ದಿನದ ಅಪರಾಧಗಳ ಪಕ್ಷಿನೋಟ 22ನೇ ಆಗಸ್ಟ್ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:22.08.2015 ರಂದು ಬೆಳಿಗ್ಗೆ  10.00 ಗಂಟೆಯಿಂದ  ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ  ವಿವರಗಳು:-  

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :02

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.08.2015 ರಂದು ದೂರುದಾರರಾದ ಶ್ರೀಮತಿ ಬೃದಾವತಿ ಕೋಂ  ಶ್ರೀನಿವಾಸನ್‌,  ನಂ 30, ವಿದ್ಯಾ ಶಾಲೆ, ಬೆಮೆಲ್‌ ನಗರ ರವರು ನೀಡಿದ ದೂರಿನಲ್ಲಿ ದಿನಾಂಕ 15.09.2014 ರಂದು ದೂರುದಾರರಾದ ಶ್ರೀಮತಿ ಬೃದಾವತಿ ರವರನ್ನು  ಆರೋಪಿ ಶ್ರೀನಿವಾಸ ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಮದುವೆಯ ಸಮಯದಲ್ಲಿ ದೂರುದಾರರ ತವರು ಮನೆಯಿಂದ ಆರೋಪಿ ರವರಿಗೆ  25 ಸವರನ್ ಬಂಗಾರದ ವಡವೆಗಳು, 80 ಗ್ರಾಂ ಬೆಳ್ಳಿ ,  ಒಂದು ಮಂಚ, ಅಲ್ಮೇರಾ, ಅಕ್ಟೀವ್ ಸ್ಕೂಟರ್, ಮತ್ತು ನಗದು ಹಣ 2,00,000/- ರೂಗಳು ಕೊಟ್ಟಿರುತ್ತಾರೆ. ಮದುವೆ ನಂತರ ದೂರುದಾರಳು ಗಂಡನೊಂದಿಗೆ ಯಶವಂತಪುರದಲ್ಲಿ ವಾಸವಿದ್ದು, ಮದುವೆಯಾದ ಒಂದು ವಾರದ ನಂತರ ಆರೋಪಿ ದೂರುದಾರರನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೆಟ್ಟಮಾತುಗಳಿಂದ ಬೈದು ರಾತ್ರಿ ವೇಳೆ ಪ್ರತಿದಿನ ಮದ್ಯಪಾನ ಸೇವಿಸಿ, ಸಿಗರೇಟ್ ನಿಂದ ದೂರುದಾರರ ಮೈಮೇಲೆ ಸುಟ್ಟು ಗಾಯಪಡಿಸಿರುತ್ತಾರೆ. ಆರೋಪಿಗಳಾದ ಶಾಂತಕುಮಾರಿ, ರಾಮಕೃಷ್ಣ ರವರು  ದೂರುದಾರಳು  ಮನೆಯಿಂದ ಹೋದರೆ, ತನ್ನ ಮಗನಿಗೆ ಮತ್ತೊಂದು ಮದುವೆ ಮಾಡುತ್ತೇವೆ, ಅವರು ಹೆಚ್ಚು ವರದಕ್ಷಣೆ ನೀಡುತ್ತಾರೆಂದು ಹೇಳಿರುತ್ತಾರೆ.  ನಂತರ ದೂರುದಾರಳ ತವರು ಮನೆಯಿಂದ 50,000/- ರೂ ಸಾಲತೆಗೆದುಕೊಂಡು  ಬೆಂಗಳೂರಿನ ತನ್ನ ಮನೆಗೆ ಕರೆದುಕೊಂಡು ಹೋಗಿ, ಆರೋಪಿ ಶ್ರೀನಿವಾಸ, ಶಾಂತಕುಮಾರಿ, ರಾಮಕೃಷ್ಣ, ಮಹೇಶ್ ಮತ್ತು ಸುಮಿ  ರವರು  ಹೊಡೆದು ಕಿರುಕುಳ ನೀಡಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.08.2015 ರಂದು ದೂರುದಾರರಾದ ಕುಮಾರಿ ನಂದಿನಿ ಬಿನ್ ಷಣ್ಮುಗಂ, ಮಸ್ಕಂ ರವರು ನೀಡಿದ ದೂರಿನಲ್ಲಿ ದೂರುದಾರರಿಗೆ ಮತ್ತು ಆರೋಪಿ ರಾಜು ಬಿನ್ ಮಣಿ, ಪಾರಾಂಡಹಳ್ಳಿ ಗ್ರಾಮ ರವರಿಗೆ ದಿನಾಂಕ 21.06.2015 ರಂದು ಮದುವೆಗೆ ನಿಶ್ಚಿತಾರ್ಥವಾಗಿದ್ದು, ಈ ಸಮಯದಲ್ಲಿ ಆರೋಪಿ ರಾಜು ರವರಿಗೆ ಒಂದು ಬಂಗಾರದ ಚೈನು,ಒಂದು ಬ್ರಾಸ್ ಲೈಟ್ ,ಒಂದು ಉಂಗುರ ಹಾಗೂ ಕೈಗಡಿಯಾರವನ್ನು ನೀಡಿದ್ದು, ದಿನಾಂಕ 20.08.2015 ರಂದು ಮದುವೆ ಹಾಗೂ ದಿನಾಂಕ 23.08.2015 ರಂದು ರಾಬರ್ಟ್‌‌ಸನ್‌ಪೇಟೆ ವಾಸವಿ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಹಮ್ಮಿಕೊಂಡಿರುವುದಾಗಿ ಲಗ್ನ ಪತ್ರಿಕೆಗಳನ್ನು ಮುದ್ರಿಸಿ ಸಂಬಂದಿಕರಿಗೆ ಹಂಚಿದ್ದು, ನಂತರ ಆರೋಪಿಗಳಾದ ರಾಜು, ಮಣಿ, ವಿಜಯಲಕ್ಷ್ಮೀ ಮತ್ತು ರಮೇಶ್  ರವರು 5 ಲಕ್ಷ ವರದಕ್ಷಿಣೆ ಹಣವನ್ನು ನಿಡುವಂತೆ ಒತ್ತಾಯಿಸಿ, ಇಲ್ಲವಾದಲ್ಲಿ ಮದುವೆ ಮಾಡಿಕೊಳ್ಳುವುದಿಲ್ಲವೆಂತ  ಬೆದರಿಕೆ ಹಾಕಿದ್ದು, ವರದಕ್ಷಿಣೆ ಕೊಡದೆ ಇದ್ದುದ್ದರಿಂದ ಮದುವೆಗೆ ನಿರಾಕರಿಸಿದ್ದು, ಮದುವೆಗೆ ಈಗಾಗಲೇ ಕಲ್ಯಾಣ ಮಂಟಪ, ಕ್ಯಾಂಟರಿಂಗ್ ಹಾಗೂ ಡೆಕೋರೇಶನ್ ಗೆ 2 ಲಕ್ಷ ರೂ ಮುಂಗಡವಾಗಿ ನೀಡಿದ್ದು, ಆರೋಪಿಗಳು ಮದುವೆ ಮಾಡಿಕೊಳ್ಳದೆ ವರದಕ್ಷಣೆಗೆ ಒತ್ತಾಯಿಸಿ ಮೋಸ ಮಾಡಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :  ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s