ದಿನದ ಅಪರಾಧಗಳ ಪಕ್ಷಿ ನೋಟ 23 ನೇ ಆಗಸ್ಟ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:22.08.2015 ರಂದು ಸಂಜೆ 05.00   ಗಂಟೆಯಿಂದ ದಿನಾಂಕ 23.08.2015 ರಂದು ಬೆಳಿಗ್ಗೆ 10.00 ಟೆಯವರೆಗೆ ದಾಖಲಾಗಿರುವ ಪ್ರಕರಣಗಳ  ವಿವರಗಳು  

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.08.2015 ರಂದು ದೂರುದಾರರಾದ ಶ್ರೀಮತಿ ಭಾರತಮ್ಮ ಕೋಂ  ಚಕ್ರವರ್ತಿ,  ಬೂದಿಕೋಟೆ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ: 20.01.1992 ರಂದು ಪಿರ್ಯಾದಿಯು  ಚಂಕ್ರವರ್ತಿ ಎಂಬುವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ  ಪಿರ್ಯಾದಿಗೆ  2000- ರೂ ಗಳಂತೆ ಮತ್ತು ಮಗಳಾದ ಸುಭಾಷಿಣಿ ವರರಿಗೆ 1000- ರೂ ವಿನಂತೆ ಜೀವನಾಂಶವನ್ನು  ನೀಡಬೇಕೆಂದು  ಕೇಸು ಹಾಕಿಕೊಂಡಿರುತ್ತಾರೆ. ದೂರುದಾರರ  ಗಂಡ ಚಕ್ರವರ್ತಿ ರವರು  ದಿನಾಂಕ 11.05.2015 ರಂದು  ಹೃದಯಘಾತದಿಂದ  ಮೃತಪಟ್ಟಿದ್ದು, ಮೃತದೇಹವನ್ನು  ನೋಡಲು ಪಿರ್ಯಾದಿ ಮತ್ತು ಪಿರ್ಯಾದಿ ಮಗಳು ಸುಭಾಷಿಣಿ ಯೊಂದಿಗೆ  ಮನೆಯ ಹತ್ತಿರ ಹೋದಾಗ ಆರೋಪಿಗಳಾದ  ರಮೇಶ್‌ ಬಾಬು, ಚಂದ್ರಶೇಖರ್‌,  ಸಂತೋಷ್‌ ಕುಮಾರ್‌ , ಲಕ್ಷ್ಮಿ ರವರು ಕೆಟ್ಟ ಮಾತುಗಳಿಂದ ಬೈದು  ಮತ್ತು ದಿನಾಂಕ 12.05.2015 ರಂದು ದಫನ್  ಮಾಡುವ  ವೇಳೆಯಲ್ಲಿ  ದೂರುದಾರರ ಮತ್ತು ಅವರ ಮಗಳು ಹೋಗಿದ್ದಾಗ ಅರೋಪಿಗಳು ಕಾಲುಗಳಿಂದ ಒದ್ದು ಕೆಟ್ಟ ಮಾತುಗಳಿಂದ ಬೈದು ದೊಣ್ಣೆಗಳಿಂದ  ಹೊಡೆದು  ರಕ್ತಗಾಯಗಳುಂಟು ಮಾಡಿರುತ್ತಾರೆಂದು,  ದಿನಾಂಕ 22.08.2015 ರಂದು ನ್ಯಾಯಾಲಯದ ಮೂಲಕ ದೂರು ನೀಡಿರುತ್ತಾರೆ.

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.08.2015 ರಂದು ದೂರುದಾರರಾದ  ಶ್ರೀ. ರಘು ಬಿನ್‌ ಮುನಿಯಪ್ಪ, ದೊಡ್ಡೂರು ಕರಪನಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ: 20.08.2015 ರಂದು ರಾತ್ರಿ ಸುಮಾರು 7-30 ಗಂಟೆಯಿಂದ 8-00 ಗಂಟೆಯ ಮದ್ಯೆ ದೂರುದಾರರು ತನ್ನ ತೋಟದಲ್ಲಿ ಕೆಲಸ ಮುಗಿಸಿಕೊಂಡು ಮನೆಯ ಬಳಿ ಹೋಗುವಾಗ ಆತನ ಹಿಂದೆ ಅವರ ಟ್ರಾಕ್ಟರ್ ಬರುತ್ತಿದ್ದು, ದೂರುದಾರರು ಆರೋಪಿಗಳ ಮನೆಯ ಪಕ್ಕದಲ್ಲಿರುವ ಕಲ್ಲುಗಳನ್ನು ಪಕ್ಕಕ್ಕೆ ತೆಗೆಯುವಂತೆ ಹೇಳಿದ್ದರಿಂದ ಆರೋಪಿಗಳಾದ ವೆಂಕಟಸ್ವಾಮಿ, ವೆಂಕಟಾಚಲಪತಿ,  ಸತ್ತೀಶ್ ರವರು  ಸುತ್ತಿಗೆಯಿಂದ ದೂರುದಾರರ ತಲೆಗೆ ಹೊಡೆದು ರಕ್ತ ಗಾಯಪಡಿಸಿ ಕೆಟ್ಟ ಮಾತುಗಳಿಂದ ಬೈದು ದೊಣ್ಣೆಗಳಿಂದ ಹೊಡೆದು ರಕ್ತ  ಗಾಯ ಪಡಿಸಿರುತ್ತಾರೆ.

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :  ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s