಣ ಅಸೋಷಿಯೇಶನ್‌ನಲ್ಲಿ ತಲೆಹಾಕಿ ದಿನಾಂಕ: 15-08-2014 ರಂದು ಅಸೋಷಿಯೇಶನ್‌ ಕಟ್ಟಡ ಕಾಂಪೌಂಡ್‌ನಲ್ಲಿ ಅತಿಕ್ರಮ ಪ್ರವೇಶ ಮಾಡಿ ದೂರುದಾರರೊಂದಿಗೆ ಜಗಳ ತೆಗೆದು ಕೆಟ್ಟಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ ಅಸೋಷಿಯೇಶನ್‌ ಕಟ್ಟಡ ಕಾಂಪೌಂಡ್‌ ಗೋಡೆ ಮತ್ತು ಬಾಗಿಲನ್ನು ಹೊಡೆದು ಸುಮಾರು 05,000/- ರೂಗಳಷ್ಟು ನಷ್ಟ ಉಂಟು ಮಾಡಿರುತ್ತಾರೆ.

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಕಲ್ಯಾಣಿ ಕೋಂ ಶ್ರೀನಿವಾಸ್, 35 ವರ್ಷ, ದೇಶಹಳ್ಳಿ, ಬಂಗಾರಪೇಟೆ  ರವರು ನೀಡಿದ ದೂರಿನಲ್ಲಿ, ದೂರುದಾರರು ದಿನಾಂಕ 25.08.2015 ರಂದು ಸಂಜೆ 5.15 ಗಂಟೆಯಲ್ಲಿ ಕೆ.ಜಿ.ಎಫ್ ನಿಂದ ಬಂಗಾರಪೇಟೆಗೆ ಕೆ.ಎಸ್.ಆರ್‍.ಟಿ.ಸಿ ಬಸ್ ನಂ. ಕೆ.ಎ07 ಎಫ್ 1533  ರಲ್ಲಿ ಬಂದು,  ದೇಶಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುತ್ತಿರುವಾಗ ಬಸ್ ನ ಚಾಲಕನು ಬಸನ್ನು ಚಲಾಯಿಸಿದ್ದರಿಂದ ಕಲ್ಯಾಣಿ ರವರು ಕೆಳಗೆ ಬಿದ್ದು ತಲೆಗೆ ಮತ್ತು ಭುಜಕ್ಕೆ ರಕ್ತಗಾಯಗಳಾಗಿರುತ್ತೆ.

-ಭದ್ರತಾ ಕಾಯ್ದೆ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಅಸ್ವಾಭಾವಿಕ ಮರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿಶಾಮಿ ಬಿನ್ ಮ್ಯಾಕಲಪ್ಪ, ನಾಗಶೆಟ್ಟಿಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ,  ದೂರುದಾರರ ಮಗಳಾದ ಶ್ರೀಮತಿ ಸುಜಾತ, 28 ವರ್ಷ ರವರು ಸುಮಾರು ವರ್ಷಗಳಿಂದ ಶೀತದ ಖಾಯಿಲೆ ಇದ್ದು, ಗುಣಮುಖವಾಗದೇ ಇದ್ದುದ್ದರಿಂದ ಜೀನವದಲ್ಲಿ ಜಿಗುಪ್ಸೆಗೊಂಡು ದಿನಾಂಕ 23.08.2015  ರಂದು ಮದ್ಯಾಹ್ನ 1.30  ಗಂಟೆಯಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದು, ತಕ್ಷಣ ನೋಡಿ ಇವರನ್ನು ಆರ್‍.ಎಲ್ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25.08.2015  ರಂದು ರಾತ್ರಿ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s